ದೌರ್ಜನ್ಯ: ರಕ್ಷಣೆ ಒದಗಿಸಲು ಆಗ್ರಹ
ಕನ್ನಡಪ್ರಭ ವಾರ್ತೆ, ಕಂಪ್ಲಿ, ಡಿ. 28
ಪಟ್ಟಣದ ನಂ. 10 ಮುದ್ದಾಪುರ ಗ್ರಾಮದ ಉಪ್ಪಾರ ಸಮಾಜದವರ ಮೇಲೆ ಪದೇ ಪದೇ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮತ್ತು ಈ ಗ್ರಾಮದ ಉಪ್ಪಾರ ಸಮಾಜದವರಿಗೆ ಸರ್ಕಾರ ರಕ್ಷಣೆ ಕೊಡಬೇಕೆಂದು ಒತ್ತಾಯಿಸಿ ಇಲ್ಲಿನ ಭಗೀರಥ ಉಪ್ಪಾರ ಸಮಾಜದವರ ಹೋರಾಟ ಸಮಿತಿ ಅವರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಡಾ. ರಾಜ್ಕುಮಾರ್ ಮುಖ್ಯ ರಸ್ತೆ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದ ಹೋರಾಟಗಾರರು, ಕಂಪ್ಲಿ ಫಿರ್ಕಾದ ನಂ. 10 ಮುದ್ದಾಪುರ ಗ್ರಾಮದ ಉಪ್ಪಾರ ವೆಂಕಟೇಶ ಎನ್ನುವವರ ಮೇಲೆ ಅದೇ ಗ್ರಾಮದ ಗ್ರಾಪಂ ಅಧ್ಯಕ್ಷ ಬಳ್ಳಾರಿ ಮಾರುತಿ ಮತ್ತು ಸಂಗಡಿಗರು ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವೆಂಕಟೇಶನು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದು, ಇನ್ನೂ ಕೋಮಾಸ್ಥಿತಿಯಲ್ಲಿದ್ದಾನೆ. ಪೊಲೀಸ್ ಇಲಾಖೆ ಅಧಿಕಾರಿಗಳು ಬಳ್ಳಾರಿ ಮಾರುತಿಯನ್ನು ಕೂಡಲೆ ಬಂಧಿಸಬೇಕು. ಗ್ರಾಮದ ಉಪ್ಪಾರ ಮಾರೆಮ್ಮನ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಮನವಿ: ಭಗೀರಥ ಉಪ್ಪಾರ ಸಮಾಜ ಹೋರಾಟ ಸಮಿತಿ ಅಧ್ಯಕ್ಷ ಸಿ. ರಾಮಾಂಜಿನೇಯ, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಉಪ ತಹಸಿಲ್ದಾರ್ ಕೆ. ಬಾಲಪ್ಪ ಅವರ ಮೂಲಕ ಬಳ್ಳಾರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸ್ಪಷ್ಟನೆ: ಆರೋಪಿಯಾಗಿರುವ ನಂ. 10 ಮುದ್ದಾಪುರ ಗ್ರಾಪಂ ಅಧ್ಯಕ್ಷ ಬಳ್ಳಾರಿ ಮಾರುತಿ ಅವರನ್ನು ಡಿ. 26ರ ಸಂಜೆ ಬಂಧಿಸಿ, ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದೇವೆ ಎಂದು ಪಿಎಸ್ಐ ಡಿ. ಹುಲುಗಪ್ಪ ಸ್ಪಷ್ಟನೆ ನೀಡಿದರು. ಸಿಪಿಐ ಆರ್. ಹನುಮಂತಪ್ಪ, ಕ್ರೈಂ ಪಿಎಸ್ಐ ಎಚ್. ದೊಡ್ಡಣ್ಣ, ಹಂಪಿ ಪಿಎಸ್ಐ ವಿ. ಶಿವಪ್ರಸಾದ್, ಕಮಲಾಪುರ ಪಿಎಸ್ಐ ವೈ.ಎಸ್. ಹನುಮಂತಪ್ಪ ಸಿಬ್ಬಂದಿ ಬಿಗಿಬಂದೋಬಸ್ತ್ ಒದಗಿಸಿದ್ದರು.
ಪ್ರತಿಭಟನೆಯಲ್ಲಿ ಭಗೀರಥ ಉಪ್ಪಾರ ಸಮಾಜದವರ ಹೋರಾಟ ಸಮಿತಿ ಗೌರವಾಧ್ಯಕ್ಷ ಮತ್ತು ಸಿಂಧನೂರು ಪುರಸಭೆ ಸದಸ್ಯ ಕೆ. ಮರಿಯಪ್ಪ, ಕಾರ್ಯದರ್ಶಿ ಮತ್ತು ಕೊಪ್ಪಳ ಜಿಲ್ಲಾಧ್ಯಕ್ಷ ಮರ್ದಾನಪ್ಪ ಬಿಸನಹಳ್ಳಿ, ಭಗೀರಥ ಉಪ್ಪಾರ ಸಮಾಜದ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಉಪ್ಪಾರ್ ಹುಬ್ಬಳ್ಳಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ವೆಂಕೋಬ ವಕೀಲ, ಕಂಪ್ಲಿ ಫಿರ್ಕಾ ಅಧ್ಯಕ್ಷ ಯು. ರಾಮದಾಸ್, ನಂ. 10 ಮುದ್ದಾಪುರ ಅಧ್ಯಕ್ಷ ಯು. ದೊಡ್ಡಬಸಪ್ಪ, ಜನವಾದಿ ಮಹಿಳಾ ಸಂಘಟನೆ ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷೆ ಕೆ. ನಾಗರತ್ನಮ್ಮ, ಯು. ಲಕ್ಷ್ಮಿ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಮೂರ್ತಿ, ಕೊಪ್ಪಳ ತಾಪಂ ಸದಸ್ಯ ನಾಗರಾಜ ಚಳ್ಳೊಳ್ಳಿ, ಹೊಸಪೇಟೆ ತಾಲೂಕು ಅಧ್ಯಕ್ಷ ಅಶೋಕಪ್ಪ, ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷ ಹನುಮಂತಪ್ಪ, ಕೊಪ್ಪಳ ತಾಲೂಕು ಅಧ್ಯಕ್ಷ ಕನಕಪ್ಪ, ಕಾಂಗ್ರೆಸ್ ಹಿಂದುಳಿದ ವರ್ಗದ ಕೊಪ್ಪಳ ಜಿಲ್ಲಾ ಉಪಾಧ್ಯಕ್ಷ ಶಿವಣ್ಣ, ಕಾಂಗ್ರೆಸ್ ಎಸ್ಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ. ಬೆಲ್ಲದ್, ಗಂಗಾವತಿ ಅಮರಜ್ಯೋತಿ ನರಸಪ್ಪ, ಶಿವಣ್ಣ ಚಳ್ಳಕೆರೆ, ಡಿ. ದಾನಪ್ಪ, ವೈ. ರಾಮಲಿಂಗಪ್ಪ, ಬಳ್ಳಾರಿ ಚಂದ್ರಪ್ಪ, ಬಿ. ಶ್ರೀನಿವಾಸ, ಹುಣಿಸಿಮರದ ರಾಮಣ್ಣ, ಭೀಮಪ್ಪ ಉಪ್ಪಾರಹಳ್ಳಿ, ಮಹೇಶ ಸಾಗರ, ಹುಲಿಗಿ ಯಮನೂರಪ್ಪ, ಮುನಿರಾಬಾದ್ ಯು. ತಿಪ್ಪೇಸ್ವಾಮಿ, ಸಂಡೂರು ಯುವ ಮುಖಂಡ ಎಂ.ವಿ. ನಾಗರಾಜ, ಬಳ್ಳಾರಿ, ಕೊಪ್ಪಳ, ರಾಯಚೂರು ಹಾಗೂ ಚಿತ್ರದುರ್ಗ ಜಿಲ್ಲೆಗಳ ಉಪ್ಪಾರ ಸಮಾಜದ ಮುಖಂಡರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

