ಬಳ್ಳಾರಿ

ಬೆಂಗಳೂರು ರಸ್ತೆಗೆ ನಟ ಡಾ. ವಿಷ್ಣುವರ್ಧನ್ ಹೆಸರಿಡಿ

Published On :

ಬಳ್ಳಾರಿ: ಸ್ಥಳೀಯ ಬೆಂಗಳೂರು ರಸ್ತೆಗೆ ಕನ್ನಡ ಚಿತ್ರರಂಗದ ಖ್ಯಾತ ನಟ ದಿ. ಡಾ. ವಿಷ್ಣುವರ್ಧನ್‌ರ ಹೆಸರನ್ನು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿ, ನವ ಕರ್ನಾಟಕ ನಿರ್ಮಾಣ ವೇದಿಕೆ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು. ಕನ್ನಡ ಚಲನಚಿತ್ರ ರಂಗಕ್ಕೆ ಸಾಹಸಸಿಂಹ, ಮೈಸೂರು ರತ್ನ ದಿವಂಗತ ಡಾ. ವಿಷ್ಣುವರ್ಧನ್‌ರ ಕೊಡುಗೆ ಅಪಾರವಾಗಿದೆ. ಇಡೀ ಕುಟುಂಬದವರೆಲ್ಲರೂ ಕುಳಿತು ನೋಡುವಂತಹ ಉತ್ತಮ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ವಂಶವೃಕ್ಷ ಚಲನಚಿತ್ರದಿಂದ ಸಿನಿಮಾರಂಗ ಪ್ರವೇಶಿಸಿದ ಡಾ. ವಿಷ್ಣು ನಾಗರಹಾವು, ಮುತ್ತಿನಹಾರ, ಯಜಮಾನ, ಸಿಂಹಾದ್ರಿಯ ಸಿಂಹ ಸೇರಿ ಹಲವು ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿದರು. ವಿಷ್ಣು ಅವರ ಆದರ್ಶ, ಸರಳ ಜೀವನ, ನಟನೆ ಇಂದಿಗೂ 6 ಕೋಟಿ ಕನ್ನಡಿಗರ ಮನದಲ್ಲಿದೆ. ಈಗಾಗಲೇ ಬಳ್ಳಾರಿಯ ಕುವೆಂಪು ನಗರದಲ್ಲಿ ಡಾ. ವಿಷ್ಣುವರ್ಧನ್‌ರ ಸ್ಮರಣಾರ್ಥ ಉದ್ಯಾನವನ್ನು ನಿರ್ಮಿಸಲಾಗಿದೆ. ಅದರಂತೆ ಸ್ಥಳೀಯ ಬೆಂಗಳೂರು ರಸ್ತೆಗೆ ಡಾ. ವಿಷ್ಣು ಅವರ ಹೆಸರು ನಾಮಕರಣ ಮಾಡಬೇಕೆಂಬುದು ಎಲ್ಲ ಕನ್ನಡ ಅಭಿಮಾನಿಗಳ ಹಾಗೂ ನವಕರ್ನಾಟಕ ನಿರ್ಮಾಣ ವೇದಿಕೆ ಜಿಲ್ಲಾ ಘಟಕದ ಒತ್ತಾಯವಾಗಿದೆ ಎಂದು ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ. ಪಿ. ಶೇಖರ್, ಕೆ. ಕುಪ್ಪುಸ್ವಾಮಿ, ಎಂ. ವಿಶ್ವನಾಥ, ಬಿ. ದಿಲೀಪ್‌ಕುಮಾರ್, ಸುರೇಶ್, ಕೃಷ್ಣಮೂರ್ತಿ, ಕರ್ಣ, ಮಾಣಿಕ್ಯಂ, ಧನರಾಜ್, ಗೋವಿಂದಸ್ವಾಮಿ, ರವಿಕುಮಾರ್, ಉದಯ್‌ಕುಮಾರ್, ರಾಘವೇಂದ್ರ, ರಾಜೇಶ್, ಮನೋಜ್, ಅಮರ್, ಮತ್ತಿತರರು ಇದ್ದರು.

ಚಿತ್ರರಂಗಕ್ಕೆ ಡಾ. ವಿಷ್ಣು ಕೊಡುಗೆ ಅಪಾರ
ಬಳ್ಳಾರಿ: ಕನ್ನಡ ಚಲನಚಿತ್ರ ರಂಗಕ್ಕೆ ಖ್ಯಾತ ಚಲನಚಿತ್ರ ನಟ ಡಾ. ವಿಷ್ಣುವರ್ಧನ್‌ರ ಕೊಡುಗೆ ಅಪಾರ ಎಂದು ವಿಷ್ಣುಸೇನಾ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಕುಂದಾಪುರ ನಾಗರಾಜ ಅಭಿಪ್ರಾಯಪಟ್ಟರು.
ಸ್ಥಳೀಯ ಕುವೆಂಪು ನಗರದ ಉದ್ಯಾನದಲ್ಲಿ ಸೋಮವಾರ ಬಳ್ಳಾರಿಯ ವಿಷ್ಣುಸೇನಾ ಸಮಿತಿಯಿಂದ ಡಾ. ವಿಷ್ಣುವರ್ಧನರ ನಾಲ್ಕನೇ ಪುಣ್ಯತಿಥಿ ನಿಮಿತ್ತ ವಿಷ್ಣು ಪುತ್ಥಳಿಗೆ ಪುಷ್ಪಮಾಲೆ ಹಾಕುವುದರ ಮೂಲಕ ನಮನ ಸಲ್ಲಿಸಿ ಅವರು ಮಾತನಾಡಿದರು.
ವಂಶವೃಕ್ಷ ಚಲನಚಿತ್ರದಿಂದ ಸಿನಿಮಾರಂಗ ಪ್ರವೇಶಿಸಿದ ಡಾ. ವಿಷ್ಣು ನಾಗರಹಾವು, ಮುತ್ತಿನಹಾರ, ಯಜಮಾನ, ಸಿಂಹಾದ್ರಿಯ ಸಿಂಹ ಸೇರಿ ಹಲವು ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿದರು. ವಿಷ್ಣು ಅವರ ಆದರ್ಶ, ಸರಳ ಜೀವನ, ಅದ್ಭುತ ನಟನೆ ಇಂದಿಗೂ 6 ಕೋಟಿ ಕನ್ನಡಿಗರ ಮನದಲ್ಲಿದೆ ಎಂದರು.
ಕನ್ನಡಕ್ರಾಂತಿ ದಳದ ಜಿಲ್ಲಾ ಘಟಕದ ಅಧ್ಯಕ್ಷ ದರೂರು ಶಾಂತನಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ವೈ. ಪ್ರತಾಪ ರೆಡ್ಡಿ, ಮುಖಂಡರಾದ ದೇಸಾಯಿ ಷಡಕ್ಷರಪ್ಪ, ಯು. ಹನುಮೇಶ್, ಕರವೇ ನಗರಾಧ್ಯಕ್ಷ ನಾಗರಾಜ, ಕೊಳಗಲ್ ಶಿವರಾಮ, ಸಂಗನಕಲ್ ರಂಜಾನ್ ಬಾಷಾ, ಬಿಜೆಪಿ ನಗರಾಧ್ಯಕ್ಷ ವೇಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಸುಮಾರೆಡ್ಡಿ, ಮಲ್ಲಿಕಾರ್ಜುನ, ಕೆ.ಆರ್. ಮಲ್ಲೇಶ, ವಿಶ್ವನಾಥಸ್ವಾಮಿ ಹಾವಿನಾಳ್, ಕೋಳೂರು ಗಾದಿಲಿಂಗ, ಪಿ. ಬಾಷಾ, ಕೃಷ್ಣನಾಯಕ್, ಎಸ್. ನಾಗರಾಜ, ಹರಗಿನಡೋಣಿ ಹೊನ್ನೂರಸ್ವಾಮಿ, ಎಸ್.ಎಂ. ವೀರೇಶ ಸಂಗನಕಲ್, ಲಾರಿ ಮಾಲೀಕರಾದ ಪವನ್, ರಾಶಿರಾವ್ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.