ಕೋಚಗೆ ತವರಲ್ಲಿ ಆತ್ಮೀಯ ಸ್ವಾಗತ, ಸನ್ಮಾನ
ಕೂಡ್ಲಿಗಿ: ಬೆಂಗಳೂರಿನಿಂದ ಬಿಜಾಪುರದ ಸಾಹಿತ್ಯ ಸಮ್ಮೇಳನದ ಸಾರಥ್ಯವಹಿಸಲು ಹೋಗುವಾಗ ದಾರಿ ಮಧ್ಯೆಯೇ ಬರುವ ಆಲೂರು ಹಾಗೂ ಕಾನಾಮಡಗು ಮಠಕ್ಕೆ ಗುರುವಾರ ಸಂಜೆ ಕೋ. ಚನ್ನಬಸಪ್ಪ 3 ತಾಸಿಗೂ ಹೆಚ್ಚು ಕಾಲ ಭೇಟಿ ನೀಡಿ, ತವರಿನ ಜನತೆಯ ಕುಶಲೋಪರಿ ವಿಚಾರಿಸಿದರು.
ಆಲೂರು ಗ್ರಾಮದ ಶಾಲೆಯಲ್ಲಿ ಕೋಚ ಅವರಿಗೆ ಗ್ರಾಮಸ್ಥರು ಹಾಗೂ ಶಾಲೆ ವತಿಯಿಂದ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಬಳಿಕ ಕಾನಾಮಡಗು ಮಠದ ಆರಾಧ್ಯ ಧೈವ ಶರಣಾರ್ಯರ ದರ್ಶನ ಪಡೆದು, ಮಠದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಶರಣಾರ್ಯರ ದಾಸೋಹ ಮಠದ ಹಿರಿಮೆ, ಮಹಿಮೆ ನನ್ನ ವಿದ್ಯಾಭ್ಯಾಸಕ್ಕೆ ಮೆಟ್ಟಿಲಾಯಿತು. ಯಾರು ಎಷ್ಟು ಸಾರಿ ಇಲ್ಲಿನ ಮೆಟ್ಟಿಲು ಹತ್ತಿದ್ದಾರೋ ಗೊತ್ತಿಲ್ಲ. ನಾನು ಹುಟ್ಟಿನಿಂದಲೂ ಈ ಮಠದಲ್ಲಿ ಬೆಳೆದು, ಅಕ್ಷರ ಕಲಿತವನು. ಉಸಿರಿರುವ ತನಕ ಈ ಮಠವನ್ನು ಮರೆಯಲ್ಲ ಎಂದರು. ಗ್ರಾಮದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮೂರಿನ ಪುತ್ರನಿಗೆ ಅಭಿನಂದನೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

