ವೆಂಕಟೇಶ್ವರ ಜಾತ್ರೋತ್ಸವ: ಸುರೇಶ್ ಪೈಲ್ವಾನ್ಗೆ ಪ್ರಶಸ್ತಿ
ಹಗರಿಬೊಮ್ಮನಹಳ್ಳಿ: ಹಂಪಿ ಕಿಶೋರ ಪ್ರಶಸ್ತಿ ವಿಜೇತ ಹರಪನಹಳ್ಳಿಯ ಕುಸ್ತಿಪಟು ಸುರೇಶ್ ಈ ಬಾರಿಯ ನಾಣಿಕೆರಿ ಕುಸ್ತಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಪಟ್ಟಣದ ರಾಮನಗರದ ಶ್ರೀ ವೆಂಕಟೇಶ್ವರ ಸ್ವಾಮಿಯ 56ನೇ ವರ್ಷದ ರಥೋತ್ಸವದ ಅಂಗವಾಗಿ ಭಾನುವಾರ ಸಂಜೆ ಪಟ್ಟಣದ ರಾಮನಗರದ ಗಂ.ಭೀ.ಸರ್ಕಾರಿ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಅತ್ಯಂತ ತುರುಸಿನ ಹಾಗೂ ರೋಚಕವಾಗಿ ಜರುಗಿದ ಅಂತಿಮ ಪಂದ್ಯದಲ್ಲಿ ಧಾರವಾಡದ ಲಕ್ಕುಂಡಿ ರಮೇಶನನ್ನು ಸೋಲಿಸಿ ಪ್ರಶಸ್ತಿ ಹಾಗೂ ರು. 5 ಸಾವಿರ ನಗದನ್ನು ಗೆದ್ದುಕೊಂಡರು. ಪಂದ್ಯದ ಕೊನೆ ಕ್ಷಣದಲ್ಲಿ ಎದುರಾಳಿ ಮೇಲೆ ತೀವ್ರ ದಾಳಿ ನಡೆಸಿದ ಹರಪನಹಳ್ಳಿಯ ಸುರೇಶ್ ನಿಕಾಲಿ ಡಾವ್ ಹಾಕುವ ಮೂಲಕ ಧಾರವಾಡದ ರಮೇಶ್ನನ್ನು ಸೋಲಿಸಿದರು.
ಬೆಳಗಾವಿ, ಧಾರವಾಡ, ಹರಪನಹಳ್ಳಿ, ನಾರಾಯಣದೇವರಕೆರೆ, ಹುಲಿಗಿ, ಕೊಟ್ಟೂರು, ಕೂಡ್ಲಿಗಿ, ಹೊಸಪೇಟೆ, ಮರಿಯಮ್ಮನಹಳ್ಳಿ ಸೇರಿದಂತೆ ಹಲವು ಕಡೆಗಳಿಂದ ಆಗಮಿಸಿದ್ದ 26ಕ್ಕೂ ಅಧಿಕ ಪೈಲ್ವಾನರು ಜತೆ ಕುಸ್ತಿಯಲ್ಲಿ ವಿಜಯ ಸಾಧಿಸಿ ನಗದು ಬಹುಮಾನ ಗಳಿಸಿದರು.
ನಾಣಿಕೆರೆ ದೈವಸ್ಥರಾದ ಹೂಗಾರ ಮಲ್ಲಣ್ಣ, ಭೀಮಾನಾಯ್ಕ, ಕೃಷ್ಣನಾಯ್ಕ, ಮಾತಾಗ್ಯಾಸ್ ಎರ್ರಿಸ್ವಾಮಿ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್, ಬಾರಿಕರ ನಿಂಗಪ್ಪ, ಸೆರೆಗಾರ ಹುಚ್ಚಪ್ಪ, ಬಾರಿಕರ ಬಾಪೂಜಿ, ಸರ್ದಾರ ಯಮನೂರ, ಟಿ. ಖಾಸೀಂ, ಜೋಗಿ ಹನುಮಂತಪ್ಪ, ಚಿಗರಿ ಮಾರುತಿ, ಸಂಪತ್ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

