ಬಿರುಬಿಸಿಲು ಲೆಕ್ಕಿಸದೇ ಕೊಟ್ಟೂರಲ್ಲಿ ಪಾದಯಾತ್ರೆ
ಕೊಟ್ಟೂರು: ಘೋಷಿತ ಕೊಟ್ಟೂರು ನೂತನ ತಾಲೂಕಿಗೆ ಪಕ್ಕದ ಹರಪನಹಳ್ಳಿ ತಾಲೂಕಿನ ಚಿಗಟೇರಿ ಸಂಪೂರ್ಣ ಹೋಬಳಿಯನ್ನು ಕೂಡಲೇ ಸೇರ್ಪಡಿಸುವಂತೆ ಒತ್ತಾಯಿಸಿ ಮೈದೂರು ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಗಳ ನೂರಾರು ಜನರು ಕೊಟ್ಟೂರಿನಲ್ಲಿ ಪಾದಯಾತ್ರೆ ಕೈಗೊಂಡು ಮೆರವಣಿಗೆ ನಡೆಸಿದರು. ಪಟ್ಟಣದ ಹೊರವಲಯದಂತಿರುವ ಚಪ್ಪರದಹಳ್ಳಿಯಿಂದ ಮಧ್ಯಾಹ್ನ 12-30ರ ಬಿರುಬಿಸಿಲನ್ನೂ ಲೆಕ್ಕಿಸದೇ ಪಾದಯಾತ್ರೆಯಲ್ಲಿ ಪಾಲ್ಗೊಂಡ ಕೊಟ್ಟೂರು ತಾಲೂಕು ರಚನೆ ಪ್ರಕ್ರಿಯೆಯಲ್ಲಿ ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಕಾರರು ಸಾಗಿ ನಂತರ ಇಲ್ಲಿನ ನಾಡ ಕಾರ್ಯಾಲಯಕ್ಕೆ ಆಗಮಿಸಿ ತಹಸೀಲ್ದಾರ್ ಜವರೇಗೌಡರಗೆ ಮನವಿ ಪತ್ರ ಸಲ್ಲಿಸಿದರು.
ಮೈದೂರು ಗ್ರಾಪಂ ಸದಸ್ಯ ಸತೀಶ್ ಗಜಾಪುರ, ವರ್ತಕ ಪಿ. ಶ್ರೀಧರಶೆಟ್ಟಿ ಮಾತನಾಡಿದರು. ಮೈದೂರು ಗ್ರಾಪಂ ಅಧ್ಯಕ್ಷೆ ಜೆ.ಮಂಜುಳ, ಸದಸ್ಯರುಗಳಾದ ಇಂದ್ರಮ್ಮ, ಅಂಜಿನಮ್ಮ, ನಾಗರಾಜ್, ಮಲ್ಲೇಶ್, ವಿಕ್ರಂ, ಶೇಖರಪ್ಪ, ಬಸವನಾಳು ಕೊಟ್ರಪ್ಪ, ಸತೀಶ್ ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

