ಕಾಂಗ್ರೆಸ್, ಬಿಎಸ್ಸಾರ್ ನಡುವೆ ನೇರ ಸ್ಪರ್ಧೆ
ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ 35 ವಾರ್ಡ್ಗಳಿಗೆ ಕಾಂಗ್ರೆಸ್ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಪಕ್ಷಗಳು ಮಾತ್ರ ಎಲ್ಲ ವಾರ್ಡ್ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಈ ಬಾರಿ ಚುನಾವಣೆಯಲ್ಲಿ ಎರಡು ಪಕ್ಷಗಳು ಪ್ರಬಲ ಸ್ಪರ್ಧೆಯೊಡ್ಡುವ ಲಕ್ಷಣ ತೋರಿಸುತ್ತಿವೆ. ಇನ್ನು ಜೆಡಿಎಸ್ 30, ಬಿಜೆಪಿ 30 ಹಾಗೂ ಕೆಜೆಪಿ 10 ವಾರ್ಡ್ಗಳಲ್ಲಿ ನಾಮಪತ್ರ ಸಲ್ಲಿಸಿವೆ.
ಬಿಜೆಪಿಯಿಂದ ಗೆದ್ದು, ಬಿಎಸ್ಸಾರ್ನಲ್ಲಿ ಗುರುತಿಸಿಕೊಂಡಿದ್ದ 33 ಸದಸ್ಯರ ಪೈಕಿ 10 ಹಳಬರಿಗೆ ಮಾತ್ರ ಅವಕಾಶ ನೀಡಿ, ಉಳಿದ 25 ಕ್ಷೇತ್ರಗಳಿಗೆ ಹೊಸಬರನ್ನು ನಿಲ್ಲಿಸಲಾಗಿದೆ.
ಆಡಳಿತಾರೂಢ ಬಿಜೆಪಿ ಮಹಾನಗರ ಪಾಲಿಕೆಯ 35 ವಾರ್ಡ್ಗಳ ಪೈಕಿ ಕೇವಲ 30 ವಾರ್ಡ್ಗಳಲ್ಲಿ ಸ್ಪರ್ಧಿಸಲಿದೆ. ತರಾತುರಿಯಲ್ಲಿ ಚುನಾವಣೆ ಘೋಷಣೆಯಾಯ್ತು, ಮೀಸಲಾತಿ ಗೊಂದಲದಿಂದ ಇನ್ನುಳಿದ ಐದು ವಾರ್ಡ್ಗಳಲ್ಲಿ ನಾಮಪತ್ರ ಸಲ್ಲಿಸಲು ಆಗಲಿಲ್ಲ ಎಂದು ಬಿಜೆಪಿ ಮುಖಂಡರು ಸ್ಪಷ್ಟನೆ ನೀಡಿದ್ದಾರೆ. ಜೆಡಿಎಸ್ 30 ವಾರ್ಡ್ಗಳಲ್ಲಿ ನಾಮಪತ್ರ ಸಲ್ಲಿಸಿದೆ.
ಮೆರವಣಿಗೆ ಅಬ್ಬರ, ದೊಡ್ಡ ಸಂಖ್ಯೆ ಜನಸಮೂಹ ಇರದೇ ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಎಚ್ಚರಿಕೆಯಿಂದಾಗಿ ಗೊಂದಲ ಇಲ್ಲದೆ ಶಾಂತಿಯುತವಾಗಿ ನಾಮಪತ್ರ ಸಲ್ಲಿಕೆಯಾಯಿತು.
ಕೆಲವು ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಕೊನೆ ಹಂತದವರೆಗೆ ಟಿಕೆಟ್ ಲಾಬಿ ನಡೆಯಿತು. ಕೆಲವರು ಟಿಕೆಟ್ ಗಿಟ್ಟಿಸಿಕೊಂಡು ನಾಮಪತ್ರ ಸಲ್ಲಿಸಿದರೆ, ಉಳಿದವರು ನಿರಾಸೆ ಅನುಭವಿಸಿದರು. ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಯಾವ ರೀತಿ ಪ್ರಚಾರ ಕೈಗೊಳ್ಳಬೇಕು, ಚುನಾವಣೆ ಎದುರಿಸಬೇಕೆಂಬ ಚಿಂತನೆಯಲ್ಲಿ ತೊಡಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

