ಅನಾಥೆಗೆ ಶಾಸಕರ ಆರ್ಥಿಕ ನೆರವು

Updated on: 

ಕೂಡ್ಲಿಗಿ: ಎಂಜಿನಿಯರ್ ಆಗೋ ಆಸೆ ಹೊತ್ತಿರುವ ತಾಲೂಕಿನ ಅಗ್ರಹಾರ ಗ್ರಾಮದ ಅನಾಥೆ ನಾಗವೇಣಿಗೆ ಹಲವರು ಆರ್ಥಿಕ ಸಹಾಯ ಮಾಡಲು ಮುಂದೆ ಬಂದಿದ್ದಾರೆ.
ಅನಾಥೆಗೆ ಎಂಜಿನಿಯರ್ ಆಗೋ ಆಸೆ..! ಎನ್ನುವ ಶೀರ್ಷಿಕೆಯಡಿ ಸೋಮವಾರ 'ಕನ್ನಡಪ್ರಭ' ವಿಶೇಷ ವರದಿ ಪ್ರಕಟಿಸಿತ್ತು. ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ವರದಿ ಬಂದ ದಿನವೇ ಸಂಜೆ ಯುವತಿಯ ಸ್ವಗ್ರಾಮ ತಾಲೂಕಿನ ಅಗ್ರಹಾರಕ್ಕೆ  ಭೇಟಿ ನೀಡಿ ಸ್ಥಳದಲ್ಲಿಯೇ 10 ಸಾವಿರ ನೀಡಿ ನಂತರ ಪ್ರತಿ ತಿಂಗಳು ವಸತಿ ನಿಲಯದ ಊಟದ ಖರ್ಚು 2 ಸಾವಿರ ಹಾಗೂ ಇತರ ಖರ್ಚಿಗಾಗಿ 1 ಸಾವಿರ ಸೇರಿ ಒಟ್ಟು 3 ಸಾವಿರ ನೀಡುವ ಭರವಸೆ ನೀಡಿದ್ದಾರೆ. ಹೆಚ್ಚಿನ ಖರ್ಚು ಬಂದಲ್ಲಿ ಬ್ಯಾಂಕ್‌ನಲ್ಲಿ ಶೈಕ್ಷಣಿಕ ಸಾಲ ಒದಗಿಸಲು ಪ್ರಯತ್ನಿಸುವುದಾಗಿಯೂ ಶಾಸಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com