ಬಳ್ಳಾರಿ

ಶೋಷಿತ ವರ್ಗದ ಗಟ್ಟಿ ಧ್ವನಿ ಚೌಡಯ್ಯ

Published On :

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಜ. 22
ಸಮಾಜದಲ್ಲಿ ಮೊದಲು ಬಂಡಾಯದ ಕಹಳೆ ಊದಿದ ಅಂಬಿಗರ ಚೌಡಯ್ಯ, ಶೋಷಿತರ ಗಟ್ಟಿಧ್ವನಿಯಾಗಿ ಅಸ್ಪೃಶ್ಯತೆ, ಮೌಢ್ಯ ತೊಡೆದು ಹಾಕುವಲ್ಲಿ ಶ್ರಮಿಸಿದರು. ಅವರು ಸಮಾಜಕ್ಕೆ ಆದರ್ಶ ಎಂದು ಕಂದಗಲ್ಲು ಗ್ರಾಪಂ ಅಧ್ಯಕ್ಷ ಕೆ. ಪರುಸಪ್ಪ ಹೇಳಿದರು.
ಅವರು ತಾಲೂಕಿನ ಗಜಾಪುರ ಗ್ರಾಮದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಅಂಬಿಗರ ಚೌಡಯ್ಯ ಅವರ ನಾಮಫಲಕಕ್ಕೆ ಪೂಜೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಹನ್ನೆರಡನೇ ಶತಮಾನದ ಎಲ್ಲ ಶರಣರೂ ತಮಗೆ ಆದರ್ಶಪ್ರಾಯರಾದ ಶರಣರ ನಾಮಾಂಕಿತ ಇಟ್ಟುಕೊಂಡು ವಚನಗಳನ್ನು ರಚನೆ ಮಾಡಿದರೆ ಅಂಬಿಗರ ಚೌಡಯ್ಯ ತನ್ನ ಹೆಸರನ್ನೇ ತನ್ನ ವಚನಗಳಿಗೆ ಅಂಕಿತನಾಮವಾಗಿ ಇಟ್ಟುಕೊಂಡರು ಎಂದರು.
ಗಜಾಪುರ ಗಂಗಾಮತ ಸಂಘದ ಅಧ್ಯಕ್ಷ ಅಂಬಳಿ ಲೋಕಪ್ಪ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷ ಟಿ. ಮೂಗಪ್ಪ, ಗಂಗಾಮತ ಸಂಘದ ಕಾರ್ಯದರ್ಶಿ ಬಾರಿಕರ ಮಂಜುನಾಥ, ಗಂಗಾಮತ ಸಂಘದ ಮಾಜಿ ಅಧ್ಯಕ್ಷ ಬಿ. ಸಿದ್ದಪ್ಪ, ಗ್ರಾಪಂ ಸದಸ್ಯರಾದ ಬಾರಿಕರ ಜ್ಯೋತಿ ಕೊಟ್ರೇಶ್, ಲಕ್ಷ್ಮೀ ಗುರುವಪ್ಪ, ಹರಿಜನ ಹುಲುಗಪ್ಪ, ದೂಪದಹಳ್ಳಿ ಕೊಟ್ರೇಶಪ್ಪ, ಚಿಕ್ಕಪ್ಪರ ಕೊಟ್ರೇಶಪ್ಪ, ಬಾರಿಕರ ನಾಗಪ್ಪ, ನೀರಘಂಟಿ ಶಿವರಾಮಪ್ಪ, ವಾಟರ್‌ಮನ್ ಭೀಮಪ್ಪ, ಕಾಳಾಪುರ ಕರಿಬಸಪ್ಪ, ಅಂಗಡಿ ರಾಮಪ್ಪ, ತುಪ್ಪನಹಳ್ಳಿ ಮೂಗಪ್ಪ, ತಿಮ್ಮಲಾಪುರ ಹುಲುಗಪ್ಪ, ಮೂಗಬಸಪ್ಪ, ಕುಪ್ಪಿನಕೆರೆ ಅಂಜಿನಪ್ಪ, ನೀರಗಂಟಿ ಸಿದ್ದಪ್ಪ, ಬಿ. ವಿಶ್ವನಾಥ, ಚಿಕ್ಕಣ್ಣ, ಟಿ. ಪ್ರಕಾಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.