ಬಳ್ಳಾರಿ

ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ

Published On :

ಸಿರುಗುಪ್ಪ: ಪಟ್ಟಣದ ನ್ಯಾಯಾಲಯದ ಅವರಣದಲ್ಲಿ ಗುರುವಾರ ಕಾನೂನು ಸಾಕ್ಷರತಾ ರಥಕ್ಕೆ ಸಿವಿಲ್ ನ್ಯಾಯಾಧೀಶ ಲಕ್ಷ್ಮೀಕಾಂತ ಜಾನಕಿರಾಮ ಮಿಷ್ಕಿನ್ ಚಾಲನೆ ನೀಡಿದರು.
   ನಂತರ ಮಾತನಾಡಿದ ಅವರು, ಜನರಲ್ಲಿ ನ್ಯಾಯಾಲಯದ ಕಲಾಪ ಹಾಗೂ ಸಾಮಾನ್ಯ ಕಾನೂನಿನ ಜಾಗೃತಿ ಮೂಡಿಸುವ ಉದ್ದೇಶದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆ, ತಾಪಂ, ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ಕಾನೂನು ಮಾಹಿತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ತೆಕ್ಕಲಕೋಟೆ ಉಪ್ಪಾರು ಹೊಸಳ್ಳಿ, ದೇಶನೂರು ಮತ್ತು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುವುದು. ಈ ವೇಳೆ ಆಯ್ಕೆ ಮಾಡಿದ ಗ್ರಾಮಗಳಲ್ಲಿ ಒಂದು ಗಂಟೆ ಗ್ರಾಮೀಣ ಜನರಿಗೆ ರಥದಲ್ಲಿನ ನ್ಯಾಯಾಲಯದ ಕಲಾಪದ ವ್ಯವಸ್ಥೆ ಹಾಗೂ ವಕೀಲರಿಂದ ಸಾಮಾನ್ಯ ಕಾನೂನಿನ ಅರಿವು ನೀಡುವ ಅಂಶಗಳ ಬಗ್ಗೆ ವಿವರಿಸಲಾಗುವುದು. ಕಾರಣ ಪ್ರತಿಯೊಬ್ಬರು ಕಾನೂನು ಸಾಕ್ಷರತಾ  ರಥ ದಿಂದ ಸಾಮಾನ್ಯ ಕಾನೂನಿನ ಅರಿವು ಪಡೆಯಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ. ವೀರೇಶಗೌಡ, ಹಿರಿಯ ವಕೀಲರಾದ ಎಚ್.ಕೆ. ಮಲ್ಲಿಕಾರ್ಜುನಯ್ಯಸ್ವಾಮಿ, ಜಿ.ಬಿ. ಗುಂಡಳ್ಳಿ, ಎಚ್.ಕೆ. ಪ್ರಕಾಶ್, ಈರಣ್ಣಪತ್ತಾರ್, ಎ. ಶಿವರುದ್ರಗೌಡ, ಸಿದ್ದಲಿಂಗಯ್ಯಸ್ವಾಮಿ, ಜಿ. ವೀರಪ್ಪ, ಎಸ್. ಮಂಜುನಾಥ, ಕುಮಾರ ರಾಜಗೌಡ, ಮಲ್ಲಿಕಾರ್ಜುನಗೌಡ, ಕೆ. ಹುಸೇನ್, ಮುನಿಸ್ವಾಮಿ ಸೇರಿದಂತೆ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.