ಬಳ್ಳಾರಿ

ಪಿಜಿಬಿಯಿಂದ ಚಿಲ್ಲರೆ ಸಾಲ ಪ್ರಚಾರ

Published On :

ಬಳ್ಳಾರಿ: ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಗಾಂಧಿನಗರ ಶಾಖೆಯು ಚಿಲ್ಲರೆ ಸಾಲ ಪ್ರಚಾರ ಕಾರ್ಯಕ್ರಮ (ಖಜಡಿಛ್ಝಟ ಟಜಟಿಜ್ಝಟ್ಜಿ ್ಛಛಟಠಛ್ಝ್ಜಟಿ) ದ ನಿಮಿತ್ತ ಗ್ರಾಹಕರ ಸಭೆ ಆಯೋಜಿಸಿತ್ತು.
ಪ್ರಗತಿ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷ ಎಂ.ಜಿ. ಭಟ್ ಸಭೆಯನ್ನುದ್ದೇಶಿಸಿ ಮಾತನಾಡಿ, ಬ್ಯಾಂಕ್‌ನಲ್ಲಿರುವ ವಿವಿಧ ಠೇವಣಿ ಯೋಜನೆಗಳ ಬಗ್ಗೆ ಮತ್ತು ಅವುಗಳಿಗೆ ಕೊಡಲಾಗುವ ಬಡ್ಡಿ ದರಗಳ ಬಗ್ಗೆ ಹಾಗೂ ಮನೆಕಟ್ಟುವ ಸಾಲ, ವೈಯಕ್ತಿಕ ಸಾಲ, ಉದ್ಯೋಗಸ್ಥರಿಗೆ ಸಾಲ, ಶೈಕ್ಷಣಿಕ ಸಾಲ ಮತ್ತು ವಿವಿಧ ಸಾಲ ಸೌಲಭ್ಯ ಯೋಜನೆಗಳ ಕುರಿತು ವಿವರಿಸಿದರು. ಮನೆ ಕಟ್ಟುವ ಸಾಲ ತೆಗೆದುಕೊಂಡವರಿಗೆ ಹೆಚ್ಚುವರಿ ಸಾಲವನ್ನು ಆದ್ಯತೆಯ ಮೇರೆಗೆ ಹೊಸದಾಗಿ ಪರಿಚಯಿಸಲಾಗಿರುವ ಹೋಂ ಲೋನ್ ಪ್ಲಸ್ ಯೋಜನೆಯಡಿ ಪಡೆಯಬಹುದಾಗಿದೆ. ಅಲ್ಲದೇ ಸಾಲಗಳಿಗೆ ವಿಧಿಸಲಾಗುವ ಬಡ್ಡಿ ದರಗಳು ಸ್ಪರ್ಧಾತ್ಮಕವಾಗಿದೆ ಎಂದು ತಿಳಿಸಿದರು. ಪ್ರಗತಿ ಗ್ರಾಮೀಣ ಬ್ಯಾಂಕ್ ಇದೀಗ ಎನ್‌ಇಎಫ್‌ಟಿಆರ್‌ಟಿಜಿಎಸ್, ಎಟಿಎಂ, ಡೆಬಿಟ್ ಕಾರ್ಡ್, ಮೊಬೈಲ್ ಬ್ಯಾಂಕಿಂಗ್ ಮೊದಲಾದ ಇ-ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಸಹ ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಈ ಎಲ್ಲ ಸೌಲಭ್ಯಗಳ ಪ್ರಯೋಜನವನ್ನು ಗ್ರಾಹಕರು ಬಳಸಿಕೊಳ್ಳಬೇಕು. ಪಿಜಿ ಬ್ಯಾಂಕ್ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಲು, ಬ್ಯಾಂಕ್‌ನ ಗ್ರಾಹಕರ ಸಹಕಾರ ಅಗತ್ಯ. ಗ್ರಾಹಕರೆಲ್ಲರೂ ಸಹಕರಿಸಬೇಕು ಎಂದರು. ಬ್ಯಾಂಕ್‌ನ ವಲಯ ಅಧಿಕಾರಿ ಕೆ.ಎಂ. ಹಿರೇಮಠ ಇದ್ದರು. ವೈ. ಪರಮೇಶ್ವರಪ್ಪ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.