ಮೈಲಾರದಲ್ಲಿ ಕನಕ ಗುರುಪೀಠ ಶಾಖಾಮಠ
ಹೂವಿನಹಡಗಲಿ: ಉತ್ತರ ಕರ್ನಾಟಕ ಭಕ್ತರ ಆರಾಧ್ಯ ದೈವ ಮೈಲಾರಲಿಂಗೇಶ್ವರನ ಸುಕ್ಷೇತ್ರ ಮೈಲಾರದಲ್ಲಿ ಕಾಗಿನೆಲೆಯ ಶಾಖಾಮಠವನ್ನು ಆರಂಭಿಸುವುದಾಗಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು. ಪಟ್ಟಣದಲ್ಲಿ ಕುರುಬ ಸಮಾಜ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಶಾಖಾಮಠಕ್ಕಾಗಿಯೇ 7 ಎಕರೆ ಜಮೀನು ಖರೀದಿಸಿದ್ದು, ಜಾತ್ಯತೀತ ಮೈಲಾರ ಕ್ಷೇ ತ್ರದಲ್ಲಿ ಗೊರವ ಪರಂಪರೆ ಕೇಂದ್ರ ಬಿಂದುವಾಗಿದೆ. ಮುಸ್ಲಿಂ ಸಮಾಜದವರೂ ಕೂಡ ಗೊರವ ಸಂಸ್ಕೃತಿ ಅನುಸರಿಸುತ್ತಿರುವುದರಿಂದ ಎಲ್ಲ ಜಾತಿ, ಧರ್ಮದವರಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಶಾಖಾಮಠ ಸ್ಥಾಪಿಸುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು ಇದಕ್ಕೆ ಸ್ಪಂದಿಸಬೇಕೆಂದರು. ಇದಕ್ಕೂ ಮುನ್ನ ಗುಲ್ಬರ್ಗಾ ವಿಭಾಗೀಯ ಪೀಠದ ಸಿದ್ಧರಮಾನಂದಪುರಿ ಸ್ವಾಮೀಜಿ ಮಾತನಾಡುತ್ತಾ, ಐತಿಹಾಸಿಕ ಮೈಲಾರ ಕ್ಷೇತ್ರದಲ್ಲಿ ಗೊರವರ ಮುಂಚೂಣಿಯಲ್ಲಿ ಧಾರ್ಮಿಕ ಆಚರಣೆಗಳು ನಡೆಯುವ ಬದಲು, ಯಾರ ಯಾರದೋ ಯಜಮಾನಿಕೆಯಲ್ಲಿ ಜಾತ್ರೆ ನಡೆಯುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಾ, ಮೈಲಾರಲಿಂಗನ ಪ್ರತೀಕವಾಗಿರುವ ಗೊರವಪ್ಪನಿಗೆ ಗೌರವ ಸಿಗಬೇಕೆಂಬುದು ಕಾಗಿನೆಲೆ ಪೀಠದ ಒತ್ತಾಸೆಯಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

