ಬಳ್ಳಾರಿ

ಸಿಂಡಿಕೇಟ್ ಬ್ಯಾಂಕ್‌ಗೆ ರು. 452 ಕೋಟಿ ಲಾಭ

Published On :

ಬಳ್ಳಾರಿ: ಸಿಂಡಿಕೇಟ್ ಬ್ಯಾಂಕ್ 2012-13ನೇ ಆರ್ಥಿಕ ವರ್ಷದಲ್ಲಿ ರು. 452 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾ ವ್ಯವಸ್ಥಾಪಕ ಎ.ವಿ. ವಸಂತಕುಮಾರ್ ತಿಳಿಸಿದ್ದಾರೆ. 2011-12ನೇ ಆರ್ಥಿಕ ವರ್ಷದಲ್ಲಿ ರು. 440 ಕೋಟಿ ಲಾಭಗಳಿಸಿದ್ದ ಬ್ಯಾಂಕ್ ಕಳೆದ ಸಾಲಿಗಿಂತ ಈ ಬಾರಿ ಲಾಭಾಂಶ ರು. 12 ಕೋಟಿ ಏರಿಕೆಯಾಗಿದೆ. 2012-13ನೇ ಆರ್ಥಿಕ ವರ್ಷದಲ್ಲಿ ಜಾಗತಿಕ ಠೇವಣಿಯು ರು. 15,7276 ಕೋಟಿಯಿಂದ ರು. 18,2513 ಕೋಟಿ ಅಧಿಕವಾಗಿದೆ. ಶೇ. 16ರಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಜಾಗತಿಕ ಸಾಲಗಳು ರು. 12,9171 ಕೋಟಿಯಿಂದ ರು. 14,9383 ಕೋಟಿ ಹೆಚ್ಚಳವಾಗಿದೆ. (ಶೇ. 16) ಜಾಗತಿಕ ವ್ಯವಹಾರ ರು. 28,6447 ಕೋಟಿಯಿಂದ ರು. 33,1896 ಕೋಟಿ ಏರಿಕೆಯಾಗಿದೆ. ಚಾಲ್ತಿ ಮತ್ತು ಉಳಿತಾಯ ಠೇವಣಿಗಳು ರು. 44,228 ಕೋಟಿಯಿಂದ ರು. 51,114 ಕೋಟಿಗೆ ಏರಿಕೆಯಾಗಿದೆ. ರು. 841 ಕೋಟಿಯಿಂದ ರು. 949 ಕೋಟಿ ನಿರ್ವಹಣೆಯ ಲಾಭ ಹೆಚ್ಚಳವಾಗುವ ಮೂಲಕ ರು. 108 ಕೋಟಿ ಲಾಭಗಳಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪರಿಚಿತ ಮಹಿಳೆ ಶವ ಪತ್ತೆ
ಕೂಡ್ಲಿಗಿ: ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಷ್ಣಹಳ್ಳಿ ಕ್ರಾಸ್ ಬಳಿಯ ಸಂಗಮೇಶ್ವರ ದೇವಸ್ಥಾನ ಬಳಿ ಸುಮಾರು 25 ವಯೋವಾನದ ವಿವಾಹಿತ ಮಹಿಳೆ ಶವ ಪತ್ತೆಯಾಗಿದೆ. ಮಹಿಳೆಯ ಮಖವನ್ನು ಸಂಪೂರ್ಣವಾಗಿ ಕಲ್ಲಿನಿಂದ ಜಜ್ಜಿ, ವಿವಸ್ತ್ರಗೊಳಿಸಿರುವುದರಿಂದ ಮಹಿಳೆ ಗುರುತು ಸಿಕ್ಕಿಲ್ಲ ಎಂದು ಪೊಲೀಸರು ತಿಳಿದ್ದಾರೆ. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಟ್ಕಾ: ಓರ್ವನ ಬಂಧನ
ಬಳ್ಳಾರಿ: ತಾಲೂಕಿನ ಕುಡಿತಿನಿ ಪೊಲೀಸ್ ಠಾಣಾ ವ್ಯಾಪ್ತಿಯ ದೇವಲಾಪುರ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಬರೆಯುತ್ತಿದ್ದ ಅಂಜಿನಿ ಎಂಬವನನ್ನು ಬಂಧಿಸಿ, ಆತನಿಂದ ರು. 2,220 ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ಜರುಗಿದೆ. ದೇವಲಾಪುರ ಗ್ರಾಮದ ಬನ್ನಿ ಮಹಾಂಕಾಳಮ್ಮ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಬರೆಯುತ್ತಿದ್ದಾಗ ಕುಡುತಿನಿ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿ ದಾಳಿ ನಡೆಸಿ, ಹೊಸಗುಡ್ಡ ಅಂಜಿನಿ ಎಂಬವನನ್ನು ಬಂಧಿಸಿ, ರು. 2220 ನಗದು, ಮಟ್ಕಾ ಪಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ. ಕುಡಿತಿನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.