ಬಳ್ಳಾರಿ

ಉದ್ಘಾಟನೆ ಭಾಗ್ಯ ಕಾಣದ ಅಂಬೇಡ್ಕರ ಭವನ

Published On :

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಅಡಿಗಲ್ಲು ಹಾಕಿ ವರ್ಷ ಕಳೆದರೂ ನಿರ್ಮಾಣವಾಗದಿರುವ ಅಂಬೇಡ್ಕರ ವೃತ್ತದ ಕಥೆ, ವ್ಯಥೆಯಾಗಿರುವಾಗಲೇ ಇತ್ತ ಪಟ್ಟಣದ ರಾಮನಗರದ ಶ್ರೀ ಈಶ್ವರ ದೇವಸ್ಥಾನದ ಪಕ್ಕದಲ್ಲಿ ಹಲವು ವರ್ಷಗಳ ಹಿಂದೆಯೇ ನಿರ್ಮಿಸಿರುವ ಅಂಬೇಡ್ಕರ ಭವನಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಒದಗಿಬರುತ್ತಿಲ್ಲ.
ನಿರ್ಮಿಸುರುವ ಭವನ ಉದ್ಘಾಟನೆಯಾಗಿದ್ದರೆ ತಾಲೂಕಿನ ದಲಿತರು ಸೇರಿದಂತೆ ಎಲ್ಲ ಜಾತಿ, ಜನಾಂಗಗಳ ಸದ್ಬಳಕೆಗೆ ಅಂಬೇಡ್ಕರ ಭವನ ಲಭ್ಯವಾಗಿರುತ್ತಿತ್ತು. ಆದರೆ, ತಾಲೂಕು ಆಡಳಿತ ದಲಿತರ ಕಲ್ಯಾಣದ ವಿಚಾರದಲ್ಲಿ ಅಸಡ್ಡೆತನ, ಮೀನಮೇಷ ತೋರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ  ಅಂಬೇಡ್ಕರ ಭವನ ಉದ್ಘಾಟನೆಯಾಗದ್ದು ಮತ್ತು ಅಂಬೇಡ್ಕರ ವೃತ್ತದ ನಿರ್ಮಾಣ ಕಾಮಗಾರಿಗಳು ಪೂರ್ಣಗೊಳ್ಳದಿರುವುದು.
ಹಾಳು ಭವನದಂತಾದೆ: ಸಮಾಜ ಕಲ್ಯಾಣ ಇಲಾಖೆಗೆ ಸೇರಿರುವ ಅಂಬೇಡ್ಕರ ಭವನದ ಉದ್ಘಾಟನೆ ವಿಳಂಬವಾಗಿರುವುದರಿಂದ ಭವನಕ್ಕೆ ಯಾರ ರಕ್ಷಣೆ ಇಲ್ಲದಂತಾಗಿ, ಭವನದ ಕಿಟಕಿಗಳಿಗೆ ಅಳವಡಿಸಿದ್ದ ಗಾಜುಗಳೆಲ್ಲವೂ ಕಿಡಗೇಡಿಗಳ ಕಲ್ಲಿನ ಏಟಿಗೆ ಪುಡಿಯಾಗಿವೆ. ಸೂಕ್ತ ಮೇಲ್ವಿಚಾರಣೆ ಇಲ್ಲದಿದ್ದರಿಂದ ಇವತ್ತು ಭವನ ಒಂದು ರೀತಿಯಲ್ಲಿ ಹಾಳು ಭವನದಂತೆ ಮಾರ್ಪಾಟಾಗಿದೆ.
ಅನುದಾನಕ್ಕೆ ಪ್ರಸ್ತಾವನೆ:  ಭವನದ ಸುತ್ತಲೂ ರಕ್ಷಣಾ ಗೋಡೆ(ಕಾಂಪೌಂಡ್), ಶೌಚಾಲಯ, ಸ್ನಾನಗೃಹ ನಿರ್ಮಿಸಲು ಸ್ಥಳಿಯ ಶಾಸಕರು ರು. 10 ಲಕ್ಷ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದಾರೆ.  ನಿರ್ಮಾಣಗೊಂಡಿರುವ ಅಂಬೇಡ್ಕರ ಭವನವನ್ನು ಆದಷ್ಟು ಬೇಗ ಉದ್ಘಾಟನೆ ಮಾಡಿ ಭವನದ ಸದ್ಬಳಕೆಗೆ  ಮುಂದಾಗಬೇಕೆನ್ನುವುದು ಎಲ್ಲರ ಒತ್ತಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.