ಬಳ್ಳಾರಿ

ಪದಗ್ರಹಣ ಕಾರ್ಯಕ್ರಮ

Published On :

ಬಳ್ಳಾರಿ: ವಿದ್ಯಾರ್ಥಿಗಳು ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಡಾ.ಎಸ್.ಜೆ.ವಿ. ಮಹಿಪಾಲ್ ಕರೆ ನೀಡಿದರು. ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆ ಮತ್ತು ಕಾಲೇಜಿನಲ್ಲಿ ಜರುಗಿದ ಶಾಲಾ ನಾಯಕನ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಧನೆಗೈದ ಶ್ರೇಷ್ಠ ವಿಜ್ಞಾನಿಗಳು, ಸಮಾಜ ಶಾಸ್ತ್ರಜ್ಞರು, ರಾಜನೀತಿ ತಜ್ಞರು, ಸಾಹಿತಿಗಳು, ಕಲಾವಿದರು ನಿಮಗೆ ಆದರ್ಶವಾಗಲಿ. ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲೆಯ ವಿದ್ಯಾರ್ಥಿ ನಾಯಕರಾಗಿ ಆಯ್ಕೆಯಾದ ಗೀತಾರೆಡ್ಡಿ ಹಾಗೂ ರಾಹುಲ್ ಸಿಂಗ್ ಅವರಿಗೆ ಪ್ರಾಚಾರ್ಯರು ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ವಿಕ್ರಮ್ ಮಹಿಪಾಲ್, ಭರತ್ ಮಹಿಪಾಲ್, ಹರಿಕುಮಾರ್, ಮೋನಾ ಒಬೇರಾಯ್, ಶಾಲೆ ಪ್ರಾಚಾರ್ಯ ಜೆ. ಅನಿಲ್‌ಕುಮಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕಿ ಮಂಜುಳಾ ನಿರೂಪಿಸಿದರು. ಶಿಕ್ಷಕಿ ಅರ್ಚನಾ ಸಿಂಗ್ ವಂದಿಸಿದರು.
30ರಂದು ತುಲಾಭಾರ
ಬಳ್ಳಾರಿ: ಚಿಕ್ಕೇನಕೊಪ್ಪದ ಶ್ರೀ ಚೆನ್ನವೀರ ಶರಣರ 18ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಶಿವಶಾಂತವೀರ ಶರಣರ 38ನೇ ತುಲಾಭಾರ ಕಾರ್ಯಕ್ರಮ ಜೂ. 30ರಂದು ಸಂಜೆ 6ಕ್ಕೆ ನಗರದ ಬಸವ ಭವನದಲ್ಲಿ ಜರುಗಲಿದೆ. ಹೊಸಳ್ಳಿ ಸಂಸ್ಥಾನ ಮಠದ ಬೂದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬಳಗನೂರಿನ ಶ್ರೀ ಶಿವಶಾಂತವೀರ ಶರಣರು ಅಧ್ಯಕ್ಷತೆ ವಹಿಸಲಿದ್ದಾರೆ. ಪಂಡಿತ ಪಂಚಾಕ್ಷರಿ ಶಾಸ್ತ್ರಿಗಳು ಉಪನ್ಯಾಸ ನೀಡಲಿದ್ದು, ಶಂಕರಯ್ಯ ಗುರುಮಠ ಕಲ್ಲೂರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಶಾಲಾ ಬ್ಯಾಗ್ ವಿತರಣೆ
ಬಳ್ಳಾರಿ: ಬಳ್ಳಾರಿ ಸೇವಾ ಸಮಿತಿ ವತಿಯಿಂದ ತಾಲೂಕಿನ ಕಕ್ಕಬೇವಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಂಗಳವಾರ ಉಚಿತವಾಗಿ ಶಾಲಾ ಬ್ಯಾಗ್, ನೋಟ್ ಪುಸ್ತಕ, ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು. ಸ್ಪಾಂಜ್ ಐರನ್ ಮಾಲೀಕರ ಸಂಘದ ಅಧ್ಯಕ್ಷ ಟಿ.ಶ್ರೀನಿವಾಸ್ ರಾವ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಪುಸ್ತಕ ಮತ್ತು ಇತರೆ ಸಾಮಗ್ರಿಗಳನ್ನು ವಿತರಿಸಿರುವುದು ಉತ್ತಮ ಬೆಳವಣಿಗೆ ಎಂದರು. ಬಳ್ಳಾರಿ ಸೇವಾ ಸಮಿತಿಯ ಅಧ್ಯಕ್ಷ ಎಂ. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಬಿ.ಸುರೇಂದ್ರ, ಕೆ.ಎಚ್. ಪ್ರಕಾಶ್, ವೇಣುಗೋಪಾಲ್, ಪಿ.ಶ್ರೀನಿವಾಸರಾವ್, ಗ್ರಾ.ಪಂ ಸದಸ್ಯ ನಾಗರಾಜ, ಶಾಲೆಯ ಮುಖ್ಯಗುರು ಇ.ಮಲ್ಲಯ್ಯ, ಶಿಕ್ಷಕಿ ಟಿ.ವಿಜಯಲಕ್ಷ್ಮಿ,  ವಿ.ನಂದ ಕುಮಾರ್ ಮತ್ತು ಇತರರು ಇದ್ದರು. ಶಾಲಾ ಶಿಕ್ಷಕಿ ಮನ್ನೆ ಪದ್ಮಾವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಸ್. ವೀರಬಸಪ್ಪ ಪ್ರಾರ್ಥಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.