ಬಳ್ಳಾರಿ

ಮೂಗಿನಲ್ಲಿ ದುರ್ಮಾಂಸ: ಪುಟಾಣಿ ಮಾನಸಾ ಚಿಕಿತ್ಸೆಗೆ ಬೇಕಿದೆ ನೆರವು

Published On :

ಕ.ಪ್ರ. ವಾರ್ತೆ ಸೋಮವಾರಪೇಟೆ ಜೂ.27
ಅಪ್ಪ- ಅಮ್ಮ ಅಂಗವಿಕಲರು. ಅವರಿಗಿರುವ ಒಬ್ಬಳೇ ಪುತ್ರಿಗೆ ಮೂಗಿನಲ್ಲಿ ದುರ್ಮಾಂಸ ಬೆಳೆದು ಉಸಿರಾಟದ ತೊಂದರೆಯುಂಟಾಗಿದ್ದು, ಕರುಳ ಬಳ್ಳಿಯನ್ನು ಉಳಿಸಿಕೊಳ್ಳಲು ತಂದೆ-ತಾಯಿ ಇನ್ನಿಲ್ಲದ ಕಷ್ಟಪಡುತ್ತಿದ್ದಾರೆ.
ಸೋಮವಾರಪೇಟೆಯ ರೇಂಜರ್ಸ್ ಬಡಾವಣೆ ನಿವಾಸಿ ಸುನೀಲ್ ಕುಮಾರ್ ಅವರ ಒಂದು ಕಾಲು ಊನವಾಗಿದ್ದು, ಕಿವಿಯೂ ಅಷ್ಟಾಗಿ ಕೇಳಿಸದ ನತದೃಷ್ಟ. ಅವರು ಮದುವೆಯಾಗಿದ್ದು ಅಂಗವಿಕಲೆ ಜಯಂತಿಯನ್ನು. ಅವರಿಗೆ ಸುಮಾರು 5 ವರ್ಷ ಪ್ರಾಯದ ಮಾನಸ ಎಂಬ ಮಗಳಿದ್ದಾಳೆ. ಈ ಮಗುವಿಗೆ ಮೂಗಿನಲ್ಲಿ ದುರ್ಮಾಂಸ ಬೆಳೆದು ಉಸಿರಾಟಕ್ಕೆ ತೊಂದರೆಯಾಗಿದೆ. ಕೇರಳದ ಕಣ್ಣೂರಿಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ಪರೀಕ್ಷಿಸಿದಾಗ, ಶೀಘ್ರ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸಲಹೆ ನೀಡಿದ್ದಾರೆ. ಈ ಶಸ್ತ್ರಚಿಕಿತ್ಸೆಗೆ ಸುಮಾರು 1 ಲಕ್ಷದವರಗೆ ಖರ್ಚಾಗುತ್ತದೆ. ಹಣ ಇಲ್ಲದಿರುವುದರಿಂದ ದಂಪತಿ ಕಂಗಾಲಾಗಿದ್ದು, ಸಹೃದಯರ ನೆರವು ಕೋರುತ್ತಿದ್ದಾರೆ. ಸಹಾಯಹಸ್ತ ಚಾಚುವವರು, ಕರ್ನಾಟಕ ಬ್ಯಾಂಕ್‌ನ ಸೋಮವಾರಪೇಟೆ ಶಾಖೆಯ ಉಳಿತಾಯ ಖಾತೆ ಮಾನಸಳ ಅಮ್ಮನ ಹೆಸರಿನಲ್ಲಿದ್ದು, ಕೆ. ಜಯಂತಿ, ಖಾತೆ ಸಂಖ್ಯೆ 1382500101230301ಗೆ ಜಮೆ ಮಾಡಬಹುದು. ಸಂಪರ್ಕ- 9886254315.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.