ಚೆಕ್, ಡಿಡಿ ರೂಪದಲ್ಲಿ ಪರಿಹಾರ ನೀಡಿ
ಬಳ್ಳಾರಿ: ಉತ್ತರಾಖಂಡ್ನ ವಿವಿಧ ಪ್ರದೇಶಗಳಲ್ಲಿ ಪ್ರವಾಹದಿಂದ ಸಂಕಷ್ಟದಲ್ಲಿರುವವರಿಗೆ ನೆರವಿಗಾಗಿ ಸಹಾಯ ಧನ ನೀಡಲು ಸ್ವಇಚ್ಛೆಯಿಂದ ಮುಂದಾಗುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೇರವಾಗಿ ಅಥವಾ ತಹಸೀಲ್ದಾರ್ ಮೂಲಕ ಚೆಕ್ ಅಥವಾ ಡಿಡಿ ರೂಪದಲ್ಲಿ ನೀಡಬಹುದು ಎಂದು ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ. ಕ್ಠ್ಝಿಟಜ ಟ್ಝಟ್ಝಿಡಡಿಜ್ಠಡ ಃಛಡ್ಝ್ಟಿಟಿಛಟ ್ಠಜಟ್ಝಜಜಿ ಋ್ಡಟಿಜ, ಕ್ಠ್ಝಿಟಜ ಟ್ಝಟ್ಝಿಡಡಿಜ್ಠ ್ಟಜಿಜ್ಝ್ಛಿಜ, ಃಜಢಿ ಉಜಝ್ಝ, 110011, ಕಿಛಟಿ ಃ್ಟ ಆಆಆಎಕಿ0033ಂ ಗೆ ಕಳುಹಿಸಹಿಸಬಹುದು. ಅಥವಾ ತಮ್ಮ ತಾಲೂಕಿನ ತಹಸೀಲ್ದಾರ್ ಕಚೇರಿಗೆ ಡಿಡಿ ಅಥವಾ ಚೆಕ್ ಮೂಲಕ ನೀಡಿದರೆ ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಲಾಗುವುದು. ಚೆಕ್ ಕಳುಹಿಸುವ ಮುನ್ನ ಈ ಕೆಳಕಂಡ ನಮೂನೆ 1 ಅನ್ನು ಭರ್ತಿ ಮಾಡಿ ಚೆಕ್ನೊಂದಿಗೆ ಕಳುಹಿಸಬೇಕು. ಸಂಘ ಸಂಸ್ಥೆಗಳು ನಗದು ರೂಪದಲ್ಲಿ ವಂತಿಗೆ ನೀಡುವಂತಿಲ್ಲ. ನಮೂನೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಎಂದು ನಮೂದಿಸಿ, ಚೆಕ್ ಅಥವಾ ಡಿಡಿ ಸಂಖ್ಯೆ, ಬ್ಯಾಂಕ್ ಹೆಸರು, ಶಾಖೆ ಹೆಸರು, ಹಣದ ಮೊತ್ತವನ್ನು ಅಕ್ಷರಗಳಲ್ಲಿ ನಮೂದಿಸಬೇಕು. ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸ್ವ ಇಚ್ಛೆಯಿಂದ ಉಣ್ಣೆಯ ಬಟ್ಟೆಗಳು, ಕಂಬಳಿಗಳು, ಸ್ಟೀಲ್ ಪಾತ್ರೆಗಳು, ದೀರ್ಘಕಾಲಿಕ ಬಾಳಿಕೆ ಬರುವ ವಸ್ತುಗಳನ್ನು ದೇಣಿಗೆ ರೂಪದಲ್ಲಿ ನೀಡಬೇಕು. ಕೆಟ್ಟು ಹೋಗುವ ಪದಾರ್ಥಗಳನ್ನು ದೇಣಿಗೆ ನೀಡಬಾರದು. ದೇಣಿಗೆಯನ್ನು ಸಂಬಂಧಪಟ್ಟ ತಹಸೀಲ್ದಾರ್ಗೆ ಜುಲೈ 8ರೊಳಗೆ ನೀಡಬೇಕು. ಈ ದೇಣಿಗೆಯನ್ನು ಉತ್ತರಾಖಂಡ್ನ ಸಂತ್ರಸ್ತರಿಗೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

