ಬಳ್ಳಾರಿ

ಇಂದು, ನಾಳೆ ಕುಸ್ತಿ ಪಂದ್ಯಾವಳಿ

Published On :

ಕೊಟ್ಟೂರು: ಇಲ್ಲಿಗೆ ಸಮೀಪದ ತೂಲಹಳ್ಳಿ ಗ್ರಾಮದ ಮರುಳ ಸಿದ್ಧೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ನಿಮಿತ್ತ ಮಾ.  17 ಮತ್ತು 18ರಂದು ಕುಸ್ತಿ ಪಂದ್ಯಾವಳಿಗಳನ್ನು ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಸಮಾವೇಶ
ಹಗರಿಬೊಮ್ಮನಹಳ್ಳಿ: ಕೊರಮ-ಕೊರಚ (ಕುಳುವ ಸಮಾಜ) ಜನಾಂಗದ ತಾಲೂಕು ಮಟ್ಟದ ಜನಜಾಗೃತಿ ಸಮಾವೇಶ ಮಾ. 17ರಂದು ಪಟ್ಟಣದ ರಾಮನಗರದ ಶ್ರೀವಾಸವಿ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಬೆಳಗ್ಗೆ 10ಕ್ಕೆ ಜರುಗುವ ಸಮಾವೇಶದ ಸಾನ್ನಿಧ್ಯವನ್ನು ತಾಲೂಕಿನ ನಂದಿಪುರದ ಮಹೇಶ್ವರ ಸ್ವಾಮೀಜಿ, ಹಳೇಹಗರಿಬೊಮ್ಮನಹಳ್ಳಿ ಹಾಲಸ್ವಾಮಿ ಮಠಾಧೀಶ ಹಾಲಶಂಕರಶ್ರೀ ವಹಿಸಲಿದ್ದು, ಸಮಾಜದ ಅಧ್ಯಕ್ಷ ಕೆ. ರಂಗಪ್ಪ ಅಧ್ಯಕ್ಷತೆ ವಹಿಸುವರು. ಶಾಸಕ ಕೆ. ನೇಮಿರಾಜ ನಾಯ್ಕ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗಳೂರು ಬಿಬಿಎಂಪಿ ಹೆಚ್ಚುವರಿ ಆಯುಕ್ತ ಎಸ್.ಟಿ. ಅಂಜನಕುಮಾರ್, ಜೆಸ್ಕಾಂ ಎಸ್ಪಿ ಜೆ. ಪಾಪಯ್ಯ, ಹೂವಿನಹಡಗಲಿ ಸಿಪಿಐ ಶ್ರೀಕಾಂತ್ ಕಟ್ಟಿಮನಿ, ಕುಳುವ ಮಹಾಸಭಾದ ಪ್ರಧಾನ ಸಂಪಾದಕ ಎ.ಎನ್. ಪ್ರಭು, ಚಾಮರಾಜನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಪಂಚಾಕ್ಷರಿ, ಪತ್ರಕರ್ತ ಮೋಹನ್ ರಾಜ್, ಪ್ರೊ. ಕೆ.ಎನ್. ರಾಮಾಂಜನೇಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಹಿರಿಯ ಕ್ಲಾರಿಯೋನೆಟ್ ವಾದಕ ಕಂಪ್ಲಿ ಹನುಮಂತಪ್ಪ ಇವರನ್ನು ಸನ್ಮಾನಿಸಲಾಗುವುದು ಎಂದು ಸಮಾಜದ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಇಲಾಖೆ ನಿವೃತ್ತ ವಾಚರ್ ಕೆ. ಸತ್ಯಪ್ಪ ನಿಧನ
ಸಂಡೂರು: ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ನಿರ್ವಹಿಸಿ, ನಿವೃತ್ತರಾಗಿದ್ದ ಕೆ. ಸತ್ಯಪ್ಪ (63) ಅವರು ಅನಾರೋಗ್ಯದಿಂದಾಗಿ ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ, ಮೊಮ್ಮಕ್ಕಳು ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.