ಬಳ್ಳಾರಿ

ಆರು ಮಾದಕ ವ್ಯಸನಿ ಮಕ್ಕಳ ರಕ್ಷಣೆ

Published On :

ಹೊಸಪೇಟೆ: ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ನಗರದ ಡಾನ್‌ಬಾಸ್ಕೊ ಸಂಸ್ಥೆ ಮತ್ತು ನಗರ ಪೊಲೀಸ್ ಠಾಣಾ ಸಿಬ್ಬಂದಿ ನಗರದಲ್ಲಿ ಶನಿವಾರ ಮಾದಕ ವ್ಯಸನಿಗಳ 6 ಮಕ್ಕಳನ್ನು ಪತ್ತೆಹಚ್ಚಿ ರಕ್ಷಣೆ ಮಾಡಿದ್ದಾರೆ.
ನಗರದ ಚಲುವಾದಿ ಕೇರಿ, ಐಎಸ್‌ಆರ್ ರಸ್ತೆಯ ಗುಜರಿ ಅಂಗಡಿ ಬಳಿ 6 ಮಕ್ಕಳು ಮಾದಕ ವಸ್ತುಗಳ ಸೇವನೆ ಮಾಡುತ್ತಾ ಗುಜರಿ ವಸ್ತುಗಳನ್ನು ಬೇರ್ಪಡಿಸುತ್ತಿರುವಾಗ ಈ ತಂಡ ಭೇಟಿ ನೀಡಿ, 6 ಮಕ್ಕಳನ್ನು ಡಾನ್‌ಬಾಸ್ಕೋ ಸಂಸ್ಥೆ ಆವರಣದಲ್ಲಿನ ಬಾಲ ಕಾರ್ಮಿಕ ವಸತಿ ನಿಲಯಕ್ಕೆ ಕರೆದೊಯ್ಯಲಾಯಿತು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಮ್ಮದ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಚನ್ನಬಸಪ್ಪ ಪಾಟೇಲ್, ಮಕ್ಕಳ ಸಹಾಯವಾಣಿ ಸಂಯೋಜಕ ಚಿದಾನಂದ, ಪ್ರಕಾಶ್, ನಗರ ಪೊಲೀಸ್ ಠಾಣೆಯ ಮಲ್ಲನಗೌಡ ಸೇರಿದಂತೆ ಇತರೆ ಸಿಬ್ಬಂದಿ ಮಾದಕ ವ್ಯಸನಿಗಳನ್ನು ಪತ್ತೆ ಹಚ್ಚಿ ರಕ್ಷಣೆ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.