ಬಳ್ಳಾರಿ

ಲೋಕಾ ಪೊಲೀಸರಿಂದ ಅಹವಾಲು ಸ್ವೀಕಾರ

Published On :

ಸಂಡೂರು: ಲೋಕಾಯುಕ್ತ ಸರ್ಕಲ್ ಇನ್‌ಸ್ಪೆಕ್ಟರ್ ರಮೇಶ್ ಅವರು ಬುಧವಾರ ಸಂಡೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿದರು.
ಅಂಕಮನಾಳು ಕೆರೆ ನಿರ್ಮಾಣ ಹೋರಾಟ ಸಮಿತಿ ಹಾಗೂ ಯಶವಂತನಗರ ನಾಗರಿಕ ಸೇವಾ ಸಮಿತಿ ಸದಸ್ಯರಾದ ಎಂ. ವೀರಣ್ಣ, ಸಿ.ಜೆ. ಕೆಂಚನಗೌಡ ಇತರರು ಮನವಿ ಸಲ್ಲಿಸಿ, ಆ. 2010ರಲ್ಲಿ ಒಡೆದು ಹೋದ ತಾಲೂಕಿನ ಅಂಕಮನಾಳು ಕೆರೆಯ ಪುನರ್ ನಿರ್ಮಾಣ ಕಾರ್ಯ ಇದುವರೆಗೂ ಪ್ರಾರಂಭವಾಗಿಲ್ಲ. ಕೆರೆ ಒಡೆದು ಹೋಗಿರುವುದರಿಂದ ಗ್ರಾಮದ ಸುತ್ತಮುತ್ತಲು ಅಂತರ್ಜಲದ ಮಟ್ಟ ಕುಸಿದಿದ್ದು, ಬೋರ್‌ವೆಲ್‌ಗಳಲ್ಲಿ ಸಮರ್ಪಕವಾಗಿ ನೀರು ದೊರೆಯದಂತಾಗಿದೆ. ಅಲ್ಲದೆ ತಾಲೂಕಿನ ಯಶವಂತನಗರ ಹಾಗೂ ಸುತ್ತಲಿನ ಗ್ರಾಮದ ರಸ್ತೆಗಳು ಹದಗೆಟ್ಟಿದ್ದು, ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಇವುಗಳ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಗ್ರಾಮದ ಮೂಲಕ ಗೂಡ್ಸ್ ಗಾಡಿಗಳು ಸಂಚರಿಸುತ್ತಿದ್ದರೂ, ಪ್ರಯಾಣಿಕರ ರೈಲು ವ್ಯವಸ್ಥೆ ಮಾಡಿಲ್ಲವೆಂದು ಆರೋಪಿಸಿ, ತಮ್ಮ ಬೇಡಿಕೆಗಳನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು, ಬೇಡಿಕೆಗಳ ಈಡೇರಿಕೆಗೆ ಸಹಕರಿಸಬೇಕೆಂದು ಕೋರಿದರು.
ತಾಲೂಕಿನ ಕೃಷ್ಣನಗರ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲು ವಿಶ್ವ ಬ್ಯಾಂಕ್ ಯೋಜನೆಯಡಿ 2010ರಲ್ಲಿ ಸುಮಾರು ಒಂದುವರೆ ಕಿ.ಮೀ. ಉದ್ದಕ್ಕೆ ಹಾಕಲಾಗಿದ್ದ ಪೈಪ್‌ಗಳನ್ನು ಸರಿ ಇಲ್ಲವೆಂದು ನಿರ್ಧರಿಸಿ, ಪೈಪ್‌ಗಳನ್ನು ಕಿತ್ತು ಮಾರಾಟ ಮಾಡಲಾಗಿದೆ. ಈ ಬಗ್ಗೆ ವಿಚಾರಿಸಿದರೆ ಪಂಚಾಯಿತಿ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ. ಆದ್ದರಿಂದ ಈ ಕುರಿತಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಕೋರಿ ಸತೀಶ್, ಇಮಾಮ್ ಬಾಷ, ಪ್ರವೀಣ್ ಮುಂತಾದವರು ಲೋಕಾಯುಕ್ತ ಸಿಪಿಐ ರಮೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.