ಅಲ್ಲಂ ಕುಟುಂಬದ್ದೇ ಇಲ್ಲಿ ಪಾರುಪತ್ಯ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 29
ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಹಂಚಿಹೋದದ್ದು ಕುರುಗೋಡು ವಿಧಾನಸಭಾ ಕ್ಷೇತ್ರ. ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಸ್ವಲ್ಪ ಭಾಗ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಹಾಗೂ ಸ್ವಲ್ಪಭಾಗ ಕಂಪ್ಲಿ ವಿಧಾನಸಭಾ ಕ್ಷೇತ್ರಕ್ಕೆ ಹರಿದು ಹಂಚಿಹೋಯಿತು. 1957ರಿಂದ 2004ರ ವರೆಗೆ ಸುಮಾರು 11 ಚುನಾವಣೆಗಳು ಇಲ್ಲಿ ನಡೆದಿದ್ದು, ಅದರಲ್ಲಿ ಕಾಂಗ್ರೆಸ್ 9 ಬಾರಿ ಗೆಲುವು ಸಾಧಿಸಿದೆ. ಅದು ಒಂದೇ ಕುಟುಂಬದ ಸದಸ್ಯರು 6 ಬಾರಿಯೂ ಜಯಗಳಿಸಿದ್ದು, ಅದರಲ್ಲಿ ಅಲ್ಲಂ ವೀರಭದ್ರಪ್ಪ ಹ್ಯಾಟ್ರಿಕ್ ಸಾಧನೆ ಮಾಡಿರುವುದೇ ವಿಶೇಷ.
ಒಂದು ಬಾರಿ ಜೆಎನ್,ಪಿ, ಮತ್ತೊಂದು ಬಾರಿ ಜೆಡಿಎಸ್ ಗೆಲವು ಸಾಧಿಸಿದ್ದನ್ನು ಬಿಟ್ಟರೆ, ಈ ಕ್ಷೇತ್ರದ ಮತದಾರ ಬೇರೆಯವರನ್ನು ಕೈ ಹಿಡಿದಿಲ್ಲ. ಆದರೆ 2008ರಲ್ಲಿ ನಡೆದ ಕ್ಷೇತ್ರಗಳ ಪುನರ್ ವಿಂಗಡಣೆಯಿಂದಾಗಿ ಕಂಪ್ಲಿ, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಹೋಯಿತು. ಆ ಎರಡು ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅದರಲ್ಲೂ ಅಳಿಯ, ಮಾವ ಜಯದ ನಗೆ ಬೀರಿದರು. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಬಿ. ಶ್ರೀರಾಮುಲು ಜಯಸಿದರೆ, ಅವರ ಅಳಿಯ ಟಿ.ಎಚ್. ಸುರೇಶ್,ಬಾಬು ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲವು ಸಾಧಿಸಿದರು. ಇನ್ನು ಶ್ರೀರಾಮುಲು ಬಿಜೆಪಿಯಿಂದ ಹೊರಬಂದು, ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಹಿನ್ನೆಲೆಯಲ್ಲಿ ಬಳ್ಳಾರಿ ಗ್ರಾಮೀಣ ಉಪಚುನಾವಣೆ ನಡೆದು, ವಿಜಯಿಯಾದರು.
ಕಾಂಗ್ರೆಸ್,ನ ಭದ್ರಕೋಟೆ ಎಂದು ತೋರಿಸಿದ ಕ್ಷೇತ್ರ: ಒಂದೇ ಕುಟುಂಬದ ಸದಸ್ಯರು 6 ಬಾರಿ ಗೆದ್ದಿರುವುದು ಈ ಕ್ಷೇತ್ರದ ಹೆಗ್ಗಳಿಕೆಯೇ ಸರಿ. 1957ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ ಬಳ್ಳಾರಿ ಪ್ರಸಿದ್ಧ ಮನೆತನದ ಅಲ್ಲಂ ಸುಮಂಗಳಮ್ಮ ಅವರು ಕಾಂಗ್ರೆಸ್,ನಿಂದ ಸ್ಪರ್ಧಿಸಿ ಗೆಲವಿನ ಅಭಿಯಾನ ಆರಂಭಿಸಿದರು. 1957ರಿಂದ 1983ರವರೆಗೆ ಆರು ಚುನಾವಣೆಯಲ್ಲಿ ಕಾಂಗ್ರೆಸ್ ಪಾರುಪತ್ಯವೇ ಮೆರೆದಿತ್ತು.
ಅಲ್ಲಂ ಕುಟುಂಬದ ಸದಸ್ಯರೆ 6 ಬಾರಿ ಗೆಲವು ಸಾಧಿಸಿ, ಕುರುಗೋಡು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್,ನ ಭದ್ರಕೋಟೆ ಎಂಬುದನ್ನು ಎತ್ತಿ ತೋರಿಸಿದರು.
ಆರಂಭದಿಂದಲೂ ಕಾಂಗ್ರೆಸ್,ಗೆ ಜೈ: ಮೊದಲನೆ ಚುನಾವಣೆಯಲ್ಲಿ ಅಲ್ಲಂ ಸುಮಂಗಳಮ್ಮ ಜಯಿಸಿದರೆ, 1962ರ ಚುನಾವಣೆಯಲ್ಲಿ ಅಲ್ಲಂ ಸುಮಂಗಳಮ್ಮ ಅವರ ಪತಿ ಅಲ್ಲಂ ಕರಿಬಸಪ್ಪ ಗೆಲವು ಸಾಧಿಸಿದರು. 1967ರಲ್ಲಿಯೂ ಅಲ್ಲಂ ಕರಿಸಬಸಪ್ಪ ಅವರೇ ಗೆದ್ದರು. ನಂತರ ಅವರ ಮಗ ಅಲ್ಲಂ ವೀರಭದ್ರಪ್ಪ ತಮ್ಮ ಗೆಲವಿನ ಓಟ ಆರಂಭಿಸಿದರು. 1972ರಲ್ಲಿ ಕಾಂಗ್ರೆಸ್,ನ ಎಚ್. ಲಿಂಗಾರೆಡ್ಡಿ ಅವರು ಎನ್,ಸಿಓ ಪಕ್ಷಕ್ಕೆ ಸೇರಿದ್ದ ಅಲ್ಲಂ ಕರಿಬಸಪ್ಪ ಅವರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾದರು. 1978ರಲ್ಲಿ ಬಳ್ಳಾರಿಯ ಮುಂಡ್ಲೂರು ಕುಟುಂಬದ ಎಂ. ರಾಮಪ್ಪ ಅವರು ಅಲ್ಲಂ ಕರಿಬಸಪ್ಪ ವಿರುದ್ಧ ಗೆಲುವು ಸಾಧಿಸಿದರು. 1983ರ ಚುನಾವಣೆಯಲ್ಲಿ ಕಾಂಗ್ರೆಸ್,ನ ಎಚ್. ನಾಗನಗೌಡ ಜಯದ ನಗೆ ಬೀರಿದರು. 1985ರಲ್ಲಿ ಜೆಎನ್,ಪಿಯಿಂದ ಬಿ. ಶಿವರಾಮರೆಡ್ಡಿ ಆರಸಿ ಬಂದರು.
ಅಲ್ಲಂ ವೀರಭದ್ರಪ್ಪ ಹ್ಯಾಟ್ರಿಕ್ ಸಾಧನೆ: ಅಲ್ಲಂ ಕುಟುಂಬದಲ್ಲಿ ಅಲ್ಲಂ ಕರಿಬಸಪ್ಪ ಹಾಗೂ ಇವರ ಪತ್ನಿ ಅಲ್ಲಂ ಸುಮಂಗಳಮ್ಮ ಸೇರಿ ಮೂರು ಬಾರಿ ಗೆಲುವು ಸಾಧಿಸಿದ್ದರೆ, ಇವರಿಬ್ಬರ ಪುತ್ರ ಅಲ್ಲಂ ವೀರಭದ್ರಪ್ಪ ಅವರು 1989, 1994, 1999ರಲ್ಲಿ ಗೆಲವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಅಲ್ಲಂ ಕುಟುಂಬದ ಸದಸ್ಯರು ಈ ಕ್ಷೇತ್ರದಲ್ಲಿ ಆರು ಬಾರಿ ಗೆಲವು ಸಾಧಿಸಿ ದಾಖಲೆ ನಿರ್ಮಿಸಿದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಅಲ್ಲಂ ವೀರಭದ್ರಪ್ಪ ಮೂರನೇ ಸ್ಥಾನಕ್ಕೆ ತಳಲ್ಪಟ್ಟರು, ಜೆಡಿಎಸ್,ನ ಎನ್. ಸೂರ್ಯನಾರಾಯಣ ರೆಡ್ಡಿ ಅವರು ಗೆಲವು ಸಾಧಿಸಿದರು. ಇನ್ನು 2008ರಲ್ಲಿ ಕ್ಷೇತ್ರ ಕಂಪ್ಲಿ, ಬಳ್ಳಾರಿ ಗ್ರಾಮೀಣಕ್ಕೆ ಹಂಚಿಹೋಗಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದರಿಂದ ಅಲ್ಲಂ ಕುಟುಂಬದವರು ಕುರುಗೋಡು ವಿಧಾನಸಭಾ ಕ್ಷೇತ್ರದಿಂದ ದೂರು ಸರಿದರು.
ಚುನಾವಣೆ ಎಂಬ ಪ್ರಕ್ರಿಯೆ ಆರಂಭದಿಂದಲೂ ಅಲ್ಲಂ ಕುಟುಂಬದ ಪಾರುಪತ್ಯ ಮೆರೆದು ಕಾಂಗ್ರೆಸ್,ನ ಭದ್ರಕೋಟೆಯಾಗಿ ಬಿಂಬತವಾಗಿದ್ದ ಕುರುಗೋಡು ಕ್ಷೇತ್ರ ಈಗ ಇಲ್ಲದಾಗಿದೆ. ಎರಡು ಕ್ಷೇತ್ರಗಳಿಗೆ ಭಾಗವಾಗಿ ಹಂಚಿ ಹೋಗಿದೆ. ಆ ಎರಡು ಕ್ಷೇತ್ರಗಳಲ್ಲಿ ಈಗ ಭಾರಿ ಕುತೂಹಲ ಮೂಡಿಸಿರುವ ಜಿದ್ದಾಜಿದ್ದಿ ನಡೆದಿದೆ. ಈ ಬಾರಿಯ ಚುನಾವಣೆಯ ಫಲಿತಾಂಶ ಮಾತ್ರ ಕ್ಷೇತ್ರಗಳ ಮತದಾರರಲ್ಲಿ ತೀವ್ರ ಆಸಕ್ತಿ ಕೆರಳಿಸಿದೆ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

