ಬಳ್ಳಾರಿ

ರಂಗಭೂಮಿಗೆ ಪರಿವರ್ತನೆ ಶಕ್ತಿ ಇದೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 29
ಹದಗೆಟ್ಟಿರುವ ಸಮಾಜ, ಇಂದಿನ ರಾಜಕೀಯ ಪರಿಸ್ಥಿತಿ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಸರಿಪಡಿಸುವ ಶಕ್ತಿ ರಂಗಭೂಮಿಗಿದೆ ಎಂದು ಡಾ. ರಾಜಪ್ಪ ದಳವಾಯಿ ಹೇಳಿದರು.
ರಂಗಜಂಗಮ ಗ್ರಾಮೀಣ ಅಭಿವೃದ್ದಿ ಸಂಸ್ಥೆಯು ನಗರದ ರಾಘವ ಕಲಾಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಅವರು ಮಾತನಾಡಿ, ಸಾಮಾಜಿಕ ಕಳಕಳಿಯನ್ನು ಹೊಂದಿರುವ ರಂಗಭೂಮಿಯು ನಾಟಕಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಸರಿಪಡಿಸಬೇಕಿದೆ, ಆ ನಿಟ್ಟಿನಲ್ಲಿ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಸಾಂಬಶಿವ ದಳವಾಯಿ ಮಾತನಾಡಿ, ರಂಗಭೂಮಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ಕಿರುತೆರೆ, ಹಿರಿತೆರೆಯಿಂದಲ್ಲ. ಯುವಕರಲ್ಲಿ ರಂಗಭೂಮಿ ಕಲೆ ಬಗ್ಗೆ ಆಸಕ್ತಿಯ ಕೊರತೆಯಿಂದ. ಹೀಗಾಗಿ ರಂಗ ಕಾಯಕವನ್ನು ಕಟ್ಟಿಬೆಳೆಸುವ ಕೆಲಸ ಮೊದಲು ಯುವಕರಿಂದಲೇ ಪ್ರಾರಂಭಿಸಬೇಕಿದೆ. ಚಿಕ್ಕ ವಯಸ್ಸಿನಲ್ಲಿಯೇ ಯುವಕರು ರಂಗಭೂಮಿಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಬೇಕು ಎಂದು ಸಲಹೆ ನೀಡಿದರು.
ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್, ನಾಡೋಜ ಬೆಳಗಲ್ ವೀರಣ್ಣ ಮಾತನಾಡಿದರು. ಸಮಾರಂಭದಲ್ಲಿ ನಾಟಕಕಾರ ರಾಜಪ್ಪ ದಳವಾಯಿ, ಸಾಂಬಶಿವ ದಳವಾಯಿ ಸೇರಿ ಜಿಲ್ಲೆಯ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು. ನಂತರ ರಂಗತೋರಣ, ಮಯೂರ ಕಲಾಸಂಘ, ರಂಗಜಂಗಮದಿಂದ ಸಮನ್ವಯದೆಡೆಗೆ  ನಾಟಕ ಪ್ರದರ್ಶನಗೊಂಡಿತು. ಕಿಶೋರ್, ಪ್ರದೀಪ್ ಅವರಿಂದ ಏಕಪಾತ್ರಾಭಿನಯ, ಕಪ್ಪಗಲ್ಲು ಟಿ.ಬಸವರಾಜ ಬಯಲಾಟ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಶಿವರುದ್ರಯ್ಯ ಸ್ವಾಮಿ, ಜಂಭುನಾಥ, ರಮೇಶ್,ಗೌಡ ಪಾಟೀಲ್, ಶಂಕರ್ ನಾಯ್ಡು, ಬಿ. ಗಂಗಣ್ಣ, ಸಿದ್ದಲಿಂಗಯ್ಯಸ್ವಾಮಿ, ವಸಂತ, ಉಮೇಶ್ ಇತರರು ಇದ್ದರು. ಜೋಳದರಾಶಿ ಪಂಪನಗೌಡ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.