ಬಳ್ಳಾರಿ

ಜಿಲ್ಲಾ ವಾರ್ಷಿಕ ಸಾಲ ಯೋಜನೆ ಬಿಡುಗಡೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮಾ. 29
ಜಿಲ್ಲಾ ವಾರ್ಷಿಕ ಸಾಲ ಯೋಜನಾ ಪುಸ್ತಕವನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಮಂಜುನಾಥ ನಾಯಕ್ ಜಿಪಂ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ಜಿಲ್ಲೆಯಲ್ಲಿ ರು. 2005 ಕೋಟಿ ವೆಚ್ಚದ ಕೃಷಿ ಆಧಾರಿತ ಸಾಲ, ರು. 304 ಕೋಟಿ ವೆಚ್ಚದ ಕೃಷಿಯೇತರ, ರು. 588 ಕೋಟಿ ವೆಚ್ಚದ ಇತರ ಕ್ಷೇತ್ರದ ಸಾಲ ಸೌಲಭ್ಯ ಸೇರಿದಂತೆ ಒಟ್ಟು ರು. 3,369.61 ಕೋಟಿ ಮೊತ್ತದ ಪುಸ್ತಕ ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿ, ಆದ್ಯತಾ ವಲಯಕ್ಕಾಗಿ ಒಟ್ಟು ರು. 2,897.93 ಕೋಟಿ ಮೀಸಲಿರಿಸಲಾಗಿದೆ. ರು. 471.68 ಕೋಟಿ ಆದ್ಯತಾ ರಹಿತ ವಲಯಕ್ಕೆ ಇಡಲಾಗಿದೆ. ಬೆಳೆ ಸಾಲಕ್ಕಾಗಿ ರು. 1,263.97 ಕೋಟಿ, ಸಣ್ಣ ನೀರಾವರಿಗೆ ರು. 128.81 ಕೋಟಿ, ಭೂ ಅಭಿವೃದ್ಧಿಗಾಗಿ ರು. 157.17 ಕೋಟಿ, ತೋಟಗಾರಿಕೆಗೆ ರು. 42.83 ಕೋಟಿ, ಹೈನುಗಾರಿಕೆಗೆ ರು. 43.16 ಕೋಟಿ, ಕೋಳಿ ಸಾಕಾಣಿಕೆಗೆ ರು. 23.64 ಕೋಟಿ, ಗೋದಾಮು ನಿರ್ಮಾಣಕ್ಕೆ ರು. 77.88 ಕೋಟಿ ಸೇರಿದಂತೆ ಕೃಷಿ ಪೂರಕ ಚಟುವಟಿಕೆಗೆ ರು. 741.45 ಕೋಟಿ ಹಾಗೂ ಕೃಷಿಯೇತರ ಚಟುವಟಿಕೆಗೆ ರು. 66.44 ಕೋಟಿ ಮೀಸಲಿರಿಸಲಾಗಿದೆ. ವಾಣಿಜ್ಯ ಬ್ಯಾಂಕುಗಳು ರು. 1,669 ಕೋಟಿ, ಪ್ರಗತಿ ಗ್ರಾಮೀಣ ಬ್ಯಾಂಕ್ ರು. 764 ಕೋಟಿ, ಕೆಎಸ್,ಎಫ್,ಸಿ ರು. 42 ಕೋಟಿ, ಬಿಡಿಸಿಸಿಬಿ ರು. 286 ಕೋಟಿ, ಕೆಸಿಎಆರ್,ಡಿ ಬ್ಯಾಂಕ್ ರು. 11 ಕೋಟಿ ಮತ್ತು ನ್ಯೂ ಜನರೇಷನ್ ಬ್ಯಾಂಕುಗಳು ರು. 124 ಕೋಟಿ ಸಾಲ ಸೌಲಭ್ಯ ನೀಡಲಿವೆ ಎಂದರು.
ಕೃಷಿಕರು, ಕೃಷಿ ಪೂರಕ ಚಟುವಟಿಕೆಗೆ ಹಾಗೂ ಸರ್ಕಾರದ ಯೋಜನೆಗಳಡಿ ನೀಡುವ ಸಾಲ ಸೌಲಭ್ಯವನ್ನು ಸುಲಭ ರೀತಿಯಲ್ಲಿ ಅರ್ಹರಿಗೆ ನೀಡಬೇಕು. ಬಡವರು, ಶ್ರಮ ಜೀವಿಗಳು, ಗ್ರಾಮೀಣ ಪ್ರದೇಶ, ಅನಕ್ಷರಸ್ಥ ಫಲಾನುಭವಿಗಳಿಗೆ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ, ಸೌಲಭ್ಯ ದೊರಕುವಂತೆ ಕ್ರಮ ಕೈಗೊಳ್ಳಬೇಕಿದೆ. ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಬಳಿಗೆ ಬರುವ ಗ್ರಾಹಕರಿಗೆ ಸೂಕ್ತ ಮಾಹಿತಿ ನೀಡಿ, ಯೋಜನೆಗಳನ್ನು ಅನುಷ್ಠಾನಗೊಳಿಸುವ ಇಲಾಖೆಗಳು ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವಿರಬೇಕು. ಇಲಾಖೆಗಳು ಆಯ್ಕೆ ಮಾಡಿದ ಫಲಾನುಭವಿಗಳಿಗೆ ಬ್ಯಾಂಕ್,ಗಳು ಸಾಲ ಸೌಲಭ್ಯ ನೀಡಬೇಕು. ಫಲಾನುಭವಿಗಳು ಸಾಲ ಸೌಲಭ್ಯವನ್ನು ಮರುಪಾವತಿ ಮಾಡಬೇಕು. ಸಾಲ ತೆಗೆದುಕೊಂಡ ಉದ್ದೇಶಕ್ಕಾಗಿ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿಯಾಗಬೇಕು ಎಂದು ಕರೆ ನೀಡಿದರು.
ಸಿಂಡಿಕೇಟ್ ಬ್ಯಾಂಕ್ ಎಜಿಎಂ ವಸಂತಕುಮಾರ್ ಮಾತನಾಡಿ, ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಶೇ. 24ರಷ್ಟು ಅಧಿಕ ಸಾಲ ಯೋಜನೆ ತಯಾರಿಸಲಾಗಿದೆ. ಈ ವರ್ಷ ಶೇ. 100ರಷ್ಟು ಪ್ರಗತಿ ಸಾಧಿಸಬೇಕು. ಅರ್ಹರಿಗೆ ಸುಲಲಿತವಾಗಿ ಸಾಲ ಸೌಲಭ್ಯ ದೊರಕುವಂತಾಗಬೇಕು ಎಂದರು.
ಬೆಂಗಳೂರಿನ ಆರ್,ಬಿಐ ಎಜಿಎಂ ಕೆ. ಶ್ರೀನಿವಾಸ್, ಸಿಬಿಎಚ್ ಎಜಿಎಂ ವೆಂಕಟೇಶ್ವರರಾವ್, ನಬಾರ್ಡ್ ಡಿಡಿಎಂ ಎಸ್.ಕೆ.ಕೆ. ಭಾರದ್ವಾಜ್, ಎಸ್,ಬಿಎಂನ ಎಜಿಎಂ ಚಂದ್ರಶೇಖರ್, ವಿವಿಧ ಇಲಾಖೆಗಳ ಅಧಿಕಾರಿಗಳು, ಬ್ಯಾಂಕುಗಳ ವ್ಯವಸ್ಥಾಪಕರು ಉಪಸ್ಥಿತರಿದ್ದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಸ್.ಎಂ. ಗೋರಬಾಳ್ ಸ್ವಾಗತಿಸಿ, ಸಭೆಗೆ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.