ಬಳ್ಳಾರಿ

ಎಸ್‌ಯುಸಿಐ ಅಭ್ಯರ್ಥಿ ರು. 1.19 ಲಕ್ಷ ಖರ್ಚು

Published On :

ಬಳ್ಳಾರಿ: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಎಸ್‌ಯುಸಿಐ(ಸಿ) ಅಭ್ಯರ್ಥಿ ಡಿ. ನಾಗಲಕ್ಷ್ಮಿ ಅವರ ಚುನಾವಣಾ ಖರ್ಚು-ವೆಚ್ಚ ಮೇ 3ರವರೆಗೆ ರು. 1,91,165 ಆಗಿದೆ ಎಂದು ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಕೆ. ಸೋಮಶೇಖರ್ ಸ್ಪಷ್ಟೀಕರಣ ನೀಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಲಾಗಿದ್ದು, ತಮ್ಮ ಪಕ್ಷದ ಅಭ್ಯರ್ಥಿ ನಾಗಲಕ್ಷ್ಮಿ ಏ. 15ರಂದು 5000 ಕರಪತ್ರ ಮುದ್ರಣಕ್ಕೆ ಅನುಮತಿ ಕೋರಿದ್ದರು. ಆದರೆ ಏ. 19ರಂದು ಕಚೇರಿಯಿಂದ ಅನುಮತಿ ನೀಡುವಾಗ ಚುನಾವಣಾಧಿಕಾರಿಗಳ ಕಣ್ತಪ್ಪಿನಿಂದ ಐದು ಸಾವಿರ ಕರಪತ್ರ ಬದಲಾಗಿ ಪೋಸ್ಟರ್ ಎಂದು ಪರವಾನಗಿ ನೀಡಲಾಗಿದ್ದು, ಈ ಪತ್ರದ ಆಧಾರದ ಮೇಲೆ ಚುನಾವಣಾ ವೆಚ್ಚ ವೀಕ್ಷಕರು ರು. 4,91,400 ಖರ್ಚು-ವೆಚ್ಚ ಆಗಿದೆ ಎಂದು ತಿಳಿಸಿದ್ದರು. ಚುನಾವಣಾಧಿಕಾರಿಗಳ ಕಣ್ತಪ್ಪಿನಿಂದ ಆದ ವಿವರವನ್ನು ನಮ್ಮ ಪಕ್ಷದ ಅಭ್ಯರ್ಥಿ ಪರ ನೀಡಲಾಗಿದ್ದು, ನಂತರ ಚುನಾವಣಾಧಿಕಾರಿಗಳು ಏ. 29ರಂದು ತಮ್ಮ ನಡಾವಳಿಯಲ್ಲಿ ನಾವು ಸ್ಪಷ್ಟೀಕರಿಸಿದಂತೆ ಆದೇಶಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಐದು ಸಾವಿರ ಪೋಸ್ಟರ್ ಬದಲಾಗಿ 5000 ಕರಪತ್ರ (ಪಾಂಪ್ಲೆಟ್ಸ್)ಗೆ ಅನುಮತಿ ನೀಡಲಾಗಿದೆ.  ಆದ್ದರಿಂದ ಎಸ್‌ಯುಸಿಐ(ಸಿ) ಜಿಲ್ಲಾ ಸಮಿತಿಯು ಈ ಕುರಿತಂತೆ ತಮ್ಮ ಪಕ್ಷದ ಅಭ್ಯರ್ಥಿಯ ಚುನಾವಣಾ ಖರ್ಚು-ವೆಚ್ಚ ಪರಿಶೀಲಿಸಿ, ಸ್ಪಷ್ಟೀಕರಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.