ಬಳ್ಳಾರಿ

ಅರೆ ಬರೆ ಕಾಮಗಾರಿ: ಚರಂಡಿಗೆ ಕಾರು

Published On :

ಕೊಟ್ಟೂರು: ಸ್ಥಳೀಯ ಪಪಂ ಮತ್ತು ಲೋಕೋಪಯೋಗಿ ಇಲಾಖೆಯವರ ಅರೆ ಬರೆ ಕಾಮಗಾರಿ ನಿರ್ವಹಣೆಯಿಂದಾಗಿ ಪಟ್ಟಣದಲ್ಲಿನ ಗಾಂಧಿ ವೃತ್ತದ ಬಳಿ ದೊಡ್ಡ ದೊಡ್ಡ ಕಂದಕಗಳು ನಿರ್ಮಾಣವಾಗಿವೆ. ವಾಹನ ಚಾಲಕರು, ಸಾರ್ವಜನಿಕರು ದಿನನಿತ್ಯ ಫಜೀತಿಗೆ ಒಳಗಾಗುತ್ತಿದ್ದಾರೆ.  ಗಾಂಧಿ ವೃತ್ತದ ಪಕ್ಕದಲ್ಲೇ ಇರುವ, ಉಜ್ಜಿನಿ-ಕೂಡ್ಲಿಗಿ-ಹರಪನಹಳ್ಳಿ ರಸ್ತೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಅಭಿವೃದ್ಧಿಗೆಂದು ಮೊದಲಿನ ರಸ್ತೆಯನ್ನು ಅಗೆದು ಹಾಗೆಯೇ ಬಿಡಲಾಗಿದೆ. 4-5 ತಿಂಗಳು ಗತಿಸಿದರೂ ರಸ್ತೆಯನ್ನು ದುರಸ್ತಿಗೊಳಿಸುವ ಕಾರ್ಯಕ್ಕೆ ಮುಂದಾಗದೇ ಇದ್ದ ಪರಿಣಾಮ ಬುಧವಾರ ಈ ಮಾರ್ಗದ ಮೂಲಕ ಸಾಗುತ್ತಿದ್ದ ಕಾರೊಂದು ಹಠಾತ್ತನೆ ಆಯತಪ್ಪಿ ಚರಂಡಿಯೊಳಗೆ ಸಿಲುಕಿಕೊಂಡಿತು. ಪಟ್ಟಣದ ಪ್ರಮುಖ ರಸ್ತೆ ಇದಾಗಿದ್ದೂ ಈ ರಸ್ತೆ ಗುಂಟಲೇ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಈ ಮಾರ್ಗದುದ್ದಕ್ಕೂ ಸಂಚರಿಸುವ ದಾರಿಹೋಕರು ಮತ್ತು ವಾಹನ ಸಂಚಾರರು ಈ ಕುರಿತು ಸ್ಥಳೀಯ ಆಡಳಿತ ಮತ್ತು ಲೋಕೋಪಯೋಗಿ ಇಲಾಖೆಯವರ ಗಮನ ಸೆಳೆದು ರಸ್ತೆ ದುರಸ್ತಿಗೆ ಈ ಹಿಂದೆ ಒತ್ತಾಯಿಸಿದರು. ಇದಕ್ಕೆ ಕಿವಿಗೊಡದ ಅಧಿಕಾರಿಗಳು ಅದ್ವಾನ ರಸ್ತೆಯನ್ನು ದುರಸ್ತಿಗೊಳಿಸುವುದಕ್ಕೆ ಇನ್ನೂ ತೊಡಗಿಸಿಕೊಂಡಿಲ್ಲ. ಹಲವು ಬಗೆಯ ಸಣ್ಣಪುಟ್ಟ ಅಪಘಾತಗಳು ಈಗಾಗಲೇ ಸಂಭವಿಸಿವೆ. ಆದರೂ ಗಮನ ಹರಿಸಿಲ್ಲ ಎಂದು ಪಟ್ಟಣದ ಮುದುಕಪ್ಪ 'ಕನ್ನಡಪ್ರಭ'ಕ್ಕೆ ಬುಧವಾರ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.