ಬಳ್ಳಾರಿ

ಹಣ, ಹೆಂಡ ಹಂಚಿ ಸುರೇಶ್‌ಬಾಬು ಗೆಲವು

Published On :

ಕಂಪ್ಲಿ: ಕಂಪ್ಲಿ ಕ್ಷೇತ್ರದ ಜನತೆಗೆ ಹಣದ ಆಸೆ, ಆಮಿಷ ತೋರಿಸುವುದರ ಮೂಲಕ ಶಾಸಕ ಸುರೇಶ್ ಬಾಬು ಜಯ ಸಾಧಿಸಿದ್ದಾರೆ ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪರಾಭವಗೊಂಡಿರುವ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಜೆ.ಎನ್. ಗಣೇಶ್ ಆರೋಪಿಸಿದರು.
ಪಟ್ಟಣದಲ್ಲಿ ಬುಧವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಟಿ.ಎಚ್. ಸುರೇಶ್‌ಬಾಬು 5 ವರ್ಷಗಳ ಕಾಲ ಅನ್ಯ ಮಾರ್ಗದಿಂದ ಗಳಿಸಿದ ಹಣ, ಹೆಂಡ ಜನತೆಗೆ ಹಂಚುವ ಮೂಲಕ ಗೆದ್ದಿದ್ದಾರೆ ಎಂದು ದೂರಿದರು.
ಸುರೇಶ್‌ಬಾಬು ಕಾಂಗ್ರೆಸ್ ಬಂಡಾಯ ಕಾರ್ಯಕರ್ತರನ್ನು ಹೆದರಿಸಿ, ಸುಳ್ಳು ಪ್ರಕರಣ ದಾಖಲಿಸುವಲ್ಲಿ ಮುಂದಾಗಿದ್ದು, ಈಗಾಗಲೇ ಕ್ಷೇತ್ರದ ವಿವಿಧೆಡೆ 3-4 ಪ್ರಕರಣಗಳನ್ನು ದಾಖಲಿಸಿ, ಭಯದ ವಾತಾವರಣ ಸೃಷ್ಟಿಸಿದ್ದಾರೆ. ಈ ಹಿಂದೆ ನಡೆಸಿದ ದೌರ್ಜನ್ಯಗಳನ್ನು ಮತ್ತೆ ಮುಂದುವರಿಸಿದ್ದು, ಬೆಂಬಲಿಗರ ಪರ ನಿಂತು ಇಂತಹ ದೌರ್ಜನ್ಯಗಳನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂದರು.
ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುಜ್ಜಲ ನಾಗರಾಜ್ ಸೇರಿದಂತೆ ವಿವಿಧ ಪಕ್ಷಗಳು ಚುನಾವಣೆಯಲ್ಲಿ ಬಿಎಸ್ಸಾರ್ ಪಕ್ಷಕ್ಕೆ ಬುಕ್ಕಿಂಗ್ ಆಗುವ ಮೂಲಕ ಸುರೇಶ್ ಬಾಬು ಗೆಲುವಿಗೆ ಕಾರಣರಾಗಿದ್ದಾರೆ ಎನ್ನುವ ಮಾತುಗಳೂ ಕ್ಷೇತ್ರದ ಜನತೆಯಿಂದ ಕೇಳಿ ಬರುತ್ತಿವೆ. ಗುಜ್ಜಲ ನಾಗರಾಜ್ ತಾನೂ ಗೆಲ್ಲಲು ಪ್ರಾಮಾಣಿಕವಾಗಿ ಯತ್ನಿಸದೆ, ನನ್ನನ್ನು ಗೆಲ್ಲಲು ಬಿಡದೆ ಠೇವಣಿ ಕಳೆದುಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾದ ನನಗೆ 36,402 ಮತಗಳನ್ನು ನೀಡಿ ಮತದಾರರು ಬೆಂಬಲಿಸಿದ್ದು, ನನಗೆ ಧೈರ್ಯ ಮತ್ತು ಉತ್ಸಾಹ ಬಂದಿದೆ. ಮತ ನೀಡಿದ ಮತದಾರರಿಗೆ ನ್ಯಾಯ ಒದಗಿಸಲು ಶ್ರಮಿಸುತ್ತೇನೆ ಎಂದರು.
ದೇವಲಾಪುರ ಗೌಡ್ರು ಅಂಜಿನಪ್ಪ , ನೆಲ್ಲೂಡಿ ಓಬಳೇಶ್, ಪಿ. ಕೊಂಡಯ್ಯ, ಸೋಮಲಿಂಗಪ್ಪ, ಜವುಕಿನ ಜಗನ್ ಮೋಹನ್, ಗೋನಾಳ್ ನಾಗರಾಜ್, ಹಂಪಾದೇವನಹಳ್ಳಿ ವೆಂಕಟೇಶ್, ಇಟಗಿ ಎಸ್. ಹನುಮಂತಪ್ಪ, ನಂ. 2 ಮುದ್ದಾಪುರ ಪಿ. ಮಧು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.