ಬಳ್ಳಾರಿ

ಲೆನಿನ್ ಕ್ಲಬ್ ಬಟ್ಟೆ ಮಳಿಗೆ ಉದ್ಘಾಟನೆ

Published On :

ಬಳ್ಳಾರಿ: ಆದಿತ್ಯ ಬಿರ್ಲಾ ಸಮೂಹದ ವತಿಯಿಂದ ರಾಜ್ಯದ 12ನೇ, ದೇಶದ 83ನೇ ಲಿನೆನ್ ಕ್ಲಬ್ ಬಟ್ಟೆಗಳ ವಿಶೇಷ ವ್ಯಾಪಾರ ಮಳಿಗೆಯನ್ನು ನಗರದ ಸುಧಾಕ್ರಾಸ್ ಸಮೀಪದಲ್ಲಿ ಆದಿತ್ಯ ಬಿರ್ಲಾ ಸಮೂಹದ ಮಾರುಕಟ್ಟೆ ವಿಭಾಗದ ಎಜಿಎಂ ಕೌಶಲ್ ಸಿಂಗ್ ಹಾಗೂ ವೀವಿ ಸಂಘದ ಮಾಜಿ ಕಾರ್ಯದರ್ಶಿ ಪಲ್ಲೇದ ಪಂಪಾಪತೆಪ್ಪ ಉದ್ಘಾಟಿಸಿರು.
ಕೌಶಲ್ ಸಿಂಗ್ ಮಾತನಾಡಿ, ಬಿರ್ಲಾ ಸಮೂಹವು ಫ್ರಾನ್ಸ್ ಮತ್ತು ಬೆಲ್ಜಿಯಂ ದೇಶಗಳಿಂದ ಆಮದು ಮಾಡಿಕೊಳ್ಳಲಾದ ಫ್ಲಾಕ್ಸ್ ಗಿಡದ ನಾರಿನಿಂದ ತಯಾರಾದ ನೂಲಿನಿಂದ ಉತ್ಪಾದಿಸಿರುವ ಲಿನೆನ್ ಸಿದ್ಧ ಉಡುಪುಗಳು, ಪ್ಯಾಂಟ್, ಶರ್ಟ್, ಮಹಿಳೆಯರ ಉಡುಪುಗಳು, ಕೈಚೀಲ, ಮೇಲ್ವಸ್ತ್ರ, ಹಾಫ್ ಕೋಟ್‌ಗಳನ್ನು ಮತ್ತು ವಿವಿಧ ವರ್ಷಗಳ ವಿಶಾಲ ವಸ್ತ್ರ ಭಂಡಾರವನ್ನಾಗಿ ಈ ಮಳಿಗೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಬಳ್ಳಾರಿಯಂತಹ ಹೆಚ್ಚಿನ ತಾಪಮಾನದ ಪ್ರದೇಶಕ್ಕೆ ಚರ್ಮಸ್ನೇಹಿ ಲಿನೆನ್ ವಸ್ತ್ರಗಳು ಸ್ಪರ್ಶ ಸುಖದ ಹೊಸ ಅನುಭವ ನೀಡುತ್ತದೆ. ಲಿನೆನ್ ವಸ್ತ್ರಗಳು ಬ್ಯಾಕ್ಟೀರಿಯಾ ನಿರೋಧಕ ಶಕ್ತಿ ಹೊಂದಿದ್ದು, ನೀರಿನ ಅಂಶವನ್ನು ಹತ್ತಿ ವಸ್ತ್ರಗಳಿಗಿಂತ ಎರಡು ಪಟ್ಟು ವೇಗದಲ್ಲಿ ಹೀರಿಕೊಳ್ಳುವ ವಿಶಿಷ್ಠ ಗುಣ ಹೊಂದಿವೆ ಎಂದು ವಿವರಿಸಿದರು.
ಆದಿತ್ಯ ಬಿರ್ಲಾ ಸಮೂಹದ ಲಿನೆನ್ ನೂಲನ್ನು ಖ್ಯಾತ ವಸ್ತ್ರ ಬ್ರಾಂಡ್‌ಗಳಾದ ರೇಮಂಡ್ಸ್, ಕಲರ್ ಪ್ಲಸ್, ವ್ಯಾನ್ ಹ್ಯೂಸೆನ್, ಪಾರ್ಕ್ ಅವೆನ್ಯೂ, ವಿಲ್ಸ್ ಲೈಫ್ ಸ್ಟೈಲ್‌ಗಳು ತಮ್ಮ ವಿವಿಧ ವಸ್ತ್ರ ವಿನ್ಯಾಸಗಳಿಗೆ ಬಳಸುತ್ತಿವೆ. ಲಿನೆನ್ ವಸ್ತ್ರಗಳ ಮೇಲೆ ಜನರ ಅಭಿಮಾನ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎಂದು ಸಮೂಹದ ವಸ್ತ್ರ ವಿಭಾಗದ ಅಧ್ಯಕ್ಷ ಎಸ್. ಕೃಷ್ಣಮೂರ್ತಿ ಹೇಳಿದರು. ಈ ಸಂದರ್ಭದಲ್ಲಿ ಮಳಿಗೆಯ ಮಾಲೀಕ ವಿ. ರಾಮು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.