ಬಳ್ಳಾರಿ

31ರಂದು ಅರಣ್ಯ ಇಲಾಖೆ ವಿರುದ್ಧ ಧರಣಿ

Published On :

ಹೊಸಪೇಟೆ:   ತಾಲೂಕಿನ ಪೋತಲಕಟ್ಟೆ ಗ್ರಾಮದ ಎಸ್ಸಿ, ಎಸ್ಟಿ, ಬಡ ರೈತರ ಮೇಲೆ ಅರಣ್ಯ ದೌರ್ಜನ್ಯ ನಡೆಸಿ, ಅವರನ್ನು ಕಾರಾಗೃಹದಲ್ಲಿ ಇರಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ಅಮಾನತಿಗೆ ಒತ್ತಾಯಿಸಿ ಮೇ 31ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆದಿವಾಸಿ ಜನಸೇವಾ ಸಂಘದ ಜಿಲ್ಲಾ ಸಂಚಾಲಕ ಪಿ. ಬೋರಯ್ಯ ತಿಳಿಸಿದರು.  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮದ ಪ್ರಕಾರ ಅನುಸೂಚಿತ ಬುಡಕಟ್ಟಿನ ಸಮುದಾಯದವರು ಅರಣ್ಯ ಭೂಮಿಯನ್ನು ಸಾಗುವಳಿ ಮಾಡಿದ್ದಾರೆ. ಅವರ ಅದಿಭೋಗದಲ್ಲಿರುವ ಅರಣ್ಯ ಭೂಮಿಯನ್ನು ಅಧಿಕೃತಗೊಳಿಸಿ ಸಾಗುವಳಿ ಪತ್ರ ನೀಡಬೇಕೆಂದಿದೆ.  ಆದರೆ ಅವರನ್ನು ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆಂದು ದೂರಿದರು. ಪೋತಲಕಟ್ಟೆ ರೈತ ಎಚ್. ದೇವೇಂದ್ರಪ್ಪ ಮಾತನಾಡಿ, ಸುಮಾರು 90 ವರ್ಷಗಳಿಂದಲೂ ಅರಣ್ಯ ಭೂಮಿಯನ್ನು ಉಳಿಮೆ ಮಾಡಿಕೊಂಡು ಬಂದಿದ್ದೇವೆ. ಮಳೆ ಬಿದ್ದ ಹಿನ್ನೆಲೆಯಲ್ಲಿ ಮೇ 10ರಂದು ಉಳುಮೆ ಮಾಡುತ್ತಿದ್ದಾಗ ಅರಣ್ಯ ಇಲಾಖೆಯ ಆರ್‌ಎಫ್‌ಓ, ಫಾರೆಸ್ಟರ್, ಗಾರ್ಡ್‌ಗಳು ಯಾವುದೇ ಮುನ್ಸೂಚನೆ ನೀಡದೇ ಜಮೀನುಗಳಿಗೆ ನುಗ್ಗಿ ದಾಂಧಲೆ ನಡೆಸಿದರು. ತಮ್ಮನ್ನು ಸೇರಿ ಗ್ರಾಮದ ಅಮಾಯಕ ರೈತರಾದ ಹನುಮಂತಪ್ಪ, ಶೇಕಪ್ಪ, ನಾಗರಾಜ್, ಷಣ್ಮುಖಪ್ಪ, ಈರಪ್ಪ ವಿರುದ್ಧ ಕೇಸು ದಾಖಲಿಸಿ, ಹೊಸಪೇಟೆ ಕಾರಾಗೃಹದಲ್ಲಿ 12 ದಿನ ಇಟ್ಟಿದ್ದರು. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.