ಮಸೀದಿ ಮರದಲ್ಲಿ ಲಕ್ಷ್ಮೀ ಪ್ರತ್ಯಕ್ಷ
ಹೂವಿನಹಡಗಲಿ: ಮಸೀದಿಯಲ್ಲಿರುವ ಮರದಲ್ಲಿ ಲಕ್ಷ್ಮೀ ಪ್ರತ್ಯಕ್ಷವಾಗಿದ್ದಾಳೆ, ಮರದ ಗಂಟಿನಲ್ಲಿ ದೇವತೆ ಮೂಡಿದ್ದಾಳೆಂಬ ಗಾಳಿ ಸುದ್ದಿ ಪಟ್ಟಣದಲ್ಲಿ ಹರಡುತ್ತಿದ್ದಂತೆಯೇ ಇದರ ಕೌತುಕವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಧಾವಿಸಿದ್ದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಮೂಡಿತ್ತು. ಬುಧವಾರ ರಾತ್ರಿ ಪಟ್ಟಣದ ಹೃದಯ ಭಾಗದ ಉದ್ಭವ ವೃತ್ತದಲ್ಲಿ ಈ ಗಾಳಿ ಸುದ್ದಿ ಹರಡುತ್ತಿದ್ದಂತೆ, ಮೆಹಬೂಬ್ ಸುಬಾನಿ ಮಸೀದಿ (ಜೋಡು ಮಸೀದಿ) ಮುಂದೆ ಸಾವಿರಾರು ಜನರು ಮರದ ಗಂಟಿನಲ್ಲಿ ಲಕ್ಷ್ಮೀ ಪ್ರತ್ಯಕ್ಷಳಾಗಿದ್ದಾಳೆಂದು ಮರದ ಗಂಟಿಗೆ ಕುಂಕುಮ, ಅರಿಸಿಣ ಹಚ್ಚುತ್ತಾ ಊದುಬತ್ತಿ ಬೆಳಗಿ ಪೂಜಿಸುತ್ತಾ, ಉದೋ, ಉದೋ ಎಂಬ ಜಯಘೋಷ ಮೊಳಗಿಸಿದರು. ಈ ಗಾಳಿ ಸುದ್ದಿ ಎರಡು ಕೋಮುಗಳ ಮುಖಂಡರ ಗಮನಕ್ಕೆ ಬರುತ್ತಿದಂತೆ ಸ್ಥಳಕ್ಕೆ ಧಾವಿಸಿ, ಈ ಮಸೀದಿ ಮರದಲ್ಲಿ ಯಾವುದೇ ಲಕ್ಷ್ಮೀಯಾಗಲಿ, ದೇವತೆಯಾಗಲಿ ಮೂಡಿಲ್ಲ, ಇದೊಂದು ಕಿಡಿಗೇಡಿಗಳ ಕೆಲಸ ಎಂದು ನೆರೆದಿದ್ದ ಜನರಿಗೆ ತಿಳಿ ಹೇಳಿದರು. ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ನೆರೆದಿದ್ದ ಜನರನ್ನು ಚದುರಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡರು. ಹೂವಿನಹಡಗಲಿ ಉಪ ವಿಭಾಗದ ಡಿವೈಎಸ್ಪಿ ಆರ್.ಎಸ್. ಪಾಟೀಲ್, ಸಿಪಿಐ ಪ್ರಕಾಶ ರಾಠೋಡ್, ಪಿಎಸ್ಐ ಆಂಜನೇಯ ಸೇರಿದಂತೆ ಅವರ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಿಗುವಿನ ವಾತರಣವನ್ನು ತಣ್ಣಗೆ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ಮೀಸಲು ಪೊಲೀಸ್ ಪಡೆ ನಿಯೋಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

