ಬಳ್ಳಾರಿ

6 ತಿಂಗಳ ತರಬೇತಿಗೆ ಅರ್ಜಿ ಆಹ್ವಾನ

Published On :

ಬಳ್ಳಾರಿ: ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯು ಹಿಂದುಳಿದ ವರ್ಗಗಳ ಪ್ರವರ್ಗ 2ಎ, 3ಎ, 3ಬಿಗಳಿಗೆ ಸೇರಿದ ಅರ್ಹ ನಿರುದ್ಯೋಗಿ ಮಹಿಳಾ-ಪುರುಷ ಅಭ್ಯರ್ಥಿಗಳಿಗೆ ಮೈಸೂರಿನ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಿಂದ ವಿವಿಧ ಕೋರ್ಸ್‌ಗಳಲ್ಲಿ 6 ತಿಂಗಳ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದವರಿಗಾಗಿ ಪ್ಲಾಸ್ಟಿಕ್ಸ್ ಪ್ರಾಸೆಸ್ಸಿಂಗ್ ಮೆಷೀನ್ ಆಪರೇಷನ್ ಹಾಗೂ ಮೌಲ್ಡ್ ಮೇಕಿಂಗ್ ಟೆಕ್ನಾಲಜಿ ಕುರಿತು ತರಬೇತಿ ನೀಡಲಾಗುವುದು. ಪಿಯುಸಿ-ಐಟಿಐ ಪಾಸಾದವರಿಗಾಗಿ ಇಂಜೆಕ್ಷನ್ ಮೌಲ್ಡಿಂಗ್ ಮೆಷೀನ್ ಆಪರೇಷನ್ ಆಂಡ್ ಮೇಂಟೆನೆನ್ಸ್ ತರಬೇತಿ ನೀಡಲಾಗುವುದು. ಐಟಿಐ (ಫಿಟ್ಟರ್, ಟರ್ನರ್, ಮೆಷೀನಿಸ್ಟ್) ಡಿಪ್ಲೋಮಾ(ಟೂಲ್ ಆಂಡ್ ಡೈ ಮೇಕಿಂಗ್)ಸಿಎನ್‌ಸಿ ಮೆಷೀನ್ ಪ್ರೋಗ್ರಾಮಿಂಗ್ ಅಂಡ್ ಆಪರೇಷನ್ ತರಬೇತಿ ನೀಡಲಾಗುವುದು. ಡಿಪ್ಲೋಮಾ-ಮೆಕ್ಯಾನಿಕ್‌ನಲ್ಲಿ ಬಿಇ ಇಂಡಸ್ಟ್ರಿಯಲ್ ಪ್ರೊಡಕ್ಷನ್-ಪಾಲಿಮರ್-ಆಟೋಮೊಬೈಲ್, ಐಟಿಐ(ಡ್ರಾಫ್ಟ್ಸ್ ಮ್ಯಾನ್)ಉತ್ತೀರ್ಣ ಆದವರಿಗೆ ಕ್ಯಾಡ್-ಕ್ಯಾಮ್ ಅಪ್ಲಿಕೇಷನ್ಸ್ ಇನ್ ಪ್ಲಾಸ್ಟಿಕ್ಸ್ ಪ್ರಾಡಕ್ಟ್ ಡಿಸೈನ್ ತರಬೇತಿ ನೀಡಲಾಗುವುದು. ಅರ್ಜಿ ಸಲ್ಲಿಸುವವರು 18ರಿಂದ 35 ವರ್ಷ ವಯೋವುತಿಯೊಳಗಿರಬೇಕು.
ಆಸಕ್ತರು ಭರ್ತಿ ಮಾಡಿದ ಅರ್ಜಿಯೊಂದಿಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತಿತರ ದಾಖಲೆಗಳನ್ನು ಲಗತ್ತಿಸಿ ನ. 15ರೊಳಗಾಗಿ ಜಿಲ್ಲಾಧಿಕಾರಿಗಳು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಢಿಢಿಢಿ.್ಞಛಿಜಢಿಜ.್ಝಟಿ ಅನ್ನು ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.