ಕನ್ನಡಪರ ಸಂಘಟನೆಗಳ ಕಾರ್ಯ ಶ್ಲಾಘನೀಯ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 7
ಗಡಿ ಪ್ರದೇಶವಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಪರ ಸಂಘಟನೆಗಳು ಸದಾ ಜಾಗ್ರತೆ ವಹಿಸಿ ನಾಡು, ನುಡಿ, ನೆಲ, ಜಲಕ್ಕೆ ಧಕ್ಕೆ ಬಂದಾಗ ಒಟ್ಟಾಗಿ ಹೋರಾಡುವ ಕಾರ್ಯ ಮೆಚ್ಚುವಂಥದ್ದು ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಸ್.ಪಿ.ಬಿ. ಮಹೇಶ್ ಹೇಳಿದರು.
ಬಳ್ಳಾರಿಯ ವಿವೇಕಾನಂದ ಯುವಕ ಸಂಘ ಮಂಗಳವಾರ ಸಂಜೆ ನಗರದ ಕನಕದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ದೇಶದ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣಕ್ಕೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ ಎಂದರು.
ಹಿರಿಯ ರಂಗ ಕಲಾವಿದೆ, ನಾಡೋಜ ಸುಭದ್ರಮ್ಮ ಮನ್ಸೂರ್ ಕಾರ್ಯಕ್ರಮ ಉದ್ಘಾಟಿಸಿದರು. ಅನಂತರ ಕನ್ನಡ ನಾಡಿನ ಮಹತ್ವ ಸಾರುವ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಗಮನ ಸೆಳೆದರು. ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಪಿ. ಗಾದೆಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಬರುವ ದಿನಗಳಲ್ಲಿಯೂ ಸಂಘ ಮತ್ತಷ್ಟು ಕನ್ನಡ, ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಕರ್ನಾಟಕ ನೀರು ಸರಬರಾಜು ಮಂಡಳಿಯ ಕಾರ್ಯಪಾಲಕ ಅಭಿಯಂತರ ಗಂಗಾಧರ ಗೌಡ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಿ.ಕೆ. ರವಿಶಂಕರ್, ವೈದ್ಯ ಡಾ.ಎನ್. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಹಲವರಿಗೆ ಸನ್ಮಾನ: ನಗರದ ಕನ್ನಡಪರ ಹಾಗೂ ಸಮಾಜ ಸೇವಾ ಸಂಘ ಸಂಸ್ಥೆಗಳ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಕಪ್ಪಗಲ್ ರಸೂಲ್ಸಾಬ್, ನಿಷ್ಠಿ ರುದ್ರಪ್ಪ, ಜೆ.ಎಂ. ಬಸವರಾಜ ಸ್ವಾಮಿ, ಸಿ. ಮಂಜುನಾಥ್, ಬಿ. ಚಂದ್ರಶೇಖರ್ ಆಚಾರ್, ಹಂದ್ಯಾಳ್ ಪುರುಷೋತ್ತಮ್, ಬಿ. ಬಸವರಾಜ್, ಕುರುಗೋಡು ಚನ್ನಬಸವರಾಜ್, ಬಂಡ್ರಾಳ್ ಮೃತ್ಯುಂಜಯ ಸ್ವಾಮಿ, ಪ್ರತಾಪ ರೆಡ್ಡಿ, ಕಿರಣ್ ಕುಮಾರ್, ದರೂರು ಶಾಂತನಗೌಡ, ಕುಂದಾಪುರ ನಾಗರಾಜ್, ದೇಸಾಯಿ ಷಡಕ್ಷರಪ್ಪ, ಪಿ. ಪೆಂಚಾಲಯ್ಯ, ಕೆ.ಎಸ್. ಚಂದ್ರಶೇಖರ್, ಚಂದ್ರಣ್ಣ, ವಿಶ್ವನಾಥ್ ಶೆಟ್ಟಿ, ಹಣ್ಣುಕಾಯಿ ಶಿವರುದ್ರಯ್ಯ ಸ್ವಾಮಿ, ರಂಗ ಕಲಾವಿದೆ ಬಿ. ಸುಜಾತಮ್ಮ, ವರಲಕ್ಷ್ಮೀ, ಎಸ್. ಲಕ್ಷ್ಮೀ, ಎ.ಎಂ. ಜಯಶ್ರೀ ಮತ್ತು ಎನ್.ಡಿ. ವೆಂಕಮ್ಮ ಅವರನ್ನು ಸುಭದ್ರಮ್ಮ ಮನ್ಸೂರ್ ಅವರು ಸಂಘದ ವತಿಯಿಂದ ಸನ್ಮಾನಿಸಿದರು.
ಯುವ ಕಲಾವಿದ ಎರ್ರೆಗೌಡ, ಶಂಕರಬಂಡೆ ಯಲ್ಲನ್ಚಗೌಡ ಮತ್ತು ಹನುಮಯ್ಯ ತಂಡ ಜಾನಪದ ಗೀತೆ ಹಾಗೂ ಕನ್ನಡ ಗೀತೆಗಳ ಗಾಯನ ಪ್ರಸ್ತುಪಡಿಸಿದರು. ಮೇಡಂ ಕ್ಯೂರಿ ಅಕಾಡೆಮಿ ಅಧ್ಯಕ್ಷ ಎಸ್. ಮಂಜುನಾಥ್ ಸ್ವಾಗತಿಸಿ, ನಿರೂಪಿಸಿದರು. ಬಸವರಾಜ ಅಮಾತಿ ವಂದಿಸಿದರು.
ದೇಶದ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣಕ್ಕೆ ಬಳ್ಳಾರಿ ಜಿಲ್ಲೆಯ ಕೊಡುಗೆ ಅಪಾರ. ಗಡಿ ಪ್ರದೇಶವಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಪರ ಸಂಘಟನೆಗಳು ಸದಾ ಜಾಗ್ರತೆ ವಹಿಸಿ ನಾಡು, ನುಡಿ, ನೆಲ, ಜಲಕ್ಕೆ ಧಕ್ಕೆ ಬಂದಾಗ ಒಟ್ಟಾಗಿ ಹೋರಾಡುವ ಕಾರ್ಯ ಮೆಚ್ಚುವಂಥದ್ದು.
-ಎಸ್.ಪಿ.ಬಿ. ಮಹೇಶ,
ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

