ಬಳ್ಳಾರಿ

ಡಾ. ಅಶೋಕ ಹುಗ್ಗಣ್ಣನವರಗೆ ಅನನ್ಯ ಮನ್ಸೂರ ಪುರಸ್ಕಾರ

Published On :

ಹೊನ್ನಾವರ: ಎಸ್‌ಡಿಎಂ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿರುವ ಡಾ. ಅಶೋಕ ಹುಗ್ಗಣ್ಣನವರ್ ಅವರಿಗೆ 2013ನೇ ಸಾಲಿನ ಅನನ್ಯ-ಮನ್ಸೂರ ಪುರಸ್ಕಾರ ದೊರೆತಿದೆ. ಪಂ. ಲಿಂಗರಾಜ್ ಬುವಾ ಯೇರಗುಪ್ಪಿ, ಬಸವರಾಜ ರಾಜಗುರು ಅವರಲ್ಲಿ 20 ವರ್ಷ ಸಂಗೀತಾಭ್ಯಾಸ ಮಾಡಿರುವ ಅಶೋಕ ಹುಗ್ಗಣ್ಣನವರ ಈಗ ಸಂಗಮೇಶ್ವರ ಗುರವ ಅವರಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ. ಜೈಪುರ, ಗ್ವಾಲಿಯರ್, ದೆಹಲಿ, ಕೋಲ್ಕತಾ, ಮುಂಬೈ ಮೊದಲಾದ ದೊಡ್ಡ ನಗರಗಳ ಪ್ರತಿಷ್ಠಿತ ವೇದಿಕೆ ಮೇಲೆ ಸಂಗೀತ ಕಛೇರಿ ನೀಡಿರುವ ಅವರು ಗ್ರಾಮೀಣ ಭಾಗದ ಸಂಗೀತಾಸಕ್ತರನ್ನು ತಣಿಸಲು ನೂರಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಗಾಯನ ಚತುರ, ಕಲಾಜ್ಯೋತಿ ಮೊದಲಾದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ದೂರದರ್ಶನ ಮತ್ತು ಆಕಾಶವಾಣಿಗಳಲ್ಲಿ ಅವರ ಕಾರ್ಯಕ್ರಮಗಳು ನಿಯಮಿತವಾಗಿ ಪ್ರಸಾರವಾಗುತ್ತಿವೆ. 'ಕುಂದಗೋಳ ಪರಿಸರದ ಹಿಂದುಸ್ತಾನಿ ಸಂಗೀತಗಾರರು' ಎಂಬ ವಿಷಯದ ಮೇಲೆ ಹಂಪಿ ವಿ.ವಿ.ಯಲ್ಲಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದಾರೆ. ನವೆಂಬರ್ 17ರಂದು ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನದಲ್ಲಿ ಪಂ. ರಾಜಶೇಖರ ಮನ್ಸೂರ ಮತ್ತು ಸಿ.ಜಿ. ಅನಂತಸ್ವಾಮಿ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.