19ರಂದು ಟಗರಿನ ಕಾಳಗ
ಹೂವಿನಹಡಗಲಿ: ಕನಕದಾಸ ಜಯಂತಿ ಅಂಗವಾಗಿ ಹೂವಿನಹಡಗಲಿಯಲ್ಲಿ ನ. 19ರಂದು ರಾಜ್ಯ ಮಟ್ಟದ ಟಗರಿನ ಕಾಳಗ ಆಯೋಜಿಸಲಾಗಿದೆ. ಭಾಗವಹಿಸಲು ಇಚ್ಛಿಸುವ ಟಗರಿನ ಮಾಲೀಕರು ಹೆಸರನ್ನು ನೋಂದಾಯಿಸಲು ಕನಕದಾಸ ಯುವಕ ಸಂಘದ ಅಧ್ಯಕ್ಷರು ಕೋರಿದ್ದಾರೆ. ಮಾಹಿತಿಗಾಗಿ ಮೊ.ಸಂ-9008703393, 8197094833, 9611366414ನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.
ನಕಲಿ ವೈದ್ಯನಿಗೆ ಶಿಕ್ಷೆ
ಬಳ್ಳಾರಿ: ಯಾವುದೇ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ವೈದ್ಯನೆಂದು ಹೇಳಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ಹಾಗೂ ಅಕ್ರಮವಾಗಿ ಔಷಧಿಗಳ ದಾಸ್ತಾನು ಮಾಡಿಕೊಂಡಿದ್ದ ಆರೋಪದ ಮೇಲೆ ಜಿ. ಮಲ್ಲಿಕಾರ್ಜುನ ಎಂಬಾತನಿಗೆ ಜಿಲ್ಲಾ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ 1 ವರ್ಷ ಕಠಿಣ ಶಿಕ್ಷೆ ಹಾಗೂ ರು. 1 ಸಾವಿರ ದಂಡ ವಿಧಿಸಿ ನ. 11ರಂದು ತೀರ್ಪು ನೀಡಿದ್ದಾರೆ. ಅಪರಾಧಿ ಮಲ್ಲಿಕಾರ್ಜುನ ಕಾಕುಬಾಳು ಗ್ರಾಮದಲ್ಲಿ ವೈದ್ಯನೆಂದು ಹೇಳಿಕೊಂಡು ವೈದ್ಯಕೀಯ ನಡೆಸುತ್ತಿದ್ದು ವಿಚಾರಣೆಯಿಂದ ಸಾಬೀತಾಗಿದೆ. ಸರ್ಕಾರಿ ಅಭಿಯೋಜಕಿ ಅಂಜಲಿದೇವಿ ವಾದ ಮಂಡಿಸಿದ್ದರು.
ನೇಣಿಗೆ ವ್ಯಕ್ತಿ ಶರಣು
ಕೂಡ್ಲಿಗಿ: ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ಮೋತಿನಾಯ್ಕ (60) ಜೀವನದಲ್ಲಿ ಜಿಗುಪ್ಸೆಗೊಂಡು ಮಂಗಳವಾರ ತಮ್ಮ ಹೊಲದಲ್ಲಿನ ಮರಕ್ಕೆ ಪಂಚೆಯಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಮ್ಮು, ಕೆಮ್ಮುಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ವಾಸಿಯಾಗದೇ ಇರುವುದೆ ಸಾವಿಗೆ ಕಾರಣಎಂದು ಮೃತನ ಪತ್ನಿ ಲಚ್ಚೀಬಾಯಿ ದೂರಿನಲ್ಲಿ ತಿಳಿಸಿದ್ದಾಳೆ. ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಎಸ್ಐ ಜಿತೇಂದ್ರ ಭೇಟಿ ನೀಡಿದ್ದಾರೆ.
ಯುವತಿ ಕಾಣೆ: ದೂರು
ಬಳ್ಳಾರಿ: ಯುವತಿಯೋರ್ವಳು ಕಾಣೆಯಾಗಿರುವ ಘಟನೆ ನಗರದ ಬ್ರೂಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಸಿರಾ (19) ಎಂಬಾಕೆಯೆ ಕಾಣೆಯಾದ ಯುವತಿ. ಈಕೆಯು ಮನೆಯಿಂದ ಅಕ್ಟೋಬರ್ 21ರ ರಾತ್ರಿ 9.30 ಗಂಟೆಯಿಂದ ನಾಪತ್ತೆಯಾಗಿದ್ದಾಳೆ ಎಂದು ಪತಿ ಮೊಹ್ಮದ್ ಆರೀಫ್ ಠಾಣೆಗೆ ದೂರು ನೀಡಿದ್ದಾರೆ. 5 ಅಡಿ ಎತ್ತರ, ಗೋದಿ ಮೈಬಣ್ಣ ಹೊಂದಿದ್ದಾಳೆ. ಈಕೆಯ ಬಗ್ಗೆ ಸುಳಿವು ಸಿಕ್ಕಲ್ಲಿ ಕೂಡಲೇ ಸಮೀಪದ ಠಾಣೆಗೆ ತಿಳಿಸಬೇಕೆಂದು ಠಾಣಾ ಸಬ್ ಇನ್ಸ್ಪೆಕ್ಟರ್ ಕೋರಿದ್ದಾರೆ.
ಕೆ. ಚನ್ನಬಸವನಗೌಡ ನಿಧನ
ಕೊಟ್ಟೂರು: ಪಟ್ಟಣದ ಪತ್ರಿಕಾ ಛಾಯಾಗ್ರಾಹಕ ಕೆ. ಚನ್ನಬಸವನಗೌಡ (ಕೆ.ಸಿ. ಗೌಡ) (47) ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಬಂಧು ಬಳಗ ಇದ್ದಾರೆ. ಕೂಡ್ಲಿಗಿ ತಾಲೂಕು ಪತ್ರಕರ್ತರ ಸಂಘದ ಗೌರವಾಧ್ಯಕ್ಷರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದರು. ಅತ್ಯುತ್ತಮ ಛಾಯಾಗ್ರಾಹಕರಾಗಿ ಜನಮನ್ನಣೆ ಗಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

