ಬಳ್ಳಾರಿ

ನ್ಯಾ. ಸದಾಶಿವ ವರದಿ ಜಾರಿಗೆ ಆಗ್ರಹ

Published On :

ಕೂಡ್ಲಿಗಿ: ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಯಥಾವತ್ತು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ತಾಲೂಕು ಮಾದಿಗ ದಂಡೋರ ಸಮಿತಿ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ಮೂಲಕ ಮನವಿಪತ್ರ ಸಲ್ಲಿಸಿದರು.
ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಎಂ. ಶಿವಣ್ಣ ಸಾಲುಮನಿ ಮಾತನಾಡಿ, ಅಭಿವೃದ್ಧಿ ವಂಚಿತ ಮಾದಿಗ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಹಾಗಾಗಿ ಸದಾಶಿವ ಆಯೋಗ ವರದಿಯನ್ನು ಶೀಘ್ರವೆ ಜಾರಿಗೊಳಿಸಬೇಕು. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಸಂಪುಟ ಅನುಮೋದಿಸಿ ಮೀಸಲು ವರ್ಗಿಕರಣ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿದರು.
ಮೀಸಲು ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಚ್.ಪಿ. ದುರುಗಪ್ಪ ಮಾತನಾಡಿ, ಈ ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರದ ಅಧಿವೇಶನದಲ್ಲಿ ಮೀಸಲು ಜಾರಿಗೆ ಒತ್ತಾಯಿಸಿ ಮಾದಿಗ ಸಮುದಾಯದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆ ವೇಳೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮೀಸಲು ಪರ ಧ್ವನಿ ಎತ್ತಿದ್ದರು. ಈಗ ಅವರೇ ಸಿಎಂ ಇರುವುದರಿಂದ ಈ ಅಧಿವೇಶನದಲ್ಲಿ ಸದಾಶಿವ ಆಯೋಗ ವರದಿಯನ್ನು ಯಥಾವತ್ತು ಜಾರಿಯಾಗುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.
ಗ್ರೇಡ್ 2 ತಹಸೀಲ್ದಾರ್ ಪಿ. ಪ್ರಮೋದ್ ಮನವಿಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮೀಸಲು ಹೋರಾಟದ ತಾಲೂಕು ಅಧ್ಯಕ್ಷ ಸಾಲುಮನಿ ರಾಘವೇಂದ್ರ, ಜಿಲ್ಲಾ ಕಾರ್ಯದರ್ಶಿ ಗೆದ್ದಲಗಟ್ಟೆ ಬಿ. ಹನುಮೇಶ್, ಕಂದಗಲ್ಲು ಗ್ರಾಪಂ ಅಧ್ಯಕ್ಷ ಕೆ. ಪರುಸಪ್ಪ, ಗೌರವಾಧ್ಯಕ್ಷ ಸಿಡ್ಲಪ್ಪ, ಕಾರ್ಯಾಧ್ಯಕ್ಷ ಕೆ. ತಿಪ್ಪೇಸ್ವಾಮಿ, ಉಪಾಧ್ಯಕ್ಷ ದಂಡೆಪ್ಪ, ಚೌಡಾಪುರ ಬಸವರಾಜ, ಹರವದಿ ತಿಮ್ಮಾರೆಡ್ಡಿ, ಎಚ್. ದುರುಗೇಶ್, ಜಿ. ಸಿದ್ದೇಶ್, ನಗರ ಅಧ್ಯಕ್ಷ ಮಹೇಶ್, ಶಿವು ಸಾಸಲವಾಡ, ವಕೀಲ ಎನ್. ಮರಿಸ್ವಾಮಿ, ಎನ್. ಸಿದ್ದಲಿಂಗಪ್ಪ, ಟಿ. ಗಂಗಾಧರ, ಕೆ. ಮಂಜುನಾಥ, ಡಿಎಸ್‌ಎಸ್ ಎಂ.ಬಿ. ಶಿವರಾಜ, ಹನುಮನಹಳ್ಳಿ ಕೆಂಚಪ್ಪ, ಕೆ. ಮೂಗಪ್ಪ, ಎಚ್.ಕೆ. ಹನುಮಂತಪ್ಪ, ಪಿ. ಸುರೇಶ್, ಜಿ. ಚೌಡೇಶ್, ಎಚ್. ನಾಗರಾಜ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.