ವಿವಿಧೆಡೆ ಕನಕದಾಸರ ಜಯಂತಿ ಆಚರಣೆ
ಬಳ್ಳಾರಿ: ಜಿಲ್ಲೆ ಹಾಗೂ ನಗರಾದ್ಯಂತ ಭಕ್ತಶ್ರೇಷ್ಠ ಕನಕದಾಸರ 526ನೇ ಜಯಂತಿಯನ್ನು ಬುಧವಾರ ವಿವಿಧ ಸಂಘಟನೆಗಳಿಂದ ಆಚರಿಸಲಾಯಿತು.
ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ವತಿಯಿಂದ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು. ಸಂಘದ ರಾಜ್ಯಾಧ್ಯಕ್ಷ ಬಿ.ಎಂ. ಪಾಟೀಲ್ ಮಾಲಾರ್ಪಣೆ ಮಾಡಿ ಮಾತನಾಡಿದರು. ಸಂಘದ ಭತ್ರಿ ರಾಘವೇಂದ್ರ, ಕರೂರು ವಿರೂಪಾಕ್ಷಿ, ಕೆ. ಮಂಜುನಾಥ, ಅಸುಂಡಿ ಪರಮೇಶ್, ಕೆಂಚಪ್ಪ, ಈರನಗೌಡ, ಶಿವಕುಮಾರ್, ಧನುಂಜಯ, ಶಿವರಾಂ, ಭತ್ರಿ ಪುರುಷೋತ್ತಮ ಸೇರಿದಂತೆ ಇತರರು ಇದ್ದರು.
ಡಿಎಸ್ಎಸ್ನಿಂದ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಕನಕದಾಸ ಜಯಂತಿ ಆಚರಿಸಲಾಯಿತು. ಸಮಿತಿಯ ರಾಜ್ಯ ಮುಖಂಡ ಮುಂಡ್ರಿಗಿ ನಾಗರಾಜ, ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಸಂಘದ ಎಸ್. ವಿಘ್ನೇಶ್, ಜಿ. ಗೋವರ್ಧನ್, ಪೋಟೋ ರಾಜ, ನಟರಾಜ, ವೆಂಕಟೇಶ್, ಸಣ್ಣ ನಾಗರಾಜ, ಕುಬೇರ, ಕಾಳಿರಾಜ್, ಗುರು ಇತರೆ ಪದಾಧಿಕಾರಿಗಳು ಇದ್ದರು.
ನವ ಕರ್ನಾಟಕ ನಿರ್ಮಾಣ ವೇದಿಕೆ ಜಿಲ್ಲಾಧ್ಯಕ್ಷ ಪಿ. ಶೇಖರ್, ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಭಕ್ತಿ ಸಮರ್ಪಿಸಿದರು. ಸಂಘದ ಪದಾಧಿಕಾರಿಗಳಾದ ಕೆ. ರಾಮಾಂಜಿನಿ, ಕೆ. ಕುಪ್ಪುಸ್ವಾಮಿ, ವಿಶ್ವನಾಥ, ಭಟ್ಟಿ ಎರ್ರಿಸ್ವಾಮಿ, ರಾಘವೇಂದ್ರ, ನಾಗರಾಜ, ಕೆ. ಬಾಲು ಮತ್ತಿತರರಿದ್ದರು.
ಕನ್ನಡ ಸೇನೆ ಕರ್ನಾಟಕ ಸಂಘಟನೆ ವತಿಯಿಂದ ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಯಂತಿ ಆಚರಿಸಲಾಯಿತು. ಸಂಘಟನೆಯ ಹೈ-ಕ ವಿಭಾಗದ ಉಪಾಧ್ಯಕ್ಷ ಕೆ. ಎರ್ರಿಸ್ವಾಮಿ, ಮುಖಂಡ ವೆಂಕಟೇಶಮೂರ್ತಿ, ಪದಾಧಿಕಾರಿಗಳಾದ ಫೈಯಾಜ್ ಬಾಷಾ, ಮೆಹಬೂಬ್ ಬಾಷಾ, ಸುಭಾನ್ಸಾಬ್, ಎಸ್.ಎಂ. ಚಂದ್ರಶೇಖರ್, ಕೆ. ವೆಂಕಟೇಶ್ ಶೆಟ್ಟಿ, ವದ್ದಟ್ಟಿ ರಾಮರೆಡ್ಡಿ ಇತರರು ಇದ್ದರು.
ಸರ್ಕಾರಿ ನೌಕರರ ಸಂಘದಿಂದ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಎಂ.ಟಿ. ಮಲ್ಲೇಶಪ್ಪ, ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸಂಘದ ಜಿ.ಕೆ. ರಾಮಕೃಷ್ಣ, ಎಂ. ಶಿವಾಜಿರಾವ್, ಕೆ. ಹನುಮಂತಪ್ಪ, ವೆಂಕಟೇಶ್, ಪಿ. ನಾಗರಾಜ್, ಮರಿಸ್ವಾಮಿ, ಪೆದ್ದನ್ನ ಇತರರು ಇದ್ದರು.
ಜಯಂತಿ ನಿಮಿತ್ತ ಕನಕದಾಸ ಯುವಕ ಸಂಘದಿಂದ ನಗರದ ತಾರನಾಥ್ ಆಯುರ್ವೇದ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಿಸಲಾಯಿತು. ವೇದಿಕೆ ಜಿಲ್ಲಾಧ್ಯಕ್ಷ ರವಿ ಕಾರಮಂಚಿ ಹಾಗೂ ಆಸ್ಪತ್ರೆ ವೈದ್ಯ ರಾಜಶೇಖರ ಗಾಣಿಗೇರ್ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿದರು. ಸೂರ್ಯದೇವ, ಬೆಳ್ಳಿ ಕಟ್ಟೆಪ್ಪ, ಕೆ. ತಿಮ್ಮಪ್ಪ, ಡಿ. ರಮೇಶ್ಬಾಬು, ಬಸವ, ದೇವೇಂದ್ರಪ್ಪ ಇತರರಿದ್ದರು.
ರಾಷ್ಟ್ರೀಯ ಜನತಾದಳ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಪಿ. ಬಂಡೇಗೌಡ, ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕನಕ ಜಯಂತಿಯನ್ನು ಸರಳವಾಗಿ ಆಚರಿಸಿದರು. ಪಕ್ಷದ ಉಪಾಧ್ಯಕ್ಷ ಕಪ್ಪಗಲ್ ರಸೂಲ್ಸಾಬ್, ಮೈನಾರಿಟಿ ವಿಭಾಗದ ಜಿಲ್ಲಾಧ್ಯಕ್ಷ ಮುಕ್ತಿಯಾರ್, ಉಪಾಧ್ಯಕ್ಷ ಪಿಂಜಾರ್ಸಾಬ್, ಪಿ. ಜಗದೀಶ್, ಹೊನ್ನೂರ್ಸಾಬ್ ಇತರರಿದ್ದರು.
ಕರ್ನಾಟಕ ಸಂರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್. ವೆಂಕಟೇಶ್ ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಪದಾಧಿಕಾರಿಗಳಾದ ಚಂದ್ರನಾಗರಾಜ, ಸಿ. ಶ್ರೀನಿವಾಸ, ನೆಟ್ಟೆಪ್ಪ, ಎಂ. ಸುರೇಶ, ಈ. ಈಶ್ವರ, ವಿ.ಬ್ರಹ್ಮಯ್ಯ, ಆರ್. ಶಿವಶಂಕರ, ಕೆಂಚಪ್ಪ ಬೆಳಗಲ್ಲು, ಲಕ್ಷ್ಮೀಪತಿ ಯಾದವ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

