ಬಳ್ಳಾರಿ

ಹಳ್ಳ ಒತ್ತುವರಿ: ಲೋಕಾ ಪರಿಶೀಲನೆ

Published On :

ಹೊಸಪೇಟೆ: ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ. ಆದಿ ನೇತೃತ್ವದ ತಂಡ ಭಾನುವಾರ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಡಾಣಾಪುರ ಗ್ರಾಮದ ಬಳಿಯ ಬಿಎಂಎಂ ಕಾರ್ಖಾನೆ ಸೇರಿದಂತೆ ಇತರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ವಿಜಯನಗರ ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಕಟಗಿ ಜಂಬಯ್ಯ ನಾಯಕ, ಬಿಎಂಎಂ ಕಾರ್ಖಾನೆಯವರು ಡಾಣಾಪುರ ಬಳಿಯ ರಾ.ಹೆ.13 ಪಕ್ಕದ ಹಳ್ಳವನ್ನು ಒತ್ತವರಿ ಮಾಡಿಕೊಂಡು ದಿಕ್ಕು ಬದಲಾಯಿಸಿದ್ದಾರೆ. ಸರ್ಕಾರದ ಕೆಲ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಕಾರ್ಖಾನೆ ಸಮೀಪ ಕಲ್ಲು ಗಣಿಗಾರಿಕೆ ನಡೆಸಿದ್ದಾರೆ ಎಂದು ದೂರು ನೀಡಿದ್ದರು. ಈ ದೂರಿನನ್ವಯ ಭಾನುವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
ದೌರ್ಜನ್ಯದಿಂದ: ಅಲ್ಲದೇ ಸರ್ಕಾರಿ ಜಮೀನನ್ನು ಕೆಐಎಡಿಬಿ ಅಡಿ ಬಿಎಂಎಂ ಕಾರ್ಖಾನೆ ಭೂ ಸ್ವಾದೀನ ಮಾಡಿಕೊಂಡಿದ್ದ ರೈತರ ಜಮೀನುಗಳಿಗೆ ಭೇಟಿ ನೀಡಿದ್ದರು. ಗುಂಡಾ ಗ್ರಾಮದ ಕಡೆಗೆ ಕಾರ್ಖಾನೆಯವರು ಹೊಸ ರಸ್ತೆಯನ್ನು ಕೆಲ ರೈತರ ಹೊಲದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ಬಗ್ಗೆ ಆಕ್ಷೇಪ ಸಲ್ಲಿಸಿದ್ದರೂ ದೌರ್ಜನ್ಯದಿಂದ ರಸ್ತೆ ನಿರ್ಮಿಸುತ್ತಿದ್ದಾರೆ. ಅಲ್ಲದೇ ಕೋರ್ಟ್‌ನಲ್ಲಿ ರಸ್ತೆ ನಿರ್ಮಾಣಕ್ಕೆ ತಡಯಾಜ್ಞೆ ಇದ್ದರೂ ರಸ್ತೆ ನಿರ್ಮಾಣಕ್ಕೆ ಕಾರ್ಖಾನೆ ಮುಂದಾಗಿದೆ ಎಂದು ರೈತರಾದ ಹುರುಕೊಳ್ಳಿ ಮಂಜುನಾಥ, ಯು. ವೆಂಕಟೇಶ್, ಕೆ. ರಘುವೀರ, ಅಂಕ್ಲೇಶ್ ಇತರರು ಸಮಸ್ಯೆ ಹೇಳಿಕೊಂಡರು.
ಇಂದು ಸಭೆಗೆ ಬನ್ನಿ: ಇದೇ ರೀತಿ ತಾಲೂಕಿನ ಡಣಾಪುರ, ಗರಗ, ಜಿ. ನಾಗಲಾಪುರ, ಬ್ಯಾಲಕುಂದಿ, ಗೊಲ್ಲರಹಳ್ಳಿ, ಡಣಾಯಕನಕೆರೆ ಸೇರಿದಂತೆ ಕೆಲ ಗ್ರಾಮಗಳ ರೈತರು ತಮ್ಮ ಸಮಸ್ಯೆಗಳ ಬಗ್ಗೆ ಗಮನ ಸೆಳೆದಾಗ ಸೋಮವಾರ ನಡೆಯುವ ಸಭೆಯಲ್ಲಿ ತಾವೆಲ್ಲರೂ ಬಂದು ಅಧಿಕಾರಿಗಳ ಮುಖಾಮುಖಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮತ್ತು ಲೋಕಾಯುಕ್ತರಿಗೆ ದೂರು ನೀಡಿದರೆ ವಿಚಾರಣೆ ನಡೆಸಲಾಗುತ್ತದೆ ಎಂದು ಭರವಸೆ ನೀಡಿದರು.
ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಎಸಿ ಪಿ. ಸುನೀಲ್‌ಕುಮಾರ್, ತಹಸೀಲ್ದಾರ್ ರಮೇಶ್ ಕೋನರಡ್ಡಿ, ಲೋಕಾಯುಕ್ತ ಡಿವೈಎಸ್ಪಿ ಮಹಾಂತ ರೆಡ್ಡಿ, ಧಾರವಾಡದ ವಿಶೇಷ ಭೂಸ್ವಾಧೀನ ಅಧಿಕಾರಿ ಶಿವಾನಂದ ಭಜಂತ್ರಿ, ಬಸವರಾಜ ಸೋಮಣ್ಣನವರ್, ಅರಣ್ಯಾಧಿಕಾರಿ ಶ್ರೀಧರ, ತಾಪಂ ಇಒ ರಮೇಶ್ ತಳವಾರ್, ಜಿಪಂ ಸಿಇಇ ಎನ್. ಮುತ್ತಯ್ಯ, ಮಂಜುನಾಥ, ಯು. ನಾಗರಾಜ, ಕೆ. ನಾಗರಾಜ, ಕೆ. ದಿವಾಕರ, ಜೆ. ನಿಂಗೇಶ್, ದೂರುದಾರ ಜಂಬಯ್ಯ ನಾಯಕ, ಕೆ. ರಾಮಪ್ಪ, ವಕೀಲರಾದ ಎಸ್.ಕೆ. ಸುಬೋಧ, ವಿಜಯಕುಮಾರ್, ಯು. ವೆಂಕಟೇಶ್, ಹುರುಕೊಳ್ಳಿ ಮಂಜುನಾಥ, ಕೆ. ರಘುವೀರ, ಕೊಟ್ಗಿ ಲೋಕೇಶ್, ಅಂಕ್ಲೇಶ್, ಪಿ. ಚಿದಾನಂದ, ವೆಂಕಟೇಶ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.