ಬಳ್ಳಾರಿ

ಸುದ್ದಿ ಸಂಕ್ಷೇಪ

Published On :

ಭಕ್ತ ಕನಕದಾಸರ ಜಯಂತ್ಯುತ್ಸವ
ಹೂವಿನಹಡಗಲಿ: ಹಾಲುಮತಸ್ಥ ಸಮಾಜ ಅನ್ಯ ಸಮಾಜದ ಜತೆಗೆ ಉತ್ತಮ ಬಾಂಧವ್ಯ ಹೊಂದಿರುವುದಕ್ಕೆ ಇತಿಹಾಸವೇ ಸಾಕ್ಷಿ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.ಇತ್ತೀಚಿಗೆ ತಾಲೂಕಿನ ಹ್ಯಾರಡ ಗ್ರಾಮದ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಆಯೋಜಿಸಿದ್ದ ಭಕ್ತ ಕನಕದಾಸರ 526ನೇ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು. ತಹಸೀಲ್ದಾರ್ ಎ.ಬಿ. ವಿಜಯಕುಮಾರ, ಕುರುಬ ಸಂಘದ ರಾಜ್ಯ ನಿರ್ದೇಶಕರಾದ ಕೃಷ್ಣ, ಆಂಜನೇಯ, ಬಿ. ಹನುಮಂತಪ್ಪ, ಗುರುವಿನ ಕೊಟ್ರಯ್ಯ, ಅಂಗಡಿ ಮಲ್ಲಪ್ಪ ಮಾತನಾಡಿದರು.  ಮಾಜಿ ಮಂಡಲ ಪ್ರಧಾನ ಕೆಂಚಪ್ಪ ಅಧ್ಯಕ್ಷತೆ ವಹಿಸಿದ್ದರು. ಅಂಕ್ಲಿ ಶಿವಕುಮಾರ, ವೈ.ಕೆ.ಬಿ. ದುರುಗಪ್ಪ, ಜಜ್ಜೂರಿ ನಿಂಗಪ್ಪ ಉಪಸ್ಥಿತರಿದ್ದರು. ಶಾಲಾ ಮಕ್ಕಳು ಪ್ರಾರ್ಥಿಸಿದರು. ಶಿಕ್ಷಕ ಪ್ರಕಾಶ ನಿರ್ವಹಿಸಿದರು. ಯಲ್ಲಪ್ಪ ನಿರೂಪಿಸಿದರು. ಇದಕ್ಕೂ ಮುನ್ನ ಗ್ರಾಮದ ಮುಖ್ಯ ಬೀದಿಗಳಲ್ಲಿ ಕನಕದಾಸರ ಭಾವಚಿತ್ರ ಹಾಗೂ ಟಗರಿನ ಮೆರವಣಿಗೆ ನಡೆಯಿತು.
ಎಸ್‌ಸಿಪಿ ಅಧ್ಯಯನ ಶಿಬಿರ
ಹೊಸಪೇಟೆ: ದೇಶದ ಸಾಮಾಜಿಕ ವಾತಾವರಣದಲ್ಲಿ ಸಾಂಸ್ಕೃತಿಕ ಎಚ್ಚರ ಮೂಡಿಸಿ, ಸಂಘಟನಾತ್ಮಕ ಹೋರಾಟ ಮಾಡಿದ ಕೀರ್ತಿ ಡಾ. ಬಿ.ಆರ್. ಅಂಬೇಡ್ಕರ್‌ಅವರಿಗೆ ಸಲ್ಲುತ್ತದೆ ಎಂದು ಸ್ಮಯೋರ್ ಕಾಲೇಜು ಪ್ರಾಧ್ಯಾಪಕ ಎಸ್.ಬಿ. ಚಂದ್ರಶೇಖರ್ ಹೇಳಿದರು. ನಗರದ ಸ್ಲಂ ಜನಾಂದೋಲನ, ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಮತ್ತು ಎಸ್‌ಸಿಪಿ ಅಧ್ಯಯನ ಶಿಬಿರದಲ್ಲಿ ಮಾತನಾಡಿದರು. ಸ್ಲಂ ಜನಜಾಗೃತಿ ಅಂದೋಲನ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಾಮಚಂದ್ರ ಮಾತನಾಡಿದರು. ಎಂ. ಹನುಮಂತರಾಯ, ಕೆ. ವೆಂಕಟೇಶಲು, ಗದಗಿನ ಗಿರೀಶ್, ಮಾರೆಮ್ಮ, ವೆಂಕಮ್ಮ, ನಾಗಲಕ್ಷ್ಮಿ    ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.