ದೇಹದಾರ್ಢ್ಯ: ವೀರೇಶ್ 'ವೀರಕನ್ನಡಿಗ'
ಕೊಟ್ಟೂರು: ಹಗರಿಬೊಮ್ಮನಹಳ್ಳಿಯ ಎಂಎಂಎಸ್ ಮಲ್ಟಿಜಿಮ್ನ ಎಸ್.ಎಸ್. ವೀರೇಶ್ ಕೊಟ್ಟೂರಿನಲ್ಲಿ ನಡೆದ ಅಂತರ್ ತಾಲೂಕು ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸರ್ವೋತ್ತಮ ಪ್ರದರ್ಶನ ನೀಡಿ ವೀರಕನ್ನಡಿಗ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.
ಇಲ್ಲಿನ ಕೊಟ್ಟೂರೇಶ್ವರ ವ್ಯಾಯಾಮ ಶಾಲೆಯವರು ಸೋಮವಾರ ಸಂಜೆ ವ್ಯಾಸಪುರಮಠ ಕೇದಾರನಾಥಸ್ವಾಮಿ ಸ್ಮರಣಾರ್ಥ ಆಯೋಜಿಸಿದ್ದ ಹಗರಿಬೊಮ್ಮನಹಳ್ಳಿ- ಕೂಡ್ಲಿಗಿ ಅಂತರ್ ತಾಲೂಕು ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಎಸ್.ಎಸ್. ವೀರೇಶ್ ಶಾರ್ಟ್ ಕ್ಲಾಸ್, ಮಿಡ್ಲ ಕ್ಲಾಸ್, ಟಾಲ್ಕ್ಲಾಸ್, ಸೂಪರ್ಸ್ಟಾಲ್ ಕ್ಲಾಸ್ ಸ್ಪರ್ಧೆಗಳಲ್ಲಿ ಪ್ರಥಮಗರಾಗಿ ಹೊರಹೊಮ್ಮಿ ಪ್ರಶಸ್ತಿ ಪಡೆದರು.
ಕೂಡ್ಲಿಗಿಯ ಮಯೂರ ವ್ಯಾಯಾಮ ಶಾಲೆಯ ಹೊನ್ನೇಶ್ ಮಿಸ್ಟರ್ ಮಾಸ್ಕೂಲರ್, ಹಗರಿಬೊಮ್ಮನಹಳ್ಳಿಯ ಎಂ.ಎಸ್. ಮಲ್ಟಿಜಿಮ್ನ ಮಾರುತಿ ಬೆಸ್ಟ್ ಫೋಸರ್ ಆಗಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಫಲಿತಾಂಶ: ದಂಡ್ಸ್ ಸ್ಪರ್ಧೆಯಲ್ಲಿ 3 ನಿಮಿಷದಲ್ಲಿ 101 ಸಲ ಸತತ ಕಸರತ್ತು ಪ್ರದರ್ಶಿಸಿದ ಕೊಟ್ಟೂರೇಶ್ವರ ವ್ಯಾಯಾಮ ಶಾಲೆಯ ನೂರುಲ್ಲಾ (ಪ್ರಥಮ), 3 ನಿಮಿಷದಲ್ಲಿ 100 ಕಸರತ್ತು ನೀಡಿದ ಕೊಟ್ಟೂರೇಶ್ವರ ವ್ಯಾಯಾಮ ಶಾಲೆಯ ಜಮೀರ್(ದ್ವಿತೀಯ) 45 ಕಸರತ್ತು ನೀಡಿದ ಕೂಡ್ಲಿಗಿ ಮಯೂರ ವ್ಯಾಯಮ ಶಾಲೆಯ ವಿನಯ್ಕುಮಾರ್(ತೃತೀಯ)ಸ್ಥಾನ ಪಡೆದರು.
ಬೈಠಕ್ಸ್: 155 ಕಸರತ್ತನ್ನು ಪ್ರದರ್ಶಿಸಿದ ಜಮೀರ್ (ಪ್ರಥಮ), 151 ಕಸರತ್ತು ಪ್ರದರ್ಶಿಸಿದ ನೂರುಲ್ಲಾ (ದ್ವಿತೀಯ) 105 ಕಸರತ್ತು ಪ್ರದರ್ಶಿಸಿದ ವಿನಯ್ಕುಮಾರ್(ತೃತೀಯ). ಶಾರ್ಟ್ಸ್ ಕ್ಲಾಸ್- ಸಲೀಂ ಬಾಷಾ (ಫ್ರಥಮ), ಶ್ರೀಧರ್ (ದ್ವಿತೀಯ), ಪ್ರಸಾದ್ (ತೃತೀಯ). ಮಿಡ್ಲ್ಕ್ಲಾಸ್ನಲ್ಲಿ ವೀರೇಶ್ ಎಸ್.ಎಸ್. (ಪ್ರಥಮ), ಬಿ. ಗಿರೀಶ್ (ದ್ವಿತೀಯ), ಸಾಗರ್ (ತೃತೀಯ). ಟಾಲ್ಕ್ಲಾಸ್ನಲ್ಲಿ- ಹೊನ್ನೇಶ್(ಪ್ರಥಮ), ಉಬೇದುಲ್ಲಾ (ದ್ವಿತೀಯ), ಬಿ. ಪ್ರಸಾದ್ (ತೃತೀಯ). ಸೂಪರ್ಟಾಲ್ ಕ್ಲಾಸ್ನಲ್ಲಿ ಮಾರುತಿ (ಪ್ರಥಮ), ಮಹ್ಮದ್ಗೌಸ್ (ದ್ವಿತೀಯ), ಕೆ. ಸಂತೋಷ್(ತೃತೀಯ) ಸ್ಥಾನ ಗಳಿಸಿದ್ದಾರೆ.
ಜೆಡಿಎಸ್ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್, ಸಿಪಿಐ ಲಾಲ್ಯನಾಯ್ಕ, ಬಂಗಾರಿ ಹನುಮಂತು ಬಹುಮಾನ ನೀಡಿ ಅಭಿನಂದಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಎಚ್.ಜಿ.ಎಂ. ಗುರುಬಸವರಾಜ್, ಬಿ. ನಾಗರಾಜ್, ಎಸ್.ಡಿ. ಗೋವಿಂದರಾಜ್, ವಿ.ಎಂ. ಸೋಮನಾಥ ಕಾರ್ಯನಿರ್ವಹಿಸಿದರು. ಉಪನ್ಯಾಸಕ ಕೆ.ಬಿ. ಸೋಮಶೇಖರ್ ಸ್ವಾಗತಿಸಿದರು. ಯೋಗಪಟು ನಾಗರಾಜ್ ಪ್ರಸ್ತಾವಿಕ ಮಾತನಾಡಿದರು. ಉಪನ್ಯಾಸಕ ಕೆ. ಗುರುರಾಜಗೌಡ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

