ಬಳ್ಳಾರಿ

ಕಕ್ಷಿದಾರ, ವಕೀಲರ ಸಂಬಂಧ ಉತ್ತಮವಿರಲಿ

Published On :

ಬಳ್ಳಾರಿ: ಕಕ್ಷಿದಾರರ ಹಾಗೂ ವಕೀಲರ ನಡುವಿನ ಸಂಬಂಧ ಉತ್ತಮವಾಗಿರಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶ ಡಿ. ವಿಶ್ವೇಶ್ವರ ಭಟ್ ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ವಕೀಲರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾನೂನು ದಿನಾಚರಣೆಯನ್ನು ಉದ್ಘಾಟಿಸಿ, ಮಾತನಾಡಿದರು.
ವಕೀಲರು ತನ್ನ ಕಕ್ಷಿದಾರರಿಗೆ ಕಾನೂನು ಕ್ರಮಗಳನ್ನು ತಿಳಿಸಬೇಕು. ಕಾನೂನು ದಿನಾಚರಣೆಯನ್ನು 1957ರಿಂದ ಅಮೆರಿಕದಲ್ಲಿ ಆಚರಿಸುವ ಪದ್ಧತಿ ರೂಢಿಗೆ ಬಂದಿದ್ದು, ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯ 1979ರಿಂದ ಆಚರಿಸುತ್ತಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಪಾಟೀಲ್ ಸಿದ್ದಾರೆಡ್ಡಿ ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಚ್. ಶಾಂತ ಅವರು ಮಾತನಾಡಿ, ಕಾನೂನು ದಿನ ಆಚರಣೆಗೆ ಮಾತ್ರ ಸೀಮಿತವಾಗದೆ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ಕಾನೂನನ್ನು ಪರಿಪಾಲಿಸಬೇಕೆಂದರು.
ನ್ಯಾ.ಎಂ.ಎಲ್. ರಘುನಾಥ, 1ನೇ ಅಪರ ಜಿಲ್ಲಾ ನ್ಯಾಯಾಧೀಶ ಎಂ.ಎಸ್. ಪಾಟೀಲ್, 2ನೇ ಅಪರ ಜಿಲ್ಲಾ ನ್ಯಾಯಾಧೀಶ ಬಿ.ವಿ. ಗುದ್ಲಿ, ನ್ಯಾಯಾಧೀಶರಾದ ಲತಾ, ಎಂ.ಬಿ. ಕುಲಕರ್ಣಿ, ಎಂ. ರಮೇಶ್, ಝರೀನಾ, ಕೆ.ಎಚ್. ಯಮನಪ್ಪ, ಡಿ. ರಾಮಕೃಷ್ಣ, ವಕೀಲರು, ಸಾರ್ವಜನಿಕರು ಇದ್ದರು.
ಕೋಲಾಚಲಂ ಸಂಧ್ಯಾ ಸುಧಾಕರ ಪ್ರಾರ್ಥಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಡಿ. ರಾಮಕೃಷ್ಣ ಸ್ವಾಗತಿಸಿದರು. ಎರ್ರಿಸ್ವಾಮಿ ನಿರೂಪಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಅನ್ವರ್‌ಬಾಷಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.