ಬಳ್ಳಾರಿ

ಗ್ರಾಮಲೆಕ್ಕಾಧಿಕಾರಿ ಲೋಕಾ ಬಲೆಗೆ

Published On :

ಕುಷ್ಟಗಿ: ರೈತರೊಬ್ಬರಿಂದ ಜಮೀನು ವರ್ಗಾವಣೆ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕಿನ ಬೀಜಕಲ್ ರೈತ ಸಂಗಪ್ಪ ಮರೇಗೌಡರಿಂದ ರು. 1000 ಲಂಚ ಪಡೆಯುತ್ತಿದ್ದಾಗ, ತಾಲೂಕಿನ ಕ್ಯಾದಿಗುಂಪಾ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿ ಉಸ್ಮಾನ ಹಾಗೂ ಗ್ರಾಮ ಸಹಾಯಕ ಶರಣಪ್ಪ ಎನ್ನುವವರು ಮಂಗಳವಾರ ಇಲ್ಲಿನ ತಾಲೂಕು ಗ್ರಾಮಲೆಕ್ಕಾಧಿಕಾರಿ ಕಚೇರಿಯಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಮೀನು ವರ್ಗಾವಣೆಗೆ ಸಂಬಂಧಿಸಿದಂತೆ ಕೆಲ ದಿನಗಳಿಂದ ಹಣಕ್ಕಾಗಿ ತಮ್ಮ ಕೆಲಸಕ್ಕೆ ವಿಳಂಬ ಮಾಡುತ್ತಿದ್ದ ಗ್ರಾಮಲೆಕ್ಕಾಧಿಕಾರಿ ಉಸ್ಮಾನ ವಿರುದ್ಧ ಇತ್ತೀಚೆಗೆ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ ಸಂಗಪ್ಪ ಮರೇಗೌಡರ ದೂರಿನಂತೆ ಮಂಗಳವಾರ ಇಲ್ಲಿನ ತಾಲೂಕು ಗ್ರಾಮಲೆಕ್ಕಾಧಿಕಾರಿಗಳ ಕಚೇರಿಯಲ್ಲಿ ಹಣ ಪಡೆಯುತ್ತಿದ್ದ ಉಸ್ಮಾನ, ಸಹಾಯಕ ಶರಣಪ್ಪ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.  
ಗ್ರಾಮಲೆಕ್ಕಾಧಿಕಾರಿ ಉಸ್ಮಾನ ಎನ್ನುವವರು ಬೀಜಕಲ್ ಗ್ರಾಮದ ಸಂಗಪ್ಪ ಎನ್ನುವವರ ಜಮೀನು ವರ್ಗಾವಣೆಗಾಗಿ ರು. 1500ಗಳ ಲಂಚ ಕೇಳಿದರು. ಇದಕ್ಕೆ ಸಂಗಪ್ಪ ಅವರು ರು. 1000 ನೀಡುವುದಾಗಿ ಒಪ್ಪಿದರು. ಇದಕ್ಕೆ ಗ್ರಾಮಲೆಕ್ಕಾಧಿಕಾರಿ ಉಸ್ಮಾನ ಅವರು ಮಂಗಳವಾರ ಮಧ್ಯಾಹ್ನದ ವೇಳೆಗೆ ತಾಲೂಕು ಕಚೇರಿಗೆ ಹಣ ತೆಗೆದುಕೊಂಡು ಬರುವಂತೆ ತಿಳಿಸಿದ್ದರು. ಅದರಂತೆ ಸಂಗಪ್ಪ ಮಂಗಳವಾರ ಹಣ ತೆಗೆದುಕೊಂಡು ಕಚೇರಿಗೆ ಹೋಗಿದ್ದರು. ಆ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಯು ಅವರ ಗ್ರಾಮ ಸಹಾಯಕ ಶರಣಪ್ಪ ಎನ್ನುವವರ ಕೈಯಲ್ಲಿ ಹಣ ಕೊಂಡುವಂತೆ ತಿಳಿಸಿದ್ದಾರೆ. ಹಣ ಪಡೆದ ಶರಣಪ್ಪ ಹಾಗೂ ಹಣ ನೀಡುವಂತೆ ಸೂಚಿಸಿದ್ದ ಉಸ್ಮಾನ ಎನ್ನುವವರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಾಳಿ ಸಂದರ್ಭದಲ್ಲಿ ಜಿಲ್ಲಾ ಲೋಕಾಯುಕ್ತ ಪ್ರಭಾರ ಎಸ್.ಪಿ. ಸಲಿಂಪಾಷಾ, ಲೋಕಾಯುಕ್ತ ಅಧಿಕಾರಿಗಳಾದ ವೆಂಕಟೇಶ ಮೂರನಾಳ, ಸಿಬ್ಬಂದಿ ರಾಘವೇಂದ್ರ ಜೋಶಿ, ರಾಮಣ್ಣ ಬನ್ನಿಗೋಳ, ಬಸುವರಾಜ, ಅಬ್ದುಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.