10ರಿಂದ ತುಮಕೂರಲ್ಲಿ ದಸರಾ ಮಹೋತ್ಸವ
ಕೊಟ್ಟೂರು: ಉಜ್ಜಿನಿ ಸದ್ಧರ್ಮಪೀಠದ ಶರನ್ನವರಾತ್ರಿ ದಸರಾ ಮಹೋತ್ಸವ ಹಾಗೂ ಭಾವೈಕ್ಯ ಧರ್ಮ ಸಮಾವೇಶ ತುಮಕೂರು ಮಹಾನಗರದಲ್ಲಿ ಅ. 10ರಿಂದ 14ರ ವರೆಗೆ ನಡೆಯಲಿದ್ದು, ತಾವು ಪೀಠಾಧಿಪತಿ ಆದನಂತರ 2ನೇ ದಸರಾ ದರ್ಬಾರ್ ಇದಾಗಿದೆ. ಇದಕ್ಕೆಂದೆ ತುಮಕೂರು ನಗರ ವೀರಶೈವ ಸೇವಾ ಸಮಿತಿ ಸಿದ್ಧತೆಗಳನ್ನು ಈಗಾಗಲೇ ಕೈಗೊಂಡಿದೆ ಎಂದು ಉಜ್ಜಿನಿ ಪೀಠದ ಶ್ರೀ ಸಿದ್ಧಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯರು ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾರಂಭವನ್ನು ಅ. 10ರಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಉದ್ಘಾಟಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಶಾಸಕರಾದ ಡಾ. ರಫೀಕ್ ಅಹ್ಮದ್, ಈಶ್ವರ ಖಂಡ್ರೆ ಪಾಲ್ಗೊಳ್ಳುವರು ಎಂದರು.
ಪತ್ರಿಕೆ ಬಿಡುಗಡೆ: ಅ. 11ರಂದು ನಡೆಯುವ ಭಾವೈಕ್ಯ ಧರ್ಮ ಸಮಾವೇಶದಲ್ಲಿ ವೈದ್ಯಕೀಯ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ 'ಶೈವ ಝೇಂಕಾರ' ಪತ್ರಿಕೆ ಬಿಡುಗಡೆ ಮಾಡುವರು. ಸಚಿವ ಎಚ್.ಕೆ. ಪಾಟೀಲ್, ಶಾಸಕ ಕೆ. ಷಡಕ್ಷರಿ, ಮಾಜಿ ಸಚಿವರಾದ ಶಿವಣ್ಣ, ಮಾದುಸ್ವಾಮಿ, ತುಮಕೂರು ಜಿಲ್ಲಾಧಿಕಾರಿ ಕೆ. ಸತ್ಯಮೂರ್ತಿ ಪಾಲ್ಗೊಳ್ಳುವರು. ಅ. 12ರಂದು ನಡೆಯುವ ಸಮಾರಂಭದಲ್ಲಿ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರನಾಯ್ಕ 'ಸದ್ಧರ್ಮ ಪತ್ರಿಕೆ' ಬಿಡುಗಡೆಗೊಳಿಸಲಿದ್ದಾರೆ. ಸಹಕಾರ ಸಚಿವ ಎಚ್.ಎಸ್. ಮಹಾದೇವಪ್ರಸಾದ್, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ವೀರಶೈವ ಮಹಾಸಭಾದ ರಾಜ್ಯಧ್ಯಕ್ಷ ಎನ್. ತಿಪ್ಪಣ್ಣ, ಶಾಸಕ ಎಚ್.ಎಸ್. ಶಿವಶಂಕರ್, ವಿಧಾನಪರಿಷತ್ ಸದಸ್ಯ ಎ.ಎಚ್. ಶಿವಯೋಗಸ್ವಾವು ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರಶಸ್ತಿ ಪ್ರದಾನ: ಅ. 13ರಂದು ನಡೆಯುವ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಜ್ಜಿನಿ ಸದ್ಧರ್ಮಪೀಠದ ಸಾಂಸ್ಕೃತಿಕ ಅಧ್ಯಯನ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಉಜ್ಜಿನಿ ಜಗದ್ಗುರು ಪೀಠದಿಂದ ಕೊಡಮಾಡುವ 'ಶ್ರೀ ಜಗದ್ಗುರು ದಾರುಕಾಚಾರ್ಯ- 2013' ಪ್ರಶಸ್ತಿಯನ್ನು ವಿ.ಆರ್.ಎಲ್. ಸಮೂಹ ಸಂಸ್ಥೆ ಚೇರ್ಮನ್ ವಿಜಯ ಸಂಕೇಶ್ವರ್ ಅವರಿಗೆ ನೀಡಲಾಗುವುದು. ಲೋಕಸಭಾ ಸದಸ್ಯ ಡಾ. ಜಿ.ಎಸ್. ಬಸವರಾಜ್, ವೀರಶೈವ ಮಹಾಸಭಾದ ಬಿ.ಎಸ್. ವಾಗೀಶ್ಪ್ರಸಾದ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
ತುಮಕೂರು ನಗರದ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ 5 ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಪ್ರತಿದಿನ ಬೆಳಗ್ಗೆ 5.30ಕ್ಕೆ ಇಷ್ಟಲಿಂಗ ಪೂಜೆ ನಡೆಯಲಿದೆ. ಅದರಲ್ಲಿ ಸಾರ್ವಜನಿಕರು ಭಾಗವಹಿಸಬಹುದು. ಅ. 14, ವಿಜಯದಶಮಿ ದಿನದಂದು ಅಗ್ರೋದಕ ಕುಂಭಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದೇವೆ. ಪ್ರತಿದಿನದ ಸಮಾರಂಭದಲ್ಲಿ ಶಿವಾಚಾರ್ಯರು, ಸಿಬ್ಬಂದಿ, ಧರ್ಮಾಭಿಮಾನಿಗಳಿಂದ ನಜರ್ (ಗೌರವ) ಸಮರ್ಪಣೆ ನಡೆಯಲಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

