ಬಳ್ಳಾರಿ

ಡಿಎನ್‌ಎಯಿಂದ ಗೊತ್ತಾಯ್ತು ಅದಲು ಬದಲು

Published On :

ಬಳ್ಳಾರಿ: ಇತ್ತೀಚೆಗೆ ವಿಮ್ಸ್‌ನಲ್ಲಿ ನಡೆದ ಮಕ್ಕಳ ಅದಲು-ಬದಲು ಪ್ರಕರಣ ನ್ಯಾಯಾಲಯ ಮೆಟ್ಟಿಲು ಹತ್ತಿದ್ದು, ಡಿಎನ್‌ಎ ಪರೀಕ್ಷೆಯಲ್ಲಿ ವಿಶಾಲಾಕ್ಷಿಗೆ ಗಂಡು ಮಗು ಹಾಗೂ ಪದ್ಮಾವತಿಗೆ ಹೆಣ್ಣು ಮಗು ಜನಿಸಿರುವುದು ದೃಢಪಟ್ಟಿದೆ. ಡಿಎನ್‌ಎ ಪರೀಕ್ಷೆ ಕುರಿತು ವೈದ್ಯರ ಸಲಹೆ ಕೇಳಲು ನಾವು ಸಿದ್ಧರಿಲ್ಲ. ನ್ಯಾಯಾಲಯ ತೀರ್ಪು ನೀಡಿದ ಬಳಿಕವೇ ಒಪ್ಪಿಕೊಳ್ಳುತ್ತೇವೆ ಎಂದು ಗಂಡು ಮಗು ಪಡೆದಿರುವ ಪದ್ಮಾವತಿ ಕಡೆಯವರು ತಕರಾರು ತೆಗೆದಿದ್ದಾರೆ. ಡಿಎನ್‌ಎ ವರದಿಯನ್ನು ಪದ್ಮಾವತಿ ಪೋಷಕರಿಗೆ ನೀಡಿದರೂ ಮಗುವನ್ನು ನೀಡುತ್ತಿಲ್ಲ ಎಂದು ವಿಶಾಲಾಕ್ಷಿ ಕಡೆಯವರ ಅಳಲು.
ಆ.30ರಂದು ವಿಮ್ಸ್ ಆಸ್ಪತ್ರೆಯಲ್ಲಿ 10 ನಿಮಿಷಗಳ ಅಂತರದಲ್ಲಿ ಪದ್ಮಾವತಿ, ವಿಶಾಲಾಕ್ಷಿ ಎಂಬುವವರಿಗೆ ಹೆರಿಗೆಯಾಗಿತ್ತು. ಆದರೆ, ಗೊಂದಲದಿಂದ ಅದಲು-ಬದಲಾಗಿ ವಿಶಾಲಾಕ್ಷಿಗೆ ಹೆಣ್ಣು ಮಗುವನ್ನು ಹಾಗೂ ಪದ್ಮಾವತಿಗೆ ಗಂಡು ಮಗುವನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ವಿಶಾಲಾಕ್ಷಿ ನನಗೆ ಗಂಡು ಮಗುವಾಗಿದ್ದು, ನನ್ನ ಕೂಸನ್ನು ನನಗೆ ಕೊಡಿ ಎಂದು ಪಟ್ಟು ಹಿಡಿದಿದ್ದರು. ಆದರೆ, ಮಗುವನ್ನು ನೀಡಲು ಪದ್ಮಾವತಿ ಕಡೆಯವರು ನಿರಾಕರಿಸಿದ್ದರು. ವಿಮ್ಸ್ ಅಧಿಕಾರಿಗಳಿಗೆ ಪ್ರಕರಣ ಇತ್ಯರ್ಥಪಡಿಸಲು ಆಗಲಿಲ್ಲ. ಪ್ರಕರಣವೀಗ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ನ್ಯಾಯಾಧೀಶರು ಆ ಎರಡು ಕೂಸುಗಳ, ಪೋಷಕರ ರಕ್ತ ಮಾದರಿಯನ್ನು ಡಿಎನ್‌ಎ ಪರೀಕ್ಷೆಗೆ ಕಳುಹಿಸಲು ಆದೇಶಿಸಿದ್ದರು. ಇದೀಗ ಡಿಎನ್‌ಎ ಪರೀಕ್ಷೆ ವರದಿ ಬಂದಿದ್ದು, ಮಕ್ಕಳು ಅದಲು ಬದಲಾಗಿರುವುದು ದೃಢಪಟ್ಟಿದೆ.
ವಿಮ್ಸ್ ಅಧೀಕ್ಷಕ ಡಾ. ಶ್ರೀನಿವಾಸಲು ಮಾತನಾಡಿ, ಡಿಎನ್‌ಎ ಪರೀಕ್ಷೆಯಿಂದ ವಿಶಾಲಾಕ್ಷಿಗೆ ಗಂಡು ಹಾಗೂ ಪದ್ಮಾವತಿಗೆ ಹೆಣ್ಣು ಮಗು ಜನಿಸಿರುವುದು ಸಾಬೀತಾಗಿದೆ. ಇದೀಗ ಪದ್ಮಾವತಿ ಅವರಿಂದ ಮಗುವನ್ನು ಪಡೆಯುವ ಕುರಿತಂತೆ ಅವರ ಕುಟುಂಬದ ಸದಸ್ಯರ ಜತೆ ಮಾತನಾಡಿ ನಿರ್ಧರಿಸಲಾಗುತ್ತದೆ ಎಂದು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.