ಬಳ್ಳಾರಿ

18ರಂದು ವಾಲ್ಮೀಕಿ ಜಯಂತಿ: ಜಿಲ್ಲಾಧಿಕಾರಿ

Published On :

ಬಳ್ಳಾರಿ: ಜಿಲ್ಲೆಯಲ್ಲಿ ಸೀಗೆ ಹುಣ್ಣಿಮೆ ದಿನವಾದ ಅ. 18ರಂದು  ಮಹರ್ಷಿ ವಾಲ್ಮೀಕಿ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂದು ಬೆಳಗ್ಗೆ   ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ 9ಕ್ಕೆ ಸರ್ಕಾರಿ ಪದವಿ ಕಾಲೇಜು ( ಮಾಜಿ ಪುರಸಭೆ) ಮೈದಾನದಲ್ಲಿ ಸ್ತಬ್ಧ ಚಿತ್ರ ಹಾಗೂ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಮೆರವಣಿಗೆಯಲ್ಲಿ ಮಹರ್ಷಿ ವಾಲ್ಮೀಕಿ, ಏಕಲವ್ಯ, ಶಬರಿ, ಮದಕರಿ ಅವರ ಸ್ತಬ್ಧ ಚಿತ್ರಗಳು, ವಿವಿಧ ಪ್ರಕಾರದ ಕಲಾ ತಂಡಗಳು ಪಾಲ್ಗೊಳ್ಳಲಿವೆ. 11ಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು (ಮಾಜಿ ಪುರಸಭೆ) ಮೈದಾನದಲ್ಲಿ ವೇದಿಕೆ ಶಿಷ್ಟಾಚಾರದಂತೆ ಸರ್ಕಾರಿ ಕಾರ್ಯಕ್ರಮ ನಡೆಸಲಾಗುವುದು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುವುದು. ಜನಾಂಗದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಗುವುದು. ಪರಿಣಿತರಿಂದ ಉಪನ್ಯಾಸ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಸ್ವಾಗತ ಸಮಿತಿ, ಸ್ತಬ್ಧ ಚಿತ್ರ ಸಮಿತಿ, ಮೆರವಣಿಗೆ ಸಮಿತಿ, ಆಹಾರ ಸಮಿತಿ ಸೇರಿದಂತೆ ಹಲವಾರು ಉಪಸಮಿತಿಗಳನ್ನು ರಚಿಸಿ, ಕೆಲಸ ಕಾರ್ಯಗಳನ್ನು ಹಂಚಿಕೆ ಮಾಡಿ, ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸೂಚಿಸಲಾಗುವುದು. ವಾಲ್ಮೀಕಿ ಭವನದ ಕಾಮಗಾರಿಯನ್ನು ಷರತ್ತಿನನ್ವಯ ಮೂಲ ಗುತ್ತಿಗೆದಾರರು ನಿರ್ವಹಿಸಬೇಕು. ಅವರ ಬದಲಿಗೆ ಸ್ಥಳೀಯರು ನಿರ್ವಹಿಸುತ್ತಿದ್ದು, ಅನುಮೋದನೆಯಾಗಿರದ ಕೆಲವು ಕೆಲಸಗಳನ್ನು ನಿರ್ವಹಿಸಿದ್ದರಿಂದ ಮಾರ್ಗಸೂಚಿಯನ್ವಯ ಒಪ್ಪಲಾಗುವುದಿಲ್ಲ. ಶೀಘ್ರವಾಗಿ ಪೂರ್ಣಗೊಳಿಸುವಂತೆ ಮೂಲ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣಾಧಿಕಾರಿ ಪೂಲಯ್ಯ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜಪ್ಪ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರಾಚಪ್ಪ, ಡಿವೈಎಸ್ಪಿ ಮುರುಗಣ್ಣನವರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಸಮಾಜದ ಮುಖಂಡರಾದ ವಿ.ಎನ್. ಗಿರಿಮಲ್ಲಪ್ಪ, ಎನ್.ಕೆ. ಸದಾಶಿವಪ್ಪ, ಬಿ. ರಾಮಪ್ರಸಾದ್, ವಿ.ಕೆ. ಬಸಪ್ಪ, ಕೆ.ವಿ. ರುದ್ರಪ್ಪ, ಮೆಟಕಲ್ ಮಲ್ಲಿಕಾರ್ಜುನ, ಎಸ್‌ಪಿ ಸರ್ಕಲ್ ಮಲ್ಲಿಕಾರ್ಜುನ, ವಿ.ಎಸ್. ಶಿವಶಂಕರ, ಎನ್. ಸತ್ಯನಾರಾಯಣ, ಪಿ.ಜಗನ್, ಸಂಗನಕಲ್ಲು ವಿಜಯ ಕುಮಾರ್, ಎನ್.ಡಿ. ವೆಂಕಮ್ಮ, ಲೋಕರೆಡ್ಡಿ, ಮಲ್ಲಯ್ಯ, ಪೆಟ್ರೋಲ್ ಪಂಪ್ ತಿಮ್ಮಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.