ಬಳ್ಳಾರಿ

ಕಾಲಮಿತಿ ವಿಸ್ತರಣೆಗೆ ಕರವೇ ಆಗ್ರಹ

Published On :

ಬಳ್ಳಾರಿ: ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ದಾಖಲೆ ಸಲ್ಲಿಸಲು ನಿಗದಿಪಡಿಸಿರುವ ಕಾಲಾವಧಿಯನ್ನು ವಿಸ್ತರಿಸುವಂತೆ ಒತ್ತಾಯಿಸಿ ಕರವೇ (ನಾರಾಯನಗೌಡ ಬಣ) ಕಾರ್ಯಕರ್ತರು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದರು.
ನಗರದ ಹೊರವಲಯದ ಮುಂಡ್ರಿಗಿ ಪ್ರದೇಶದ ಬಳಿ ನಿರ್ಮಾಣವಾಗಲಿರುವ ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆ ಕಾರ್ಯ ಈಗಾಗಲೇ ನಡೆದಿದೆ. ಅ. 31ರೊಳಗೆ ಸೂಕ್ತ ದಾಖಲೆ ಹಾಗೂ ರು. 30 ಸಾವಿರ ಪಾವತಿಸುವಂತೆ ಫಲಾನುಭವಿಗಳಿಗೆ ತಿಳಿಸಿದೆ. ಆದರೆ, ಫಲಾನುಭವಿಗಳ ಪೈಕಿ ಭಾಗಶಃ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದವರೆ ಹೆಚ್ಚಿದ್ದು, ಒಂದೇ ಬಾರಿಗೆ ಇಷ್ಟೊಂದು ಹಣ, ದಾಖಲಾತಿ ಒದಗಿಸುವುದು ಕಷ್ಟ. ಕೇವಲ ಆದಾಯ, ಜಾತಿ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿಸಿ 21 ದಿನಗಳ ನಂತರ ಪ್ರಮಾಣ ಪತ್ರಗಳು ಕೈ ಸೇರುತ್ತವೆ. ಅಲ್ಲದೆ ಇನ್ನು ಬಹಳಷ್ಟು ಜನರು ಆಧಾರ್ ಕಾರ್ಡ್ ಪಡೆದಿಲ್ಲ. ಇದರಿಂದ ಫಲಾನುಭವಿಗಳು ಏನೂ ತೋಚದೆ ಕಂಗಾಲಾಗಿದ್ದು, ಫಲಾನುಭವಿಗಳ ಅನುಕೂಲಕ್ಕೆ ತಕ್ಕಂತೆ ಪ್ರಮಾಣ ಪತ್ರ ಮತ್ತು ಕಾಲಮಿತಿ ಸಡಿಲಿಕೆ ಮಾಡಬೇಕೆಂದು ಆಗ್ರಹಿಸಿದರು.
ಪಾಲಿಕೆ ವ್ಯಾಪ್ತಿಯ ಇನ್ನುಳಿದ ಸಾಕಷ್ಟು ಫಲಾನುಭವಿಗಳನ್ನು ಪತ್ತೆಹಚ್ಚಿ, ಮತ್ತೊಂದು ಪಟ್ಟಿ ತಯಾರಿಸಬೇಕು. ಆಶ್ರಯ ಯೋಜನೆ ಹಂಚಿಕೆ ಪಾರದರ್ಶಕವಾಗಿ ನಡೆಯಬೇಕು. ದಾಖಲೆ ಸಲ್ಲಿಸಲು ಸದ್ಯ ನೀಡಿರುವ ಅ. 31ನ್ನು ಪರಿಷ್ಕರಿಸಿ 90 ದಿನಗಳವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಅಶೋಕ್, ವೆಂಕಟಲಕ್ಷ್ಮಿ, ಕೆರೆಕೋಡಪ್ಪ, ನಾರಾಯಣಪ್ಪ, ಕರವೇ ಮಾಜಿ ಅಧ್ಯಕ್ಷ ಚಾನಾಳ್ ಶೇಖರ್, ನಗರಾಧ್ಯಕ್ಷ ಜಗನ್, ಕಾರ್ಯದರ್ಶಿ ಸಂಗನಕಲ್ಲು ವಿಜಯಕುಮಾರ್, ಭಾಸ್ಕರ್, ಗಡ್ಡಂ ತಿಮ್ಮಪ್ಪ, ಶಿವು, ಕಿಶೋರ್, ತಿಪ್ಪಾರೆಡ್ಡಿ, ಆತ್ಮನಂದರೆಡ್ಡಿ, ಹುಸೇನ್, ಈಶ್ವರ್‌ರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.