ಬಳ್ಳಾರಿ

ಸುದ್ದಿ ಸಂಕ್ಷೇಪ

Published On :

ದಸರಾ ಸಂಗೀತ ನೃತ್ಯ ಸಂಭ್ರಮ ಇಂದು
ಹೊಸಪೇಟೆ: ಮಾನವತಾ ಸೇವಾ ಟ್ರಸ್ಟ್ ಹಾಗೂ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ದಸರಾ ಸಂಗೀತ ನೃತ್ಯ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮ ನಗರದ ಟೌನ್ ರೀಡಿಂಗ್ ರೂಂ ಆವರಣದಲ್ಲಿ ಅ. 15ರಂದು ಸಂಜೆ 6-30ಕ್ಕೆ ನಡೆಯಲಿದೆ. ಕಾಂಗ್ರೆಸ್ ಮುಖಂಡ, ಹೂತೂರು ಚಾರಿಟೆಬಲ್ ಟ್ರಸ್ಟ್‌ನ ವ್ಯವಸ್ಥಾಪಕ ಎಚ್. ಅಬ್ದುಲ್ ವಹಾಬ್ ಕಾರ್ಯಕ್ರಮ ಉದ್ಘಾಟಿಸುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ಸಂಗೀತ ಪ್ರಾಧ್ಯಾಪಕ ಇಟಗಿ ವಿರೂಪಾಕ್ಷಪ್ಪ ಅಧ್ಯಕ್ಷತೆ ವಹಿಸುವರು. ಹೊಸಪೇಟೆ ಡಿವೈಎಸ್ಪಿ ಡಿ.ಡಿ. ಮಾಳಗಿ, ತಹಸೀಲ್ದಾರ್ ರಮೇಶ್ ಕೋನರೆಡ್ಡಿ, ತಾಪಂ ಇಒ ರಮೇಶ್ ತಳವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸುನಂದಾ, ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ನರಸಿಂಹಮೂರ್ತಿ ಅಪ್ಪಣ್ಣ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಲ್.ಡಿ. ಜೋಷಿ, ನಗರಸಭಾ ಸದಸ್ಯರಾದ ಎಂ.ಎಸ್. ರಘು, ಮಲ್ಲಪ್ಪ, ಚಿದಾನಂದ, ಗುಜ್ಜಲ್ ನಿಂಗಪ್ಪ, ಎ. ಬಸವರಾಜ, ಕಿಚಡಿ ಶ್ರೀನಿವಾಸ, ಬಿ. ಅಬೀದ್ ಹುಸೇನ್, ತೋರಣಗಲ್ಲಿನ ಕಾಂಗ್ರೆಸ್ ಮುಖಂಡ ಗುರುಪಾದಪ್ಪ, ತಾರಾನಗರದ ಸಮಾಜ ಸೇವಕ ಗಡಾದ ರಮೇಶ್, ಸ್ಥಳೀಯ ಜೆಸ್ಕಾಂ ಕಚೇರಿಯ ಕಿರಿಯ ಅಭಿಯಂತ ಕೆ.ಕೆ. ನಟರಾಜ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಆರ್ಮುಗಂ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮಗಳ ವಿಶೇಷ ಘಟಕ ಯೋಜನೆಯಡಿ ಮಾನವತಾ ಸೇವಾ ಟ್ರಸ್ಟ್ ತಂಡದವರಿಂದ ಸುಗಮ ಸಂಗೀತ, ಸಮೂಹ ಗಾಯನ ಕಾರ್ಯಕ್ರಮ ಮತ್ತು ಸ್ಥಳೀಯ ಪ್ರಾಯೋಜಿತ ಯೋಜನೆಯಡಿಯಲ್ಲಿ ಅಂಜು ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದು ಮಾನವತಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ಯಲ್ಲಪ್ಪ ಭಂಡಾರ್‌ದಾರ್ ತಿಳಿಸಿದ್ದಾರೆ.
ಡಿ. ರಾಮಣ್ಣ ನೇಮಕ
ಬಳ್ಳಾರಿ: ತಾಲೂಕಿನ ಮೋಕ-ರೂಪನಗುಡಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಡಿ. ರಾಮಣ್ಣ ನೇಮಕವಾಗಿದ್ದಾರೆ. ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ಅಧ್ಯಕ್ಷ ಎಚ್. ಅರ್ಜುನ್ ಈ ಕುರಿತು ನೇಮಕದ ಆದೇಶ ಹೊರಡಿಸಿದ್ದು, ಡಿ. ರಾಮಣ್ಣ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಪಕ್ಷ ಬಲಪಡಿಸುವಂತೆ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.