ಹಗರಿಬೊಮ್ಮನಹಳ್ಳಿಯಲ್ಲಿ ದಸರಾ ಆಚರಣೆ
ಹಗರಿಬೊಮ್ಮನಹಳ್ಳಿ: ಇದೇ ಮೊದಲ ಬಾರಿಗೆ ಬಿಸಿಲೂರು ಹಗರಿಬೊಮ್ಮನಹಳ್ಳಿ ಪಟ್ಟಣ ಹಾಗೂ ತಾಲೂಕಿನಲ್ಲಿ ಭಾನುವಾರ ದಿನವೇ ಮುಂಜಾನೆ ಆಯುಧಪೂಜೆ ಹಾಗೂ ಮಧ್ಯಾಹ್ನದಿಂದ ವಿಜಯದಶಮಿ ಎರಡು ಹಬ್ಬವನ್ನು ಒಂದೇ ದಿನ ಆಚರಿಸಲಾಯಿತು. ಆದರೆ ಭಾನುವಾರ ಶೇ. 10ರಷ್ಟು ಜನ ಮಾತ್ರ ಆಯುಧಪೂಜೆ ಮತ್ತು ವಿಜಯದಶಮಿಯನ್ನು ಏಕಕಾಲಕ್ಕೆ ಆಚರಿಸಿದರೆ ಇತ್ತ ಶೇ. 90ರಷ್ಟು ಜನರು ಭಾನುವಾರ ರಾತ್ರಿ ಆಯುಧಪೂಜೆ ಮಾಡಿ, ಸೋಮವಾರ ವಿಜಯದಶಮಿಯನ್ನು ಆಚರಿಸಿದರು. ವಿವಿಧ ಪಂಚಾಂಗಗಳ ಪ್ರಭಾವವೇ ಪಟ್ಟಣದಲ್ಲಿ ದಸರಾ ಆಚರಣೆಯಲ್ಲಿ ಗೊಂದಲ ಉಂಟಾಗಲು ಕಾರಣ ಎನ್ನಲಾಗಿದೆ.
ಹಬ್ಬವನ್ನು ಯಾವ ದಿನ ಆಚರಿಸಬೇಕೆಂಬ ಗೊಂದಲ ಹಾಗೂ ದಿನಸಿ, ತರಕಾರಿ ಮಂಡಿಯಲ್ಲಿನ ಬೆಲೆ ಏರಿಕೆಯ ಬಿಸಿಯ ನಡುವೆಯೇ ಇತ್ತ ಹಗರಿಬೊಮ್ಮನಹಳ್ಳಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ದಸರಾ ಹಬ್ಬವನ್ನು ಜನತೆ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಮುದ್ರಣಾಲಯಗಳು, ಕಂಪ್ಯೂಟರ್ ಪ್ರಿಂಟರ್ಸ್, ವೆಲ್ಡಿಂಗ್ ಮಿಷನ್, ಎಂಜಿನಿಯರಿಂಗ್ ವರ್ಕ್ಸ್ ಸೇರಿದಂತೆ ಯಂತ್ರಗಳ ಸಹಾಯದಿಂದ ವ್ಯವಹರಿಸುವವರು ಭಾನುವಾರ ರಾತ್ರಿ ಆಯುಧಪೂಜೆಯನ್ನು ಸಕುಟುಂಬ ಸಮೇತರಾಗಿ ನೆರವೇರಿಸಿದರು. ವಾಹನಗಳಿಗೆ ಮಾಲೀಕರು, ಬಾಳೆಕಂಬ, ಮಾವಿನತೋರಣ, ವಿವಿಧ ಹೂವಿನಿಂದ ಅಲಂಕಾರಿಕ ರಸ್ತೆಗಳ ಮೇಲೆ ಮೆರವಣಿಗೆ ಮಾಡಿದರು.
ಪಟ್ಟಣದ ರಾಮನಗರದ ಗುರುಭವನದ ಹತ್ತಿರದ ಶ್ರೀ ಆಂಜನೇಯಸ್ವಾಮಿ, ಶ್ರೀದೇವಿ ನರೇಗಲ್ ದುರ್ಗಮ್ಮ , ವಾಸವಿದೇವಿ, ಸತ್ಯನಾರಾಯಣಸ್ವಾಮಿ ದೇವಸ್ಥಾನಗಳ ಪಲ್ಲಕ್ಕಿ ಉತ್ಸವ ಭಾನುವಾರ ಸಂಜೆ ಅದ್ಧೂರಿಯಾಗಿ ಜರುಗಿತು. ದೇವರ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆಯಲ್ಲಿ ತಂದು ರಾಮನಗರ ಶಾಲೆಯ ಹತ್ತಿರದ ಬನ್ನಿಮಂಟಪದಲ್ಲಿ ಪೂಜೆ ಸಲ್ಲಿಸಿ, ಅನಂತರ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು. ಇತ್ತ ಪಟ್ಟಣದ ಶ್ರೀದೇವಿಗಾಳೆಮ್ಮ, ಈಶ್ವರಸ್ವಾಮಿ, ಹಗರಿಅಂಜನೇಯಸ್ವಾಮಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಹಬ್ಬದ ನಿಮಿತ್ತ ವಿಶೇಷ ಪೂಜೆ ಜರುಗಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

