ನವೆಂಬರ್ನಲ್ಲಿ ಬಸವಣ್ಣ ಪುತ್ಥಳಿ ಅನಾವರಣ
ಹಗರಿಬೊಮ್ಮನಹಳ್ಳಿ: ನವೆಂಬರ್ ಎರಡನೇ ವಾರದಲ್ಲಿ ಪಟ್ಟಣದ ಬಸವೇಶ್ವರ ಬಜಾರ್ನಲ್ಲಿ ಪ್ರತಿಷ್ಠಾಪಿಸಿರುವ ಆಶ್ವಾರೂಢ ಬಸವಣ್ಣನವರ ಪುತ್ಥಳಿಯ ಅನಾವರಣ ಕಾರ್ಯಕ್ರಮವನ್ನು ಆದ್ಧೂರಿಯಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಗುರುವಾರ ಹಳೇ ಹಗರಿಬೊಮ್ಮನಹಳ್ಳಿಯಲ್ಲಿನ ಶಾಸಕ ಭೀಮಾನಾಯ್ಕ ಫಾರಂಹೌಸ್ನಲ್ಲಿ ಜರುಗಿದ ವೀರಶೈವ ಮುಖಂಡರ, ವಿವಿಧ ಸಮಾಜಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶಾಸಕರು, ಕಾಯಕ ಯೋಗಿ ಬಸವಣ್ಣನವರ ಆಶ್ವಾರೂಢ ಕಂಚಿನ ಪುತ್ಥಳಿಯನ್ನು ಲೋಕೋಪಯೋಗಿ ಇಲಾಖೆ ಸ್ಥಾಪಿಸಿದೆ. ಲೋಕಾರ್ಪಣೆ ಕಾರ್ಯಕ್ರಮದ ನಿಮಿತ್ತ ಗಣ್ಯರು, ಮಠಾಧೀಶರನ್ನು ಭೇಟಿಯಾಗಿ ಅವರ ಬಳಿ ಚರ್ಚಿಸಿದ ನಂತರ ಕಾರ್ಯಕ್ರಮದ ದಿನಾಂಕ ಅಂತಿಮಗೊಳಿಸಲಾಗುವುದು. ಬಹುಶಃ ನವೆಂಬರ್ 2ನೇ ವಾರದಲ್ಲಿ ಪುತ್ಥಳಿಯ ಅನಾವರಣ ನಡೆಯಲಿದೆ ಎಂದರು.
ಸಿಎಂಗೆ ಆಹ್ವಾನ: ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ನಾಯ್ಕ, ಜಿಲ್ಲೆಯ ಎಲ್ಲ ಶಾಸಕರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ, ಸಾಲಿ ಸಿದ್ದಯ್ಯಸ್ವಾಮಿ, ಗದಗ ತೊಂಟದಾರ್ಯಶ್ರೀ, ಪಂಚಮಸಾಲಿ ಸಮಾಜದ ಸಿದ್ಧಲಿಂಗ ಶ್ರೀಗಳು, ವಾಲ್ಮೀಕಿ ಗುರುಪೀಠದ ಶ್ರೀಗಳು, ಕನಕ ಗುರುಪೀಠದ ಶ್ರೀಗಳು, ಕೊಟ್ಟೂರುಸ್ವಾಮಿ ಮಠದ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಸಭೆ ತೀರ್ಮಾನಿಸಿತು.
ಸಭೆಯಲ್ಲಿ ವೀರಶೈವ ಪಂಚಮಸಾಲಿ ಸಮಾಜದ ಬಾವಿ ಬೆಟ್ಟಪ್ಪ, ತಾಲೂಕಾಧ್ಯಕ್ಷ ಅಕ್ಕಿ ಶಿವಣ್ಣ, ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ, ಜಿಪಂ ಸದಸ್ಯ ರೋಗಾಣಿ ಹುಲುಗಪ್ಪ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ, ಕೋಗಳಿ ಸಿದ್ದಲಿಂಗನಗೌಡ, ಹೂಗಾರ ಮಲ್ಲಣ್ಣ, ವೈ. ಮಲ್ಲಿಕಾರ್ಜುನ್, ಬನ್ನಿಗೋಳ ವೆಂಕಣ್ಣ, ಎಚ್.ಎಂ. ಚೋಳರಾಜ, ಎಚ್.ಪಿ. ಶಿವಶಂಕರಗೌಡ, ಬಾದಾಮಿ ಮೃತ್ಯುಂಜಯ, ಬಾದಾಮಿ ಚನ್ನಬಸವರಾಜ, ಹನಸಿ ಸಿದ್ದೇಶ, ವಾಲ್ಮೀಕಿ ಸಂಘದ ಡಾ. ಸತ್ಯನಾರಾಯಣ, ತಾಪಂ ಸದಸ್ಯ ಉಪ್ಪಾರ ಬಾಲಪ್ಪ, ಭಾರತಮ್ಮ ಬೆಲ್ಲದ್, ಆರ್ಯವೈಶ್ಯ ಸಂಘದ ಹೆಗ್ಡಾಳ ಶ್ರೀನಿವಾಸ, ಲಡಕನಬಾವಿ ಎಂಜೆಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

