ಬಂದೂಕು ತರಬೇತಿ ಶಿಬಿರಕ್ಕೆ ತೆರೆ
ಬಳ್ಳಾರಿ: ಅಕ್ಟೋಬರ್ 4ರಿಂದ 12ರ ವರೆಗೆ ಹಮ್ಮಿಕೊಂಡಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಗರದ ಡಿಎಆರ್ ಮೈದಾನದಲ್ಲಿ ಜರುಗಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್‌ಸಿಂಗ್ ರಾಥೋಡ್ ಹಾಗೂ ಹೆಚ್ಚುವರಿ ಎಸ್ಪಿ ಸಿ.ಕೆ. ಬಾಬಾ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು. ನಗರ ಡಿಎಸ್ಪಿ ಟಿ.ಎಸ್. ಮುರುಗಣ್ಣನವರ್ ಕಾರ್ಯಕ್ರಮದಲ್ಲಿ ಮಾತನಾಡಿ, ತರಬೇತಿ ಪಡೆದ ನಂತರ ಪಿಸ್ತೂಲ್ ಹಾಗೂ ಬಂದೂಕು ಲೈಸೆನ್ಸ್ ತೆಗೆದುಕೊಂಡು ತಮ್ಮ ಹಾಗೂ ಅಕ್ಕ ಪಕ್ಕದವರ ಆಸ್ತಿ ರಕ್ಷಣೆ ಹಾಗೂ ಪ್ರಾಣ ರಕ್ಷಣೆಗಾಗಿ ಉಪಯೋಗಿಸಬೇಕು. ಸಮಾಜಘಾತುಕ ಕಾರ್ಯಗಳಿಗೆ ಬಳಕೆ ಮಾಡಕೂಡದು ಎಂದರು. ಡಿಎಆರ್ ಡಿಎಸ್ ಎಸ್.ಆರ್. ಯಾದವ್ ಮಾತನಾಡಿದರು. ತರಬೇತಿಯ ಕೊನೆಯ ದಿನ ಓಬಳಾಪುರಂ ಸಮೀಪದಲ್ಲಿ ಶಿಬಿರಾರ್ಥಿಗಳಿಗೆ ಸ್ಪರ್ಧೆಯನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ 38 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ರಾಘವೇಂದ್ರ ಪಡೆದುಕೊಂಡರೆ, ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಮಂಜುನಾಥ, ಕೊಳಗಲ್ಲು ವಿಕ್ರಂ ಪಡೆದರು. ಮಹಿಳೆಯರ ವಿಭಾಗದಲ್ಲಿ ಸೌಮ್ಯಾ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಬಿ. ಸೌಮ್ಯಾ, ಶ್ವೇತಾ ಸಾವನೂರು ಪಡೆದಿದ್ದಾರೆ. ಹಿರಿಯ ನಾಗರಿಕರಲ್ಲಿ ದಾಮು ನಾಯಕ್ ಸಹ ಸ್ಫರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದರು. ಶಿಬಿರದಲ್ಲಿ 120ಕ್ಕೂ ಹೆಚ್ಚು ಜನ ತರಬೇತಿ ಪಡೆದರು. ಗ್ರಾಮೀಣ ಡಿಎಸ್ಪಿ ರುದ್ರಮುನಿ, ನಗರದ ಎಲ್ಲ ಪಿಎಸೈಗಳು ಹಾಗೂ ಶಿಬಿರಾರ್ಥಿಗಳು, ಪಾಲಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

