ಬಳ್ಳಾರಿ

ಸೀಮಾಂಧ್ರ ಹೋರಾಟದಿಂದ ಕೋಟಿ ನಷ್ಟ

Published On :

ಬಳ್ಳಾರಿ: ಸಾರಿಗೆ ಸಂಪರ್ಕದಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಕರ್ನಾಟಕ- ಆಂಧ್ರ ರಾಜ್ಯಗಳ ಸಾರಿಗೆ ಸಂಸ್ಥೆಗಳನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆಂಧ್ರಪ್ರದೇಶದ ಅನಂತಪುರ ವಿಭಾಗೀಯ ವ್ಯವಸ್ಥಾಪಕ ಜಿ. ವೆಂಕಟೇಶ್ವರರಾವ್ ತಿಳಿಸಿದರು.
ನಗರಕ್ಕೆ ಗುರುವಾರ ಭೇಟಿ ನೀಡಿದ ಅವರು, ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿದರು. ಸೀಮಾಂಧ್ರದಲ್ಲಿ ನಡೆದ ಸಮೈಖ್ಯಾಂಧ್ರ ಹೋರಾಟದಿಂದಾಗಿ ಜು.30ರಿಂದ ಅ.12ರವರೆಗೆ ಉಭಯ ರಾಜ್ಯಗಳ ಸಾರಿಗೆ ಇಲಾಖೆಗಳಿಗೆ ಕೋಟ್ಯಂತರ ಆದಾಯ ನಷ್ಟವುಂಟಾಗಿದೆ. ಬಳ್ಳಾರಿ, ಹೊಸಪೇಟೆ, ದಾವಣಗೆರೆ, ಕೊಪ್ಪಳ, ಬಾಗಲಕೋಟೆ, ಹುಬ್ಬಳ್ಳಿ, ಬೆಂಗಳೂರು, ಕೋಲಾರ ಇನ್ನಿತರೆಡೆಗಳಿಂದ ಆಂಧ್ರಕ್ಕೆ ನಿತ್ಯ 116 ಬಸ್‌ಗಳು ಸಂಚರಿಸುತ್ತಿದ್ದು, ಪ್ರತಿದಿನ 3 ಲಕ್ಷನಂತೆ ಬಂದ್ ಆದ 76 ದಿನಕ್ಕೆ ಅಂದಾಜು 3 ಕೋಟಿ ನಷ್ಟ ಸಂಭವಿಸಿದೆ. ಈ ಪೈಕಿ ಆಂಧ್ರಕ್ಕೆ ಅತಿಹೆಚ್ಚು ಬಸ್‌ಗಳನ್ನು ಒದಗಿಸುತ್ತಿದ್ದ ಬಳ್ಳಾರಿ ವಿಭಾಗಕ್ಕೆ ಹೆಚ್ಚು ನಷ್ಟವುಂಟಾಗಿದೆ ಎಂದರು.
ಅದೆ ರೀತಿ ಆಂಧ್ರದಿಂದಲೂ ನಿತ್ಯ 48 ಬಸ್‌ಗಳು ಬಳ್ಳಾರಿಗೆ ಸಂಚರಿಸುತ್ತಿದ್ದು, 75 ದಿನಕ್ಕೆ 55 ಕೋಟಿ ನಷ್ಟವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.