ಸುದ್ದಿ ಸಂಕ್ಷೇಪ
ವಿದ್ಯಾರ್ಥಿಗಳಿಗೆ ಜೀವನ ಕೌಶಲ ತರಬೇತಿ ಅವಶ್ಯ
ಬಳ್ಳಾರಿ: ವಿದ್ಯಾರ್ಥಿಗಳು ಉಜ್ವಲ ಭವಿಷ್ಯಕ್ಕಾಗಿ ಜೀವನ ಕೌಶಲಗಳ ತರಬೇತಿ ಪಡೆಯುವುದು ಅವಶ್ಯಕತೆ ಬಹಳ ಇದೆ ಎಂದು ಅಸೆಂಟ್ ಸಂಸ್ಥೆಯ ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದರು. ನಗರದ ಶ್ರೀ ಗುರು ತಿಪ್ಪೇರುದ್ರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೀವನ ಕೌಶಲ ವಿಕಾಸ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಎಲ್ಲ ವೃತ್ತಿಗಳಿಗೂ ಪದವಿ ಅವಶ್ಯವಿದ್ದರೂ, ವಿದ್ಯಾರ್ಥಿಗಳು ತಾವು ಪಡೆದ ಕೌಶಲಗಳಿಂದ ಮಹತ್ತರ ವೃತ್ತಿ ಪಡೆಯಲು ಹಾಗೂ ನಿರ್ವಹಿಸಲು ಸಹಕಾರಿ ಎಂದರು. ತರಬೇತಿಯಲ್ಲಿ ನೀಡಲಾಗುವ ಕಮ್ಯುನಿಕೇಷನ್ ಸ್ಕಿಲ್ಸ್, ಸೆಲ್ಫ್ ಅವೇರ್ನೆಸ್, ಸ್ಟ್ರೆಸ್ ಮ್ಯಾನೇಜ್ಮೆಂಟ್, ಸೃಜನಶೀಲತೆ, ಮಾನವೀಯ ಮೌಲ್ಯಗಳು ಸೇರಿದಂತೆ ಇತರೆ ವಿಷಯಗಳ ಕುರಿತು ನೀಡಲಾಗುವ ಮಾಹಿತಿಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಬಳ್ಳಾರಿಯ ವಿ.ಎಸ್.ಕೆ. ವಿವಿಯ ಕುಲಪತಿ ಡಾ. ಮಂಜಪ್ಪ ಡಿ. ಹೊಸಮನೆ ಮಾತನಾಡಿ, ಜೀವನ ಕೌಶಲವನ್ನು ಕಲಿಯಲು ಅವಕಾಶಗಳು ಕಡಿಮೆ ಇದ್ದು, ಈ ತರಬೇತಿಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಅಸೆಂಟ್ ಸಂಸ್ಥೆಯ ಅಧ್ಯಕ್ಷ ರಂಗನಾಥ ಮಾತನಾಡಿದರು. ವಿದ್ಯಾರ್ಥಿಗಳಾದ ಅಕ್ಷತಾ, ಪ್ರಿಯಾಂಕ, ರಮ್ಯ ಕಿರಣ್, ಅನುಷ, ಪವನ್ ಇವರು ಐಸ್ಬ್ರೇಕರ್, ಸೃಜನಶೀಲತೆ, ಸಮಯಪಾಲನೆ ಇತ್ಯಾದಿ ವಿಷಯಗಳ ಬಗ್ಗೆ ವೀಡಿಯೋ ಕ್ಲಿಪಿಂಗ್ ಮೂಲಕ ಪ್ರಸ್ತುತಪಡಿಸಿದರು. ಎಸ್.ಜಿ.ಟಿ. ಕಾಲೇಜಿನ ಅಧ್ಯಕ್ಷ ಎಸ್.ಎನ್. ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಸ್.ಜಿ.ಟಿ. ಕಾಲೇಜಿನ ಕಾರ್ಯದರ್ಶಿ ಜಿ.ನಾಗರಾಜ ಸ್ವಾಗತಿಸಿದರು. ಲೀಲಾವತಿ ಮತ್ತು ಚಂದ್ರಕಾಂತ್ ನಿರೂಪಿಸಿದರು. ಎಸ್.ಬಿ. ಮಲ್ಲಿಕಾರ್ಜುನ ವಂದಿಸಿದರು.
ಪೊಲೀಸ್ ಹುತಾತ್ಮ ದಿನಾಚರಣೆ ನಾಳೆ
ಬಳ್ಳಾರಿ: ಅ. 21ರಂದು ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚೇತನ್ ಸಿಂಗ್ ರಾಠೋರ್ ತಿಳಿಸಿದ್ದಾರೆ. ಕಾರ್ಯಕ್ರಮವು ಅಂದು ಬೆಳಗ್ಗೆ 8 ಗಂಟೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ನಾಯಕ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸ್ಮಾರಕಕ್ಕೆ ಪುಷ್ಪಗುಚ್ಛವನ್ನಿರಿಸಿ ಗೌರವ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

