ಬಳ್ಳಾರಿ

ಕಲಬೆರಕೆ ಬೀಜ: ಪರಿಹಾರ ನೀಡಲು ಒತ್ತಾಯ

Published On :

ಬಳ್ಳಾರಿ: ಬೀಜೋ ಸೀತಲ್ (ಕೈಲಾಸ್ ಸೀಡ್ಸ್) ಬಿಎಸ್‌ಎಸ್ 883 ಕಂಪನಿಯ ಕಲಬೆರಕೆ ಮೆಣಸಿನಕಾಯಿ ಬಿತ್ತನೆ ಬೀಜದ ಬಳಕೆಯಿಂದ ಸರಿಯಾಗಿ ಬೆಳೆಬಾರದೆ ನಷ್ಟವಾಗಿದ್ದು, ಕೂಡಲೆ ಕಂಪನಿಯಿಂದ ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಆಗ್ರಹಿಸಿ ಬಳ್ಳಾರಿ ತಾಲೂಕಿನ ಮೆಣಸಿನಕಾಯಿ ಬೆಳೆಗಾರರು ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಬೆಂಚಿಕೊಟ್ಟಾಲ್, ಬುರ್ರನಾಯಕನಹಳ್ಳಿ, ಕೊಳಗಲ್, ಮಂಗಮ್ಮ ಕ್ಯಾಂಪ್, ಎತ್ತಿನಬೂದಿಹಾಳ, ವಿಜಯಪುರ ಕ್ಯಾಂಪ್ ಸೇರಿದಂತೆ ಇತರೆ ಭಾಗದ ರೈತರು ಉತ್ತಮ ಫಸಲು ನೀಡುತ್ತದೆ ಎಂಬ ಕಾರಣಕ್ಕೆ ಬೀಜೋ ಸೀತಲ್(ಕೈಲಾಸ್ ಸೀಡ್ಸ್) ಬಿಎಸ್‌ಎಸ್ 883 ಕಂಪನಿಯ ಕಲಬೆರಕೆ ಮೆಣಸಿನಕಾಯಿ ಬೀಜ ಬಿತ್ತಿದ್ದರು. ಆದರೆ ರೈತರಿಗೆ ಮೋಸ ಮಾಡಿರುವ ಕಂಪನಿಯು ಒಂದು ಲಾಟ್ ಮಾತ್ರ ಕಲಬೆರಕೆ ಬೀಜವನ್ನು ನೀಡಿದ್ದಾರೆ. ಇದರಿಂದ ಈಗಾಗಲೇ ರು. 50 ಸಾವಿರದಿಂದ 1 ಲಕ್ಷ ಬೆಳೆ ಬರಬೇಕಾದ ರೈತರಿಗೆ ಇನ್ನೂ ನಯಾ ಪೈಸೆ ಬೆಳೆ ಬಂದಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಪರಿಹಾರ ಕೊಡಿಸಿ: ಬಿತ್ತನೆ ಮಾಡಿರುವ ಮೆಣಸಿನಕಾಯಿ ಬೀಜದಿಂದ ಐದು ರೀತಿ ಜಾತಿಯ ಸಸಿಗಳು ಬೆಳೆದಿವೆ. ಕೆಲ ಗಿಡಗಳು ಮೆಣಸಿನಕಾಯಿ ಬಿಟ್ಟಿದ್ದರೂ, ಅವು ಚಿಕ್ಕದಾಗಿ ಬಿಟ್ಟಿವೆ. ಸರಿಯಾಗಿ ಕೂಡ ಕಾಪು ಬಂದಿಲ್ಲ. ಇನ್ನು ಕೆಲ ಸಸಿಗಳು ಮೆಣಸಿನಕಾಯಿಗಳನ್ನೇ ಬಿಟ್ಟಿಲ್ಲ. ಈಗಾಗಲೇ ಪ್ರತಿ ಎಕರೆಗೆ ರು. 60ರಿಂದ 70 ಸಾವಿರ ಖರ್ಚು ಮಾಡಲಾಗಿದೆ. ಕಂಪನಿ ಕಲಬೆರಕೆ ಬೀಜ ನೀಡಿದ್ದರಿಂದ ವರ್ಷದ ಬೆಳೆ ನಷ್ಟವಾಗಿದೆ. ಹೀಗಾಗಿ ಪರಿಹಾರ ಕೊಡಿಸುವಂತೆ ರೈತರು ಆಗ್ರಹಿಸಿದರು.
ಕಂಪನಿಯಿಂದಾದ ತಪ್ಪನ್ನು ಕಂಪನಿಯ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಆದರೆ ರೈತರಿಗೆ ಪರಿಹಾರ ನೀಡಲು ಆಸಕ್ತಿ ತೋರುತ್ತಿಲ್ಲ. ಅದು ಕೊಟ್ಟರು ಅಲ್ಪ ಪ್ರಮಾಣದಲ್ಲಿ ನೀಡುತ್ತೇವೆ ಎಂಬ ಹಾರಿಕೆ ಉತ್ತರ ನೀಡುತ್ತಾರೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಗತ್ಯ ಪರಿಹಾರವನ್ನು ಕಂಪನಿಯಿಂದ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ರೈತರಾದ ವೆಂಕಟಪ್ಪ ನಾಯ್ಡು, ಕೆ. ಸಂಜೀವಪ್ಪ, ಶಂಕರಯ್ಯ, ಬಸಯ್ಯ, ಶಿವರಾಮ, ಸಿದ್ದಪ್ಪ, ಎಸ್. ವೀರೇಶ, ಕೆ.ಪಿ. ಮಂಜಣ್ಣ, ಬಾಬು, ರಾಮಾಂಜನಿ, ಎಂ. ಶ್ರೀಕಾಂತ್, ಎ. ಅಂಜಿ, ಕೆ. ವೆಂಕಟೇಶ್ವರರಾವು, ಶ್ರೀನಿವಾಸ್, ಎ. ವೆಂಕಟೇಶ್ವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.